More

    ಕನ್ನಡ ಭಾಷೆ ಉಳಿಸಲು ವಿಶೇಷ ಸಮಿತಿ: ಮಧು ಬಂಗಾರಪ್ಪ

    ಸೊರಬ: ಕನ್ನಡ ಶಾಲೆ ಮಕ್ಕಳಿಗೆ ವಿಶೇಷ ಪ್ರಾಧಾನ್ಯತೆ ನೀಡುವದಲ್ಲದೆ, ಕನ್ನಡ ಭಾಷೆ ಉಳಿಸಲು ವಿಶೇಷ ಸಮಿತಿ ರಚನೆ ಮಾಡಲು ಚಿಂತನೆ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

    ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಕರವೇ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ನಾಡುನುಡಿ ಹಬ್ಬ ಉದ್ಘಾಟಿಸಿ ಮಾತನಾಡಿ, ನೆಲ, ಜಲ, ಭಾಷೆ ಬಗ್ಗೆ ಸದಾ ನಮಗೆ ಅಪಾರ ಗೌರವವಿದೆ. ನಮ್ಮ ರಕ್ತದಲ್ಲಿ ಕನ್ನಡ ತನ ಉಳಿಯಬೇಕು. ಕನ್ನಡಕ್ಕೆ ಧಕ್ಕೆ ತರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾಡು, ನುಡಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವತ್ತ ಎಲ್ಲರೂ ಒಟ್ಟಾಗಿ ರಾಜ್ಯವನ್ನು ಮತ್ತಷ್ಟು ಎತ್ತರಕ್ಕೆ ಬೆಳಸೋಣ ಎಂದರು.
    ತಂದೆ ಬಂಗಾರಪ್ಪ ಅವರ ಕಾಲದಲ್ಲಿ ಆದ ಅಭಿವೃದ್ಧಿಗಿಂತ ಹತ್ತು ಪಟ್ಟು ತಾಲೂಕನ್ನು ಅಭಿವೃದ್ಧಿ ಮಾಡುತ್ತೇನೆ. ಈ ಬಗ್ಗೆ ನಂಬಿಕೆ ಇರಲಿ. ಕಾಂಗ್ರೆಸ್ ಚುನಾವಣೆಯಲ್ಲಿ ಮತ ಪಡೆಯಲು ಭಾಗ್ಯಗಳನ್ನು ನೀಡಿಲ್ಲ. ಜನರ ಸಂಕಷ್ಟಗಳು ನಿವಾರಣೆಯಾಗಲಿ ಎಂದು ನೀಡಿದೆ. ಇದರ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳಬೇಕು ಎಂದು ಹೇಳಿದರು.
    ಕರವೇ ತಾಲೂಕು ಅಧ್ಯಕ್ಷ ಸಿ.ಕೆ.ಬಲೀಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಶಿವಪ್ಪ ಹಿತ್ಲರ್, ಶಿಕ್ಷಕ ಸಿ.ಪಿ.ಸದಾನಂದ, ಬಿಸಿಎಂ ಇಲಾಖೆಯ ಸಹಾಯಕ ನಿರ್ದೇಶಕ ರೇವಣಪ್ಪ, ಪಿಡಿಒ ಸಂದೀಪ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಇಕ್ಬಾಲ್ ಜಾತಿಗೇರ್, ಶಿವಮೊಗ್ಗ ಮುಖ್ಯ ಗ್ರಂಥಾಲಯದ ಹರೀಶ್, ಕೃಷಿಕರಾದ ಒ.ಬಿ.ರಾಜಶೇಖರ್, ವಿವೇಕ ಕಾಮತ್ ಕೆರೆಹಳ್ಳಿ, ದೊಡ್ಡಾಟ ಕಲಾವಿದ ಪ್ರಕಾಶ್ ಎಸ್.ನಾಯ್ಕ, ಡಾ. ಪ್ರಭು ಸಾಹುಕಾರ್, ಡಾ. ಪ್ರದೀಪ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.
    ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಮಂಜುನಾಥ್, ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಕೆ.ಪಿ.ರುದ್ರಗೌಡ, ತಬಲಿ ಬಂಗಾರಪ್ಪ, ಎಚ್.ಗಣಪತಿ, ನಾಗರಾಜ್ ಚಿಕ್ಕಸವಿ, ಎಂ.ಡಿ.ಶೇಖರ್, ಪ್ರಭಾಕರ್ ಶಿಗ್ಗಾ, ರಮೋಲ, ವೆಂಕಟೇಶ್ ಹೆಗಡೆ, ಕರಿಬಸಯ್ಯ, ಗಿರೀಶ್ ಬಾರ್ಕಿ, ಪ್ರಶಾಂತ್ ಎಂ.ನಾಯ್ಕ, ವಿಜಯ್, ರಾಘು, ಧನಂಜಯ, ಪರಮೇಶ್ವರ್, ದಿನೇಶ್ ಹುಲ್ತಿಕೊಪ್ಪ, ಪ್ರಜ್ವಲ್ ಚಂದ್ರಗುತ್ತಿ, ವೇದಾ, ಯುವರಾಜ್, ಗಣಪತಿ, ಪ್ರಕಾಶ್ ನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts