More

    ಬಿ ಪ್ಲಸ್ ಮಾನ್ಯತೆ ಪಡೆಯಲು ಅಗತ್ಯ ಸೌಲಭ್ಯ

    ಸಿಂಧನೂರು: ಸ್ಥಳೀಯ ಸರ್ಕಾರಿ ಮಹಾವಿದ್ಯಾಲಯಕ್ಕೆ ಈ ಬಾರಿ ನ್ಯಾಕ್ ಸಮಿತಿಯಿಂದ ಬಿ ಪ್ಲಸ್ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಸಜ್ಜಗೊಳಿಸಲಾಗಿದ್ದು ಫೆ.9 ರಂದು ನ್ಯಾಕ್ ಸಮಿತಿ ಭೇಟಿ ನೀಡಲಿದೆ ಎಂದು ಶಾಸಕ ವೆಂಕಟರಾವ ನಾಡಗೌಡ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಸಂಜೆ ಮಾತನಾಡಿದರು. 50 ವರ್ಷ ಹಳೆಯದಾದ ಈ ಮಹಾವಿದ್ಯಾಲಯ ಎರಡು ಬಾರಿ ಬಿ ಗ್ರೇಡ್ ಮಾನ್ಯತೆ ಪಡೆದಿದೆ. ಕಾಲೇಜಿನಲ್ಲಿ 8 ಕೋರ್ಸ್‌ಗಳಿದ್ದು, ಸ್ನಾತಕೋತ್ತರ ಕೇಂದ್ರವೂ ಇದೆ. 21 ಕಾಯಂ ಹಾಗೂ 82 ಜನ ಅತಿಥಿ ಉಪನ್ಯಾಸಕರಿದ್ದಾರೆ ಎಂದರು.

    3.50 ಕೋಟಿ ರೂ. ವೆಚ್ಚದಲ್ಲಿ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಹೊಸ ಪ್ರಯೋಗಾಲಯ ನಿರ್ಮಾಣ ಮಾಡಿ, 2.43 ಕೋಟಿ ರೂ. ವೆಚ್ಚದಲ್ಲಿ ಪೀಠೋಪಕರಣ ಪೂರೈಕೆ ಮಾಡಲಾಗಿದೆ. ಡೆಸ್ಕ್ ಸೇರಿ ಇತರ ಸೌಕರ್ಯ ಒದಗಿಸಲಾಗಿದೆ. ಎಂ.ಎ, ಎಂ.ಕಾಂ ವಿಭಾಗದಲ್ಲಿ 14 ರ‌್ಯಾಂಕ್‌ಗಳು ಬಂದಿದ್ದು ಅದರಲ್ಲಿ ಮೊದಲನೆ ರ‌್ಯಾಂಕ್ ಈ ಮಹಾವಿದ್ಯಾಲಯ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ. 17 ಸ್ಮಾರ್ಟ್ ಕ್ಲಾಸ್ ಹೊಂದಿದ ಏಕೈಕ ಮಹಾವಿದ್ಯಾಲಯ ಇದಾಗಿದೆ ಎಂದರು.

    ಪ್ರಾಚಾರ್ಯ ಡಾ.ಚನ್ನಬಸಪ್ಪ ಚಿಲ್ಕರಾಗಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅಲ್ಲಂಪ್ರಭು ಪೂಜಾರಿ, ಸುಭಾಷ ಸಕಲೇಚಾ, ಎಸ್.ಬಿ.ರೆಡ್ಡಿ, ಪದ್ಮಾ ನಾಯ್ದು, ವೈಜನಾಥ ಹಿರೇಮಠ, ಸಹ ಪ್ರಾಧ್ಯಾಪಕರಾದ ಬಸವರಾಜ ತಡಕಲ್, ವೆಂಕಟನಾರಾಯಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts