More

    ಸಿಂಧನೂರಿನ ಸಿ.ಟಿ.ಪಾಟೀಲಗೆ ಡಬಲ್ ಖುಷಿ

    ಸಿಂಧನೂರು: ನಗರದಲ್ಲಿ ನಡೆದ 55 ವರ್ಷ ಮೇಲ್ಪಟ್ಟವರ ರಾಜ್ಯ ಮಟ್ಟದ ಆಹ್ವಾನಿತ ಟೆನ್ನಿಸ್ ಪಂದ್ಯಾವಳಿಯಲ್ಲಿ ನಗರದ ಸಿ.ಟಿ.ಪಾಟೀಲ್ ಚಾಂಪಿಯನ್ ಆಗಿ ಹೊರಹೊಮ್ಮಿದರು.

    ಎಫ್‌ಆರ್‌ಸಿಎಸ್ ಟೆನ್ನಿಸ್ ಕೋರ್ಟ್‌ನಲ್ಲಿ ನಡೆದ ಪಂದ್ಯಾವಳಿಯ ಫೈನಲ್‌ನಲ್ಲಿ ಸಿ.ಟಿ.ಪಾಟೀಲ್, ದಾವಣಗೆರೆಯ ನಂದಕುಮಾರರನ್ನು ಸೋಲಿಸಿ ಸಿಂಗಲ್ಸ್ ಚಾಂಪಿಯನ್ ಆಗಿ ಭಾನುವಾರ ಹೊರಹೊಮ್ಮಿದರು. ಡಬಲ್ಸ್‌ನಲ್ಲಿ ಸಿ.ಟಿ.ಪಾಟೀಲ್ ಹಾಗೂ ಗುರುಪಾದಯ್ಯ ಜೋಡಿ ಗೆಲುವು ಸಾಧಿಸಿತು.
    ಬಹುಮಾನದ ಮೊತ್ತ 20 ಸಾವಿರ ರೂಪಾಯಿಯನ್ನು ಬಾಲ್ ಪಿಕ್ಕರ್ಸ್‌ಗಳಾಗಿ ಕಾರ್ಯನಿರ್ವಹಿಸಿದ ಮಂಜು ಮತ್ತು ಸ್ನೇಹಿತರು ಹಾಗೂ ಪಂದ್ಯಾವಳಿಯಲ್ಲಿ ಸ್ವಚ್ಛತೆ ಕಾರ್ಯನಿರ್ವಹಿಸಿದ ಚಂದ್ರಪ್ಪ ಮತ್ತು ಕುಟುಂಬಕ್ಕೆ ಸಿ.ಟಿ.ಪಾಟೀಲ್ ನೀಡಿದರು.

    ಪಂದ್ಯಾವಳಿ ಫಲಿತಾಂಶ: 65 ವರ್ಷ ಮೇಲ್ಪಟ್ಟವರ ಸಿಂಗಲ್ಸ್‌ನಲ್ಲಿ ಧಾರವಾಡದ ನಾಗರಾಜ ಅಂಬ್ಲಿ ಗೆದ್ದರು. ಬಳ್ಳಾರಿಯ ಜೋಸೆಫ್ ದ್ವಿತೀಯ ಸ್ಥಾನ ಪಡೆದರು. ಡಬಲ್ಸ್‌ನಲ್ಲಿ ಬಳ್ಳಾರಿಯ ಜೋಸೆಫ್ ಮತ್ತು ಸೂರ್ಯ ಪ್ರಕಾಶ ವಿಜೇತರಾದರೆ ರಾಯಚೂರಿನ ಗಗನ್‌ದೀಪ್, ಸೋಮ ನಾಗರಾಜಗೌಡ ರನ್ನರ್ ಅಪ್ ಆದರು. 55 ವರ್ಷ ಮೇಲ್ಪಟ್ಟವರ ಡಬಲ್ಸ್‌ನಲ್ಲಿ ಸಿಂಧನೂರಿನ ಸಿ.ಟಿ.ಪಾಟೀಲ್ ಹಾಗೂ ಗುರುಪಾದಯ್ಯ ಜೋಡಿ ಗೆದ್ದರೆ, ಬಾಗಲಕೋಟೆಯ ಉಜ್ವಲ್ ಸಕ್ರಿ ಹಾಗೂ ಚಿತ್ರದುರ್ಗದ ನಂದಕುಮಾರ ದ್ವಿತೀಯ ಸ್ಥಾನ ಪಡೆದರು. 45 ವರ್ಷ ಮೇಲ್ಪಟ್ಟವರ ಡಬಲ್ಸ್‌ನಲ್ಲಿ ಗದಗಿನ ಶ್ರೀನಿವಾಸ ಬದಿ ಹಾಗೂ ದಾವಣಗೆರೆ ಅನಿಲ್ ಜಯ ಗಳಿಸಿದರು. ಕುಮಾರಸ್ವಾಮಿ ಹಾಗೂ ಲಕ್ಷ್ಮೀನಾರಾಯಣ ಎರಡನೇ ಸ್ಥಾನ ಪಡೆದರು. ಸಿಂಗಲ್ಸ್‌ನಲ್ಲಿ ಗದಗಿನ ಶ್ರೀನಿವಾಸ ಬದಿ ಗೆದ್ದರೆ, ಬೀದರ್‌ನ ಸತೀಶ ಎಚ್.ಎಂ. ರನ್ನರ್ ಅಪ್ ಆದರು. 35 ವರ್ಷ ಮೇಲ್ಪಟ್ಟವರ ಡಬಲ್ಸ್‌ನಲ್ಲಿ ದಾವಣಗೆರೆಯ ಅನಿಲ್ ಐ.ಎಂ., ರುದ್ರೇಶ ಎಚ್.ವಿ. ಗೆದ್ದರು. ದಾವಣಗೆರೆಯವರೇ ಆದ ವಿನಯ ಎಸ್.ಕೆ., ಶರಣಪ್ಪ ರನ್ನರ್ ಅಪ್ ಆದರು. ಸಿಂಗಲ್ಸ್‌ನಲ್ಲಿ ಬೀದರ್‌ನ ಗಂಗಯ್ಯ ಜಯಗಳಿಸಿದರು. ದಾವಣಗೆರೆಯ ಎಸ್.ಕೆ.ವಿನಯ ಎರಡನೇ ಸ್ಥಾನ ಪಡೆದರು. ಓಪನ್ ಸಿಂಗಲ್ಸ್‌ನಲ್ಲಿ ಧಾರವಾಡದ ಅಮರ್ ಗೆದ್ದರೆ, ಮೈಸೂರಿನ ಯೋಗಿನ್ ಎರಡನೇ ಸ್ಥಾನ ಪಡೆದರು.

    ಬಹುಮಾನ ವಿತರಣೆ: ವಿಜೇತರಿಗೆ ಶಾಸಕ ವೆಂಕಟರಾವ ನಾಡಗೌಡ ಬಹುಮಾನ ವಿತರಿಸಿದರು. ಕ್ಲಬ್ ಕಾರ್ಯದರ್ಶಿ ಬಸವರಾಜ ಸಿದ್ಧಾಂತಿಮಠ, ಸದಸ್ಯರಾದ ರಾಜಶೇಖರ ಪಾಟೀಲ್, ಎಸ್.ಶರಣೇಗೌಡ, ಬಸವರಾಜ ನಾಡಗೌಡ, ಬಾಬುಗೌಡ, ಡಾ.ಎಸ್.ಶಿವರಾಜ, ವಿಶ್ವನಾಥ ಮಾಲಿ ಪಾಟೀಲ್. ನಿಸಾರ್ ಬೇಗ್, ಮರುಳೀಧರರಡ್ಡಿ, ರಾಜು ಮಾಲಿ ಪಾಟೀಲ್, ರವಿ ತಡಕಲ್, ಸುದರ್ಶನರಡ್ಡಿ, ರವಿರಾಜ, ಕುಮಾರಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts