More

    ಜಿಲ್ಲೆಯ ಅಭಿವೃದ್ಧಿ ಕಡೆಗಣನೆ: ಜಿಲ್ಲಾ ಉಸ್ತುವಾರಿ ಸಚಿವ ವಿರುದ್ಧ ಹಂಪನಗೌಡ ಬಾದರ್ಲಿ ಆರೋಪ

    ಸಿಂಧನೂರು: ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಜಿಲ್ಲೆಯ ಅಭಿವೃದ್ಧಿ ಕಡೆಗಣಿಸಿದ್ದಾರೆ. ವರ್ಷದಲ್ಲಿ ಕೇವಲ ಎರಡು ಬಾರಿ ಕಾಟಾಚಾರಕ್ಕೆಂಬಂತೆ ಕೆಡಿಪಿ ಸಭೆ ನಡೆಸಿ ಬೇಜವಾಬ್ದಾರಿ ವಹಿಸಿದ್ದಾರೆಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಆರೋಪಿಸಿದರು.

    ಪಾರದರ್ಶಕ, ಪ್ರಾಮಾಣಿಕ ಆಡಳಿತವೆಂದು ಬೊಬ್ಬೆ ಹೊಡೆಯುತ್ತಿರುವ ಬಿಜೆಪಿ ಸರ್ಕಾರದಷ್ಟು ಕೊಳಕು ಮತ್ತೊಂದಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು. ನೀರಾವರಿ ವಿಚಾರದಲ್ಲಿಯೂ ಸಚಿವರು, ಶಾಸಕರು ಎಡವಿದ್ದಾರೆ. ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ಭತ್ತ, ಜೋಳ, ಹತ್ತಿ ಬೆಳೆಗಳಿದ್ದು ಭತ್ತ ಸಂಪೂರ್ಣ ಪ್ರಮಾಣದಲ್ಲಿ ಬೆಳೆಯಲಾಗಿದ್ದರೂ ಜೋಳ ಹಾಗೂ ಹತ್ತಿ ಬೆಳೆಗೆ ನೀರಿನ ಕೊರತೆ ಎದುರಾಗುತ್ತಿದೆ. ಐಸಿಸಿ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹೋಗಿಲ್ಲ. ಜಿಲ್ಲೆಯ ನೀರಾವರಿ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿಲ್ಲ. 400 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿದ್ದರೂ ಹಿಡಿದಿಟ್ಟುಕೊಳ್ಳುವ ಬದಲು ತುಂಗಭದ್ರಾ ನದಿ ಮೂಲಕ ಆಂಧ್ರಕ್ಕೆ ಹರಿಸಲಾಗಿದೆ ಎಂದ ಆರೋಪಿಸಿದರು.

    ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲ್ಲಿಕ್ ವಕೀಲ, ಪ್ರಧಾನ ಕಾರ್ಯದರ್ಶಿ ವೈ.ಅನಿಲಕುಮಾರ, ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ ಇದ್ದರು.

    ಸಚಿವ, ಶಾಸಕರಿಲ್ಲ ಕಾಳಜಿ: ಜಲಾಶಯದಲ್ಲಿ 93 ಟಿಎಂಸಿ ನೀರು ಸಂಗ್ರಹವಾಗಿದ್ದು ಇದರಲ್ಲಿ ನಮ್ಮ ಪಾಲಿನ 78.442 ಟಿಎಂಸಿ ನೀರು ಲಭ್ಯವಿದ್ದು, ಕಳೆದ ವರ್ಷ ಸೆ.21ರಂದು 93 ಟಿಎಂಸಿ ನೀರಿನಲ್ಲಿ 70 ಟಿಎಂಸಿ ನೀರು ಲಭ್ಯವಿತ್ತು. ಈ ಬಾರಿ 8 ಟಿಎಂಸಿ ನೀರು ಹೆಚ್ಚುವರಿ ಸಂಗ್ರಹವಿದೆ. 2016ರಲ್ಲಿ ಖಾಸಗಿ ಕಂಪನಿ 2 ಕೋಟಿ ರೂ. ವೆಚ್ಚ ಮಾಡಿ ಟ್ರೊಪೋ ಗ್ರಾಫಿಕ್ ಸರ್ವೇ ನಡೆಸಿದ್ದು 105 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಬಗ್ಗೆ ತಿಳಿಸಿದೆ. ಒಂದೊಂದು ಸರ್ವೇಯೂ ಎರಡ್ಮೂರು ಟಿಎಂಸಿ ವ್ಯತ್ಯಾಸ ತೋರಿಸಿವೆ. ಇಲ್ಲಿ ನೀರಿನ ಅನ್ಯಾಯ ಹೆಚ್ಚಾಗುತ್ತಿದೆ. ಇದರಿಂದ ನಾಲೆಯ ನೀರು ಕೆಳ ಭಾಗಕ್ಕೆ ಹರಿಯದೆ ಸಮಸ್ಯೆಯಾಗುತ್ತಿದೆ ಎಂದು ಹಂಪನಗೌಡ ಬಾದರ್ಲಿ ದೂರಿದರು. ತುಂಗಭದ್ರಾ ಜಲಾಶಯದ ನೀರಿನ ವಿಚಾರದಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಸಚಿವ, ಶಾಸಕರು ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts