More

    ತುಂಡುಗುತ್ತಿಗೆ ಪರ್ಸೆಂಟೇಜ್‌ಗೆ ಮಾರಾಟ, ದಾಖಲೆ ಇದ್ದರೆ ಕೊಡಿ ಎಂದ ಶಾಸಕ ವೆಂಕಟರಾವ ನಾಡಗೌಡ

    ಸಿಂಧನೂರು: ಜಿಪಂಯಿಂದ ತುಂಡು ಗುತ್ತಿಗೆ ಕಾಮಗಾರಿಗಳನ್ನು ಸಂಘ-ಸಂಸ್ಥೆಗಳಿಗೆ ನೀಡಲಾಗಿದೆ, ಪರ್ಸೆಟೇಜ್‌ಗೆ ಮಾರಿಕೊಂಡಿರುವ ಕುರಿತು ದಾಖಲೆಗಳಿದ್ದರೆ ಕೊಡಿ. ವಿನಾಃಕಾರಣ ಆಪಾದನೆ ಬೇಡ ಎಂದು ಶಾಸಕ ವೆಂಕಟರಾವ ನಾಡಗೌಡ ಹೇಳಿದರು.

    ನಗರದ ಜಿಪಂ ಉಪವಿಭಾಗದ ಕಚೇರಿ ಆವರಣದಲ್ಲಿ ಗುರುವಾರ 60 ಲಕ್ಷ ರೂ. ವೆಚ್ಚದಲ್ಲಿ ಲ್ಯಾಬ್ ಟೆಸ್ಟಿಂಗ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ನಗರದಲ್ಲಿ ಎರಡು ಎಕರೆ ಸರ್ಕಾರಿ ಜಾಗ ಲಭ್ಯತೆ ಇಲ್ಲದ ಕಾರಣಕ್ಕಾಗಿ ಕಲ್ಲೂರು ಗ್ರಾಮದ ಬಳಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಒಂದು ಇಲಾಖೆಯ ಜಾಗ ಮತ್ತೊಂದು ಇಲಾಖೆ ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ. ಈ ಕಾರಣಕ್ಕಾಗಿ ಫೆ.4 ರಂದು ಸಂಜೆ ತಾಲೂಕು ಆಡಳಿತ ಸೌಧದಲ್ಲಿ ಸರ್ವ ಪಕ್ಷಗಳ ಮುಖಂಡರ ಸಭೆಯನ್ನು ಕರೆಯಲಾಗುವುದು. ಅಲ್ಲಿಗೆ ದಾಖಲೆ ಸಹಿತ ಬಂದು ಜಾಗ ಇರುವುದು ತೋರಿಸಲಿ. ಅದನ್ನು ಅಲ್ಲಿಗೆ ಸಿಫ್ಟ್ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

    ನಗರದ ವಾರ್ಡ್ ನಂ.19 ರಲ್ಲಿ 25 ಲಕ್ಷ ರೂ., ತಾಲೂಕಿನ ಅರಗಿಮರ ಕ್ಯಾಂಪಿನಲ್ಲಿ 30 ಲಕ್ಷ ರೂ., ಬನ್ನಿಗನೂರಿನಲ್ಲಿ 20 ಲಕ್ಷ ರೂ., ಹೆಡಗಿನಾಳದಲ್ಲಿ 30 ಲಕ್ಷ ರೂ., ಅಲಬನೂರಿನಲ್ಲಿ 30 ಲಕ್ಷ ರೂ., ಆರ್.ಎಚ್ ಕ್ಯಾಂಪ್-3 ರಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

    ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಅಶೋಕರೆಡ್ಡಿ, ಜಿಪಂ ಉಪವಿಭಾಗದ ಎಇಇ ಅನ್ನಪೂರ್ಣ, ಜೆಇ ಶ್ರೀರಂಗ, ಮುಖಂಡರಾದ ನದೀಮುಲ್ಲಾ, ಚಂದ್ರಶೇಖರ ಮೈಲಾರ, ಅಲ್ಲಮಪ್ರಭು ಪೂಜಾರಿ, ಅಶೋಕಗೌಡ ಗದ್ರಟಗಿ, ಹನುಮೇಶ ಕುರಕುಂದಿ, ಎಸ್.ಪಿ.ಟೈಲರ್, ದಾಸರಿ ಸತ್ಯನಾರಾಯಣ, ವೆಂಕೋಬಣ್ಣ ಕಲ್ಲೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts