More

    ಭತ್ತ ಖರೀದಿ ಕೇಂದ್ರಕ್ಕಾಗಿ ಸಿಎಂಗೆ ಪತ್ರ

    ಶಾಸಕ ವೆಂಕಟರಾವ ನಾಡಗೌಡ ಮಾಹಿತಿ| ಬಿಜೆಪಿ ಸರ್ಕಾರಕ್ಕೆ ಟಾಂಗ್, ಬಾದರ್ಲಿಗೆ ತಿರುಗೇಟು

    ಸಿಂಧನೂರು: ರೈತರು ಸಮೃದ್ಧ ಬೆಳೆ ಪಡೆದುಕೊಂಡಿದ್ದು ಅವರ ಹಿತ ಕಾಯಲು ಸರ್ಕಾರ ಶೀಘ್ರ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಪತ್ರ ಬರೆಯಲಾಗಿದೆ ಎಂದು ಶಾಸಕ ವೆಂಕಟರಾವ ನಾಡಗೌಡ ತಿಳಿಸಿದರು.

    ನಗರದ ಶಾಸಕರ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಿಂಧನೂರು ಮತಕ್ಷೇತ್ರದಲ್ಲಿ ಭತ್ತ ಪ್ರಮುಖ ಬೆಳೆಯಾಗಿದೆ. 1.50 ರಿಂದ 2 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಈಗಾಗಲೇ ತುಂಗಭದ್ರಾ ನದಿ ದಂಡೆ ವ್ಯಾಪ್ತಿಯಲ್ಲಿ ಭತ್ತ ಕಟಾವು ನಡೆಯುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಭತ್ತದ ಬೆಳೆ ತೀರ ಕಡಿಮೆ ಇದ್ದು 75 ಕೆಜಿ ಚೀಲ ಭತ್ತಕ್ಕೆ 950 ರೂ.ದಿಂದ 1 ಸಾವಿರ ರೂ. ದರ ಇದೆ. ಇದರಿಂದ ರೈತರು ನಷ್ಟ ಎದುರಿಸಬೇಕಾಗುತ್ತದೆ. ಕೂಡಲೇ ಭತ್ತ ಖರೀದಿ ಕೇಂದ್ರ ಆರಂಭಿಸಿದಲ್ಲಿ ಮಾರುಕಟ್ಟೆಯಲ್ಲಿ ಬೆಲೆಯೂ ಹೆಚ್ಚಳವಾಗಲಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ ಎಂದು ತಿಳಿಸಿದರು.

    ಸಿಎಂ ಬಿಎಸ್ ಯಡಿಯೂರಪ್ಪ ಖರೀದಿ ಕೇಂದ್ರ ತೆರೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ರೈತರ ಹಿತ ಕಾಯುವ ಸರ್ಕಾರ ಎಂದು ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ. ಈಗಾಗಲೇ ದೇಶದಲ್ಲಿ ಭೂಮಂಡಳಿ, ಎಪಿಎಂಸಿ ತಿದ್ದುಪಡಿಯಿಂದ ಎಂಎಸ್‌ಪಿ ದರಕ್ಕೆ ಧಕ್ಕೆಯಾಗುವುದಿಲ್ಲಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಪಕ್ಷಗಳು ದಾರಿ ತಪ್ಪಿಸುತ್ತಿವೆ ಎಂದು ಆರೋಪಿಸಿದ್ದಾರೆ. ರೈತರನ್ನು ಯಾರು ದಾರಿ ತಪ್ಪಿಸುತ್ತಿದ್ದಾರೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

    ಕ್ಷೇತ್ರದಲ್ಲಿ ಅವ್ಯವಹಾರ, ಭ್ರಷ್ಟಾಚಾರ, ಮರಳು ದಂಧೆ, ಇಸ್ಟೀಟ್ ದಂಧೆ ಬಗ್ಗೆ ಶಾಸಕರನ್ನು ಪ್ರಶ್ನಿಸುವ ಬದಲು, ತಮ್ಮ ಬೆಂಬಲಿಗರನ್ನು ಕೇಳಿದರೆ ಉತ್ತರ ಸಿಗಲಿದೆ. ದಂಧೆ ನಡೆಸಲು ಅವಕಾಶ ನೀಡುವುದಿಲ್ಲ. ಮರಳು ದಂಧೆ ನಡೆಸುವವರನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಒಬ್ಬ ಅಧಿಕಾರಿಯೂ ಈ ಬಗ್ಗೆ ದೂರು ನೀಡಲಿ ಎಂದು ಸವಾಲು ಹಾಕಿದರು.

    ಜೆಡಿಎಸ್ ಅಧ್ಯಕ್ಷ ಎಂ.ಲಿಂಗಪ್ಪ ದಢೇಸುಗೂರು, ನಗರಸಭೆ ಸದಸ್ಯರಾದ ಪಿ.ಸಣ್ಣ ವೀರಭದ್ರಪ್ಪ ಕುರುಕುಂದಿ, ಹನುಮೇಶ ಕುರುಕುಂದಿ, ಜಿಲಾನಿಪಾಷಾ, ಡಿ.ಸತ್ಯನಾರಾಯಣ, ಮುಖಂಡರಾದ ವೆಂಕೋಬಣ್ಣ, ನಾಗೇಶ ಹಂಚಿನಾಳ, ದೇವೆಂದ್ರಗೌಡ, ಲಿಂಗರಾಜ ಹೊಸಳ್ಳಿ, ಪಂಪಾರೆಡ್ಡಿ ಜಾಲಿಹಾಳ ಇದ್ದರು.

    ಸಿಂಧನೂರಿನಲ್ಲಿ 24/7 ಕುಡಿವ ನೀರಿನ ಯೋಜನೆ ಪೂರ್ಣಗೊಳ್ಳುವ ಮುಂಚೆ ಅವಸರದಲ್ಲಿ ಉದ್ಘಾಟಿಸಿದವರು ಯಾರು? ಆಗಿನ ಸಿಎಂ ಸಿದ್ದರಾಮಯ್ಯರನ್ನು ಉದ್ಘಾಟನೆಗಾಗಿ ಕರೆಸಿದ್ದವರು ಯಾರು? ಯುಜಿಡಿ ನನೆಗುದಿಗೆ ಬೀಳಲು ಯಾರು? ಅವಶ್ಯಕತೆಯಿಲ್ಲದ, ಮನೆಗಳೇ ಇಲ್ಲದ ಶಿವಜ್ಯೋತಿ ನಗರದಲ್ಲಿ ಯುಜಿಸಿ ಮಾಡಿದ್ದೇಕೆ? ಈ ಎಲ್ಲ ಪ್ರಶ್ನೆಗಳಿಗೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಉತ್ತರ ನೀಡಲಿ. ನಂತರ ನನ್ನ ವಿರುದ್ಧ ಆರೋಪ ಮಾಡಲಿ.
    | ವೆಂಕಟರಾವ್ ನಾಡಗೌಡ ಸಿಂಧನೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts