More

    ಎಂಟು ಜ್ಞಾನಪೀಠ ಪಡೆದ ಹೆಮ್ಮೆಯ ನಾಡು, ಶಾಸಕ ವೆಂಕಟರಾವ ನಾಡಗೌಡ ಬಣ್ಣನೆ

    ಸಿಂಧನೂರು: ಕನ್ನಡ ಭಾಷೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಸಂಸ್ಕೃತಿ, ವೈವಿಧ್ಯತೆಯ ಆಗರವಾಗಿದೆ. ಕನ್ನಡಿಗರು ಹೃದಯ ವೈಶಾಲ್ಯ ಹೊಂದಿದ್ದು ಸ್ವಾಭಿಮಾನಿಗಳೂ ಆಗಿದ್ದಾರೆ ಎಂದು ಶಾಸಕ ವೆಂಕಟರಾವ ನಾಡಗೌಡ ಹೇಳಿದರು.

    ನಗರದ ತಾಲೂಕು ಆಡಳಿತಸೌಧ ಆವರಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಹೆಮ್ಮೆ ಕರ್ನಾಟಕಕ್ಕಿದೆ. ಜಗತ್ತಿಗೆ ಕಾಯಕದ ಕಲ್ಪನೆ ಕೊಟ್ಟ ಬಸವಣ್ಣ ಹುಟ್ಟಿದ ನಾಡು ಇದಾಗಿದೆ. ಭಾಷೆ ನಶಿಸಿದರೆ ನಾಡು ಅಂಧಃಪತನವಾದಂತೆ. ಭಾಷೆ ಉಳಿಯಬೇಕಾದರೆ ಅದರ ಬಳಕೆ ಹೆಚ್ಚಾಗಬೇಕು. ಅನ್ಯ ಭಾಷೆಗಳನ್ನು ಗೌರವಿಸಬೇಕು. ಇಂಗ್ಲಿಷ್ ವ್ಯಾಮೋಹಕ್ಕೊಳಗಾಗಿ ಕನ್ನಡ ಮರೆಯಬಾರದು ಎಂದು ತಿಳಿಸಿದರು.

    ತಹಸೀಲ್ದಾರ್ ಅರುಣ್ ದೇಸಾಯಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಾಡಿನ ನೆಲ, ಜಲ, ಭಾಷೆ ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts