More

    ಗ್ರಾಪಂ ವ್ಯವಸ್ಥೆ ಬಲಪಡಿಸಲು ಸದಸ್ಯರು ಸನ್ನದ್ಧರಾಗಿ ಎಂದ ಗ್ರಾಪಂ ಸದಸ್ಯರ ಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ

    ಸಿಂಧನೂರು: ಗ್ರಾಪಂ ವ್ಯವಸ್ಥೆ ಬಲಪಡಿಸಿ, ಅನುದಾನ ಸದ್ಬಳಕೆ ಮಾಡಿಕೊಳ್ಳಲು ಸದಸ್ಯರು ಈಗಿರುವ ಮನಸ್ಥಿತಿ ಬಯಾಯಿಸಿಕೊಂಡು ಸನ್ನದ್ಧರಾಗಬೇಕು ಎಂದು ರಾಜ್ಯ ಗ್ರಾಪಂ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ ಹೇಳಿದರು.

    ನಗರದ ಕೋಟೆ ಕಲ್ಯಾಣ ಮಂಟಪದಲ್ಲಿ ಶನಿವಾರ ರಾಜ್ಯ ಗ್ರಾಪಂ ಸದಸ್ಯರ ಮಹಾ ಒಕ್ಕೂಟ ಆಶ್ರಯದಲ್ಲಿ ತಾಲೂಕು ಗ್ರಾಪಂ ಸದಸ್ಯರ ಒಕ್ಕೂಟ ರಚನೆ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಚುನಾವಣೆ ಸಂದರ್ಭದಲ್ಲಿದ್ದ ಉತ್ಸಾಹ ಈಗ ಕಳೆದುಕೊಂಡಿರುವಿರಿ. ಈ ಉತ್ಸಾಹ ನಿಮ್ಮ ಐದು ವರ್ಷದ ಅವಧಿ ಮುಗಿಯುವರೆಗೂ ಕ್ರಿಯಾಶೀಲರಾಗಿರಬೇಕು. ಪಿಡಿಒಗಳ ಹಿಂದೆ ನೀವು ಹೋಗದೆ, ಅವರು ನಿಮ್ಮೊಂದಿಗೆ ಕೆಲಸ ಮಾಡುವಂತಾಗಬೇಕು. ಜನರು ನಿಮ್ಮನ್ನು ಏಕೆ ಆಯ್ಕೆ ಮಾಡಿದ್ದಾರೆನ್ನುವ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪಿಡಿಒ, ವಾಟರ್‌ಮನ್ ಮಾತು ಕೇಳುತ್ತಿಲ್ಲ ಎನ್ನುವ ನೆಪ ಮಾಡಿಕೊಂಡು ನಿರುತ್ಸಾಹ ಹೊಂದುವುದು ಬೇಡ ಎಂದರು.

    ನೀವು ಗ್ರಾಮ ಸರ್ಕಾರದ ಪ್ರತಿನಿಧಿಗಳಾಗಿದ್ದೀರಿ, ಶಾಸಕ, ಜಿಪಂ ಸದಸ್ಯರಿಗಿಂತ ಹೆಚ್ಚಿನ ಅಧಿಕಾರ ನಿಮಗಿರುತ್ತದೆ. ಈ ಹಿಂದೆ ಅವಿದ್ಯಾವಂತರು ಚುನಾಯಿತ ಪ್ರತಿನಿಧಿಗಳಾಗುತ್ತಿದ್ದರು. ಈಗ ವಿದ್ಯಾವಂತರು ಗ್ರಾಪಂ ಸದಸ್ಯರಾಗಿರುವುದರಿಂದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುವ ಬುದ್ಧಿವಂತಿಕೆ ಹೊಂದಿರುವುದರಿಂದ ನರೇಗಾ, ಕ್ರಿಯಾ ಯೋಜನೆ ತಯಾರಿಸುವುದಕ್ಕೆ ಸಮಯ ಹಾಳು ಮಾಡಿಕೊಳ್ಳದೇ ಬೇರೆ ರೀತಿಯಲ್ಲಿ ಅನುದಾನ ಬಳಕೆ ಮಾಡಿಕೊಳ್ಳುವ ಬಗ್ಗೆ ಆಲೋಚಿಸಬೇಕು ಎಂದು ತಿಳಿಸಿದರು.

    ಸಂಪನ್ಮೂಲ ವ್ಯಕ್ತಿ ಟಿ.ಲಾರೆನ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಪಂ ವ್ಯಾಪ್ತಿಗೆ ಬರುವ ಯೋಜನೆ, ಅನುದಾನ ಬಳಕೆ ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿ ನೀಡಿ, ಸದಸ್ಯರು ಹೇಗೆ ಬಳಕೆ ಮಾಡಿಕೊಳ್ಳಬೇಕೆನ್ನುವುದನ್ನು ವಿವರಿಸಿದರು.

    ದಢೇಸುಗೂರು ಗ್ರಾಪಂ ಅಧ್ಯಕ್ಷೆ ದುರುಗಮ್ಮ ದುರುಗಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷರಾದ ಈರಣ್ಣ ಕುರಿ, ನಾಗಲಿಂಗಪ್ಪ, ನಾಗಪ್ರಮೀಳಾದೇವಿ, ಮಂಜುಳಾ ಸೇರಿ 30 ಗ್ರಾಪಂ ಅಧ್ಯಕ್ಷರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts