More

    ವ್ಯಾಪಾರದ ಹೆಸರಲ್ಲಿ ಕೋಮು ದ್ವೇಷ ಸಲ್ಲ – ಮಕ್ಕಳ ತಜ್ಞ ಡಾ.ಕೆ.ಶಿವರಾಜ ಅನಿಸಿಕೆ

    ಸಿಂಧನೂರು: ಭಗವಾನ್ ಬುದ್ಧ ನಡೆದು ತೋರಿದರೆ, ವಿಶ್ವಗುರು ಬಸವಣ್ಣ ನುಡಿದು ತೋರಿದರು ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಬರೆದು ತೋರಿಸಿದರು. ಈ ಮೂವರ ವಿಚಾರಧಾರೆಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು, ಅವರ ಆಶಯ ಈಡೇರಿಸಲು ಮುಂದಾಗಬೇಕು ಎಂದು ಮಕ್ಕಳ ತಜ್ಞ ಡಾ.ಕೆ.ಶಿವರಾಜ ಹೇಳಿದರು.

    ನಗರದ ಸಿಪಿಎಸ್ ಶಾಲಾವರಣದಲ್ಲಿ ಬಸವ ಸಂಘಟನೆಗಳ ಸಮಿತಿ ಮಂಗಳವಾರ ಹಮ್ಮಿಕೊಂಡಿದ್ದ ವಚನಗಳಲ್ಲಿ ಜೀವನ ನಗೆಬೆಳಕು ಪ್ರವಚನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಬೇರೂರಿದ್ದ ಅಸಮಾನತೆ, ಜಾತಿ ವ್ಯವಸ್ಥೆ, ಮೂಢನಂಬಿಕೆಯನ್ನು ಕಿತ್ತೆಸೆಯುವಲ್ಲಿ 12ನೇ ಶತಮಾನದ ವಚನ ಕ್ರಾಂತಿ ಪ್ರಮುಖ ಪಾತ್ರ ವಹಿಸಿದೆ. ಸಮಸಮಾಜ ನಿರ್ಮಾಣಕ್ಕೆ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಶ್ರಮಿಸಿದ್ದಾರೆ. ಆಹಾರ ಹಾಗೂ ವ್ಯಾಪಾರದ ಹೆಸರಿನಲ್ಲಿ ಕೋಮು ದ್ವೇಷ ಸೃಷ್ಟಿಸಿ ಜನರಲ್ಲಿ ಒಡುಕು ಮೂಡಿಸುತ್ತಿರುವುದು ದುರಂತ ಎಂದು ಹೇಳಿದರು.

    ಹಾಸ್ಯ ಭಾಷಣಗಾರ್ತಿ ಇಂದುಮತಿ ಸಾಲಿಮಠ ಮಾತನಾಡಿ, ವಚನಗಳಲ್ಲಿ ಜೀವನ ಮೌಲ್ಯಗಳಿವೆ. ಅವುಗಳನ್ನು ಅರ್ಥೈಸಿಕೊಂಡರೆ ಬದುಕು ಉತ್ತಮವಾಗಲಿದೆ ಎಂದು ವಿವರಿಸಿದರು. ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಸವ ಜಯಂತಿ ಆಚರಣೆ ಸಮಿತಿ ಅಧ್ಯಕ್ಷ ಟಿ.ಎನ್.ಪಾಟೀಲ್, ವೀರಶೈವ ಸಮುದಾಯದ ತಾಲೂಕು ಅಧ್ಯಕ್ಷ ಅಶೋಕಗೌಡ ಗದ್ರಟಗಿ, ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ, ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ಪ ಮೇಸ್ತ್ರಿ ಇದ್ದರು. ಬೀರಪ್ಪ ಶಂಭೋಜಿ ಸ್ವಾಗತಿಸಿದರು. ಬಸವಲಿಂಗಪ್ಪ ಬಾದರ್ಲಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts