More

    ವಿದ್ಯುತ್ ಖಾಸಗೀಕರಣದಿಂದ ಸೌಲಭ್ಯಗಳಿಗೆ ಧಕ್ಕೆ

    ಸಿಂಧನೂರು: ವಿದ್ಯುತ್ ಖಾಸಗೀಕರಣ ಹಾಗೂ ಮೀಟರೀಕರಣ ಮಾಡುವುದು ಸರಿಯಲ್ಲ ಎಂದು ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಯು.ಬಸವರಾಜ ಹೇಳಿದರು.

    ನಗರದ ಸಮುದಾಯ ಭವನದಲ್ಲಿ ಕರ್ನಾಟಕ ಪ್ರಾಂತ ರೈತಸಂಘದ ಸಮಾವೇಶದಲ್ಲಿ ಸೋಮವಾರ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಖಾಸಗೀಕರಣದ ಹೆಸರಿನಲ್ಲಿ ರೈತರ ಭೂಮಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ನೀಡುವ ಹುನ್ನಾರ ನಡೆಸಿದೆ. ವಿದ್ಯುತ್ ಕಂಪನಿಗಳನ್ನು ಖಾಸಗಿಯವರಿಗೆ ನೀಡಲು ಇಲಾಖೆಯನ್ನು ನಾಲ್ಕು ವಿಭಾಗಗಳನ್ನಾಗಿ ಮಾಡಲಾಗಿದೆ. ಖಾಸಗೀಕರಣವಾದರೆ ರೈತರಿಗೆ ನೀಡುವ ಸಬ್ಸಿಡಿ ಹಾಗೂ ಬಡವರಿಗೆ ನೀಡುವ ಸೌಲಭ್ಯ ಕಡಿತವಾಗುವ ಸಾಧ್ಯತೆಗಳಿವೆ ಎಂದರು.

    ಜಿಲ್ಲಾಧ್ಯಕ್ಷ ವೀರನಗೌಡ ಮಾತನಾಡಿ, ವಿದ್ಯುತ್ ಖಾಸಗೀಕರಣ ನೇರ ರೈತರ ಮೇಲಿನ ದಾಳಿಯಾಗಿದೆ ಎಂದರು. ಕಾರ್ಯದರ್ಶಿ ನರಸಣ್ಣ ನಾಯಕ, ಸಂಚಾಲಕರಾದ ಬಸವಂತರಾಯಗೌಡ ಕಲ್ಲೂರು, ಬಿ.ಲಿಂಗಪ್ಪ, ಶರಬಣ್ಣ ನಾಗಲಾಪುರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts