More

    ಪಠ್ಯಪುಸ್ತಕ ಕೇಸರೀಕರಣ ಸಲ್ಲ

    ಸಿಂಧನೂರು: ಪಠ್ಯಪುಸ್ತಕಗಳಲ್ಲಿ ಮನುವಾದಿ ಚಿಂತನೆಗಳ ಪಾಠಗಳನ್ನು ಸೇರಿಸುವ ಮೂಲಕ ಶಿಕ್ಷಣವನ್ನು ಕೇಸರಿಣಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಜನತಾಂತ್ರಿಕ ಶಿಕ್ಷಣಕ್ಕಾಗಿ ಜಾಗೃತ ನಾಗರಿಕರ ವೇದಿಕೆ ಹಾಗೂ ಮನುಜಮತ ಬಳಗದಿಂದ ಸೋಮವಾರ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ನಂತರ ಶಿರಸ್ತೇದಾರ್ ಚಂದ್ರಶೇಖರಗೆ ಮನವಿ ಸಲ್ಲಿಸಲಾಯಿತು.

    ಕುವೆಂಪು ಬರೆದಿರುವ ನಾಡಗೀತೆಯನ್ನು ಅಪಮಾನಿಸಿರುವ ರೋಹಿತ್ ಚಕ್ರತೀರ್ಥಗೆ ಪಠ್ಯ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಿದ್ದು ಸರಿಯಲ್ಲ. ಸಮಿತಿಯ ಒಂಬತ್ತು ಸದಸ್ಯರಲ್ಲಿ ಎಂಟು ಸದಸ್ಯರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಬಹುತ್ವ ಭಾರತದ ಆಶಯ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಗಾಳಿಗೆ ತೂರಲಾಗಿದೆ. ಭಗತ್ ಸಿಂಗ್, ಸಾರಾ ಅಬೂಬಕರ್, ಪಿ.ಲಂಕೇಶ್ ಸೇರಿ ಸಮಾಜದ ಸ್ವಾಸ್ಥ್ಯಕ್ಕೆ ಪೂರಕವಾದ ಹಲವರ ಪಠ್ಯಗಳನ್ನು ಕೈಬಿಟ್ಟು ಮಹಿಳೆಯರ ಬಗ್ಗೆ ಕೀಳು ಅಭಿರುಚಿ ವ್ಯಕ್ತಪಡಿಸಿರುವ ಬನ್ನಂಜೆ ಗೋವಿಂದಾಚಾರ್ಯ ಲೇಖನ ಸೇರಿಸಲಾಗಿದೆ. ಇಂಥ ಪಠ್ಯಗಳನ್ನು ಕೈಬಿಡಬೇಕು.

    ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪರಿಶೀಲನಾ ಸಮಿತಿಯನ್ನು ವಜಾಗೊಳಿಸಬೇಕು. ಸಮಿತಿಯ ಶಿಫಾರಸುಗಳನ್ನು ಅಮಾನ್ಯಗೊಳಿಸಬೇಕು, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts