More

    ಧರ್ಮ,ರಾಷ್ಟ್ರದ ಹೆಸರಿನಲ್ಲಿ ಮೋಸ, ವಂಚನೆ; ತಾಲೂಕು ಘಟಕದ ಸಂಚಾಲಕ ಚಂದ್ರಶೇಖರ ವಲ್ಕಂದಿನ್ನಿ ಬೇಸರ

    ಸಿಂಧನೂರು: ಸಂವಿಧಾನ ರಚಿಸುವ ಮೂಲಕ ಸಮಾನತೆಯ ಭಾರತ ನಿರ್ಮಾಣ ಮಾಡುವ ಕನಸು ಕಂಡಿದ್ದ ಅಂಬೇಡ್ಕರ್ ಅವರ ಆಶಯ ಗಟ್ಟಿಗಳಿಸೋಣ ಎಂದು ದಲಿತ ಸಾಹಿತ್ಯ ಪರಿಷತ್ ತಾಲೂಕು ಘಟಕದ ಸಂಚಾಲಕ ಚಂದ್ರಶೇಖರ ವಲ್ಕಂದಿನ್ನಿ ಹೇಳಿದರು.ತಾಲೂಕಿನ ಸಾಸಲಮರಿ ಗ್ರಾಮದಲ್ಲಿ ಭಾನುವಾರ ಸಂಜೆ ದಲಿತ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಮನೆ-ಮನೆಗೆ ಮಹಾನಾಯಕ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಇಂದು ಧರ್ಮ ಮತ್ತು ರಾಷ್ಟ್ರದ ಹೆಸರಿನಲ್ಲಿ ಮೋಸ ಮತ್ತು ವಂಚನೆಯ ರಾಜಕಾರಣ ವ್ಯವಸ್ಥೆಯು ಸಂವಿಧಾನದ ಆಶಯಗಳನ್ನು ತಿರುಚುವ ಪ್ರಯತ್ನ ನಡೆಸುತ್ತಿದೆ. ಹೀಗಾಗಿ ಜಾತಿಗೆ ಕಟ್ಟು ಬೀಳದೆ ಭಾರತೀಯ ಎಂಬ ಭಾವನೆ ಹೊಂದಬೇಕು ಎಂದು ತಿಳಿಸಿದರು.

    ತಾಪಂ ಮಾಜಿ ಸದಸ್ಯೆ ರಾಮಮ್ಮರಾಮಣ್ಣ ಸಾಸಲಮರಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಪರಿಷತ್ ಸಂಘಟನಾ ಸಂಚಾಲಕರಾದ ಪ್ರೊ.ಅಂಜನೇಯ್ಯ ರಾಮತ್ನಾಳ, ಅಯ್ಯಪ್ಪ ಹರೇಟನೂರು ಮಾತನಾಡಿದರು. ಸುಜಾತ ಪಂಪಣ್ಣ ಸಾಸಲಮರಿ ದಂಪತಿಗಳಿಗೆ ದಲಿತ ಸಾಹಿತ್ಯ ಪರಿಷತ್‌ನಿಂದ ಸನ್ಮಾನಿಸಲಾಯಿತು.

    ಪ್ರಮುಖರಾದ ರಾಮಣ್ಣ, ಹೊಸಳ್ಳಿ ಇ.ಜೆ ಗ್ರಾಪಂ ಸದಸ್ಯರಾದ ಜಡಿಯಮ್ಮ ಡಿ.ವೆಂಕೋಬ, ಮುದುಕಣ್ಣ, ನಿರುಪಾದಿ ಸಾಸಲಮರಿ, ಸರೋಜ ನಾಗರಾಜ, ಶಿಕ್ಷಕ ಯಮನಪ್ಪ, ಅಂಗನವಾಡಿ ಶಿಕ್ಷಕಿಯರಾದ ಚೆನ್ನಮ್ಮ, ಅಂಬಮ್ಮ, ಎಂಆರ್.ಡಬ್ಲ್ಯು ಬಸವರಾಜ, ವಿಆರ್.ಡಬ್ಲು ಹನುಮಂತಪ್ಪ, ಮುಖಂಡರಾದ ರಂಗನಗೌಡ, ಬೆಳಗುರ್ಕಿ ಬಸವರಾಜ, ಧರ್ಮರೆಡ್ಡಿ, ಹನುಮಂತ, ಜಿ.ಕಾಳಿಂಗರೆಡ್ಡಿ, ಸಣ್ಣಸಿದ್ದಪ್ಪ, ರುದ್ರಪ್ಪ, ದುರುಗಪ್ಪ ಪೂಜಾರ್, ಭೀಮಣ್ಣ, ಬಸಪ್ಪ, ಬಸವರಾಜ ಗಿಣಿವಾರ, ಯಲ್ಲಪ್ಪ ಹೊಸಮನಿ, ಸಿದ್ದಪ್ಪ ಬೋವಿ, ದೊಡ್ಡಶಿವಪ್ಪ, ಮಂಜುನಾಥ, ಗಣೇಶ, ನೀಲಪ್ಪ ಮಳಿಕೇರಿ, ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹುಸೇನಪ್ಪ ಅಮರಾಪುರ, ಉಪಾಧ್ಯಕ್ಷ ಡಾ.ಅರುಣಕುಮಾರ ಬೇರ‌್ಗಿ, ಸದಸ್ಯರಾದ ಮಂಜುನಾಥ, ಮಾಕರ್ಂಡಪ್ಪ ಮಲ್ಕಾಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts