More

    ಮಕ್ಕಳಲ್ಲಿ ಸಂಸ್ಕಾರ ಅತ್ಯಗತ್ಯ

    ಸಿಂಧನೂರು: ಜಂಗಮ ಸಮುದಾಯ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕೆಂಬ ಕಲ್ಪನೆಯೊಂದಿಗೆ ತಿಂಗಳ ಕಾಲ ವೇದ ಅಧ್ಯಯನ ಶಿಬಿರ ಏರ್ಪಡಿಸಿರುವುದು ಸ್ವಾಗತಾರ್ಹ ಎಂದು ಮಸ್ಕಿ ಗಚ್ಚಿನ ಹಿರೇಮಠ ವರರುದ್ರಮುನಿ ಸ್ವಾಮೀಜಿ ಹೇಳಿದರು.

    ಸ್ಥಳೀಯ ಮೂರುಮೈಲ್‌ಕ್ಯಾಂಪ್‌ನ ಕರಿಬಸವ ನಗರದ ರಂಭಾರಿಪುರಿ ಖಾಸಾ ಶಾಖಾಮಠದಲ್ಲಿ ಮಂಗಳವಾರ ತೃತೀಯ ವರ್ಷದ ವೈದಿಕ ಸಂಸ್ಕಾರ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಬಿರದಲ್ಲಿ 60 ಜನ ಜಂಗಮ ವಟುಗಳಿಗೆ ಅಭ್ಯಾಸ ಮಾಡುತ್ತಿರುವುದು ವಿಶೇಷವಾಗಿದೆ. ದಿನನಿತ್ಯವೂ ಎಲ್ಲರಿಗೂ ಉಚಿತ ಊಟ, ವಸತಿ ನೀಡುತ್ತಿರುವುದು ಬಹು ದೊಡ್ಡ ಕೆಲಸವಾಗಿದೆ ಎಂದರು.

    ಶಿಬಿರದಲ್ಲಿ ಪೂಜಾ ಸಂಸ್ಕಾರಗಳನ್ನು ಕಲಿತು ಮಕ್ಕಳು ಜೀವನದಲ್ಲಿ ಸಂಪ್ರದಾಯಗಳನ್ನು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಒಳ್ಳೆಯ ಪುರೋಹಿತರಾಗಲು ಶಿಬಿರ ನೆರವಾಗಲಿದೆಂದರು.

    ರಂಭಾಪುರಿ ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯಸ್ವಾಮೀಜಿ ಮಾತನಾಡಿ, ಈ ಶಿಬಿರದಲ್ಲಿ ವೈದಿಕ ಶಿವಪೂಜಾವಿಧಿ, ಮಂತ್ರ ಪಠಣ, ರುದ್ರಾಭಿಷೇಕ, ಪಂಚಾಭಿಷೇಕ ಮಂತ್ರಗಳು, ಇಷ್ಟಲಿಂಗ ಪೂಜಾ ವಿಧಾನ, ವೀರಶೈವ ಧರ್ಮದ ಆಚಾರ ವಿಚಾರ, ಸಂಸ್ಕಾರ ಪದ್ಧತಿ ಹಾಗೂ ವಿವಿಧ ಪೂಜಾ ವಿಧಾನಗಳನ್ನು ಉಪನ್ಯಾಸಕರು ತಿಳಿಸಿಕೊಟ್ಟಿದ್ದಾರೆ. ಅವುಗಳು ಬದುಕಿಗೆ ಉಪಯೋಗವಾಗಲಿವೆ ಎಂದು ತಿಳಿಸಿದರು.

    ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿ, ಜಂಗಮ ವಟುಗಳಿಗೆ ದೀಕ್ಷೆ ನೀಡಿದ ನಂತರ ವೈದಿಕ ಸಂಸ್ಕಾರವು ಅಗತ್ಯವಾಗಿದೆ ಎಂದರು.
    ತುರ್ವಿಹಾಳ ಪುರವರಮಠದ ಅಮರಗುಂಡ ಶಿವಾಚಾರ್ಯಸ್ವಾಮೀಜಿ, ರೌಡಕುಂದ ಶಿವಯೋಗಿ ಸ್ವಾಮೀಜಿ, ಬಂಗಾರಿಕ್ಯಾಂಪ್‌ನ ಸದಾನಂದ ಶರಣರು, ಬಪ್ಪೂರ ಶಾಂಭವಿಮಠದ ದೇವಯ್ಯಸ್ವಾಮಿ, ಉಪನ್ಯಾಸಕ ಶ್ರೀಧರ ಹಿರೇಮಠ ಹಸಮಕಲ್, ಪ್ರಮುಖರಾದ ಬಸವರಾಜಸ್ವಾಮಿ ಹೊಸಳ್ಳಿ, ಅಮರಯ್ಯಸ್ವಾಮಿ ಚರಂತಿಮಠ, ಕಿಡಿಗಣಯ್ಯಸ್ವಾಮಿ, ಶಿವಶಂಕರ, ಶಾಶ್ವತಸ್ವಾಮಿ ಮುಕ್ಕುಂದಿಮಠ, ಮೃತ್ಯುಂಜಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts