More

    ಸ್ವಾರ್ಥದ ಬೆನ್ನುಬಿದ್ದ ಮನುಷ್ಯನ ಗರ್ವದ ಭಕ್ತಿಯಿಂದ ದ್ರವ್ಯದ ಕೇಡು

    ಹಾರೂಗೇರಿ: ವಚನ ಸಾಹಿತ್ಯದ ಬೆಳಕಿಗೆ ಮಾತ್ರ ವಿಶ್ವಧರ್ಮ ಪ್ರವಚನ ಮಾಡುವ ಯುಕ್ತಿ ಮತ್ತು ಶಕ್ತಿ ಇದೆ ಎಂದು ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಶ್ರೀ ಹೇಳಿದರು.

    ಪಟ್ಟಣದಲ್ಲಿ ಶರಣ ವಿಚಾರ ವಾಹಿನಿಯಿಂದ ಕರ್ನಾಟಕ ಸುವರ್ಣ ಸಂಭ್ರಮ, ಲಂಡನ್‌ನಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ ಪ್ರತಿಷ್ಠಾಪಿಸಿದ 8ನೇ ವರ್ಷದ ಸವಿನೆನಪಿಗಾಗಿ ಹಾಗೂ ಶರಣ ಸಂಸ್ಕೃತಿ ಉತ್ಸವದ 34ನೇ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ವಿಶ್ವಧರ್ಮ ಪ್ರವಚನದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಆಸೆ ಎಂಬ ಪಿಶಾಚಿಯ ಬೆನ್ನು ಹತ್ತಬಾರದು, ಗರ್ವದ ಭಕ್ತಿಯಿಂದ ದ್ರವ್ಯದ ಕೇಡಾಗುತ್ತದೆ ಎಂದರು.

    ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್.ಮಠಪತಿ ಮಾತನಾಡಿ, 34 ವರ್ಷ ಅವ್ಯಾಹತವಾಗಿ ಶರಣ ಸಂಸ್ಕೃತಿ ಬಿತ್ತುತ್ತ ಸಾಗುತ್ತಿರುವ ಶರಣ ವಿಚಾರ ವಾಹಿನಿ ಜನರ ಹದಯದಲ್ಲಿ ನೋಂದಣಿಗೊಂಡ ಸಂಸ್ಥೆಯಾಗಿದೆ. ಲಿಂಗಾನಂದ ಶ್ರೀಗಳ ಗರಡಿಯಲ್ಲಿ ಅರಳಿದ ಬಸವ ಬೆಳಕಿನ ಚಿತ್ಕಳೆ ನಿಜಗುಣಾನಂದರು ಕಳಂಕ ಅಂಟಿಸಿಕೊಳ್ಳದ ನಿರ್ಭಯಾನಂದರಾಗಿದ್ದಾರೆ. ಅವರ ಪ್ರವಚನ ರಸಗಂಗೆಯಲ್ಲಿ ಮಿಂದು ಮಡಿಯಾಗೋಣ ಎಂದರು.

    ಬಸವ್ವ ದಾಸರ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ನದಿ ಇಂಗಳಗಾವಿಯ ಸ್ವಾಮೀಜಿ, ಡಾ.ಕಿರಣ ಹಿಟ್ಟಣಗಿ, ಡಾ.ಬಸವರಾಜ ಹೊಸಪೇಟಿ, ರಾಜಶೇಖರ ಪಾಟೀಲ, ಅನುಸೂಯಾ ಮುಳವಾಡ, ಮಹಾದೇವಿ ಪಾಟೀಲ, ಎಸ್.ಎಲ್.ಬಾಡಗಿ, ರವೀಂದ್ರ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts