More

    ಶಿಬಿರಗಳಿಂದ ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಳ

    ಸಿಂಧನೂರು: ಬೇಸಿಗೆ ಸಿಬಿರಗಳು ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುತ್ತವೆ. ಶಿಬಿರದ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಕಲಿಕೆ ಮಟ್ಟವನ್ನು ಸುಧಾರಿಸಿಕೊಳ್ಳಬೇಕೆಂದು ಭಾರತ್ ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತ ಮೋಹಿನಿದ್ದೀನ್ ಶರೀಫ್ ಹೇಳಿದರು.

    ದುಗ್ಗಮ್ಮನಗುಂಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಚಿಕ್ಕಯ್ಯ ಪಂಡಿತ್ ಕ್ಲಬ್ ಘಟಕ ಹಮ್ಮಿಕೊಂಡಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬೇಸಿಗೆ ರಜೆಗಳನ್ನು ಮಕ್ಕಳಲ್ಲಿ ಕ್ರಿಯಾಶೀಲತೆ, ಓದುವಿಕೆ, ಆರೋಗ್ಯದ ರಕ್ಷಣೆ ಸೇರಿ ನಾನಾ ಚಟುವಟಿಕೆ ಮಾಡಿಸುವುದರಿಂದ ಅವರ ಬುದ್ಧಿಮಟ್ಟವು ಸುಧಾರಣೆಯಾಗಿ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.

    ಜಿಲ್ಲಾ ಎಸ್‌ವಿಜೆ ಅಂಬಣ್ಣ ನಾಯಕ ಮ್ಯಾಕಲ್ ಮಾತನಾಡಿ, ಶಿಬಿರದಲ್ಲಿ ವಿದ್ಯಾರ್ಥಿಗಳು ಪರಿಸರ ಕಾಳಜಿ, ಬೀಜದ ಉಂಡೆ ತಯಾರಿ, ಕಾಗದದಿಂದ ವಸ್ತುಗಳ ತಯಾರಿ ಹಾಗೂ ಆಟಗಳ ಮೂಲಕ ಕಲಿಕೆಯನ್ನು ಪಡೆದಿದ್ದಾರೆ ಎಂದರು.

    ಶಾಲಾ ಮುಖ್ಯಶಿಕ್ಷಕ ಶಂಕರ ದೇವರು ಹಿರೇಮಠ ಬೇಸಿಗೆ ಶಿಬಿರದ ಚಟುವಟಿಕೆಗಳನ್ನು ಕುರಿತು ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಗಿರೀಶ್ ವಿ., ಸ್ಥಳೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಾರ್ಯದರ್ಶಿ ಬೀರಪ್ಪ ಶಂಭೋಜಿ, ಕ್ಲಬ್ ಮಾಸ್ಟರ್ ಸಂತೋಷ ಕುಮಾರ, ಅಂಗನವಾಡಿ ಶಿಕ್ಷಕಿಯರಾದ ಭಾಗ್ಯಶ್ರೀ, ಪದ್ಮಾ, ಎಸ್‌ಡಿಎಂಸಿ ಅಧ್ಯಕ್ಷ ಗುಡದಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷ ರೇಣುಕಮ್ಮ, ಮಾಜಿ ಅಧ್ಯಕ್ಷ ಲಕ್ಷ್ಮಣ, ಮುಖ್ಯ ಅಡುಗೆದಾರೆ ರೇಣುಕಮ್ಮ ಇದ್ದರು. ಪ್ರದೀಪ್‌ಕುಮಾರ ಹಾಗೂ ಪ್ರಕಾಶ್ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts