More

    ಅನಧಿಕೃತ ಬಡಾವಣೆಯ ನಿವೇಶನ ಖರೀದಿ ಸಲ್ಲ ; ಸಾರ್ವಜನಿಕರಿಗೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರುಪಾಪುರ ಕಿವಿಮಾತು

    ಸಿಂಧನೂರು: ನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿ ಮೂಲ ಸೌಲಭ್ಯ ಇಲ್ಲದೆ ಅನಧಿಕೃತ ಬಡಾವಣೆ ನಿರ್ಮಿಸಿ ನಿವೇಶನ ಮಾರಾಟ ಮಾಡಬಾರದು ಎಂದು ನ.ಯೋ.ಪ್ರಾ. ಅಧ್ಯಕ್ಷ ಅಮರೇಗೌಡ ವಿರುಪಾಪುರ ತಿಳಿಸಿದರು.

    ಸಿಂಧನೂರಿನಲ್ಲಿ ನಗರ ಯೋಜನಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದು 2 ದಶಕಗಳಾಗುತ್ತ ಬಂದರೂ ಯೋಜನಾ ಬದ್ಧವಾಗಿ ಪಟ್ಟಣ ನಿರ್ಮಾಣಗೊಳ್ಳುತ್ತಿಲ್ಲ. ಕೆಲವರು ತಮ್ಮ ಲಾಭಕ್ಕೆ ನಾಗರಿಕರಿಗೆ ತಪ್ಪು ಮಾಹಿತಿ ನೀಡಿ ಅನಧಿಕೃತವಾಗಿ ನಿವೇಶನ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಮರ್ಪಕವಾಗಿ ನಾಗರಿಕ ಸೌಕರ್ಯದ ಬಡಾವಣೆಗಳು ಅಭಿವೃದ್ಧಿಯಾಗದಂತಾಗಿದೆ. ಆದ್ದರಿಂದ ನಾಗರಿಕರು ಜಿಲ್ಲಾಧಿಕಾರಿಯಿಂದ ಬಿನ್ ಶೇತಕಿಯಾದ ಮತ್ತು ಯೋಜನಾ ಪ್ರಾಧಿಕಾರದಿಂದ ಅನುಮೋದನೆಗೊಂಡ ವಿನ್ಯಾಸದಲ್ಲಿನ ನಿವೇಶನಗಳನ್ನು ಮಾತ್ರ ಖರೀದಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಹೇಳಿದರು.

    ಉದ್ಯಾನವನ, ನಾಗರಿಕ ಸೌಲಭ್ಯಕ್ಕೆ ಮೀಸಲಿಟ್ಟ ಜಾಗ ಮತ್ತು 9 ಮೀಟರ್ ರಸ್ತೆಯಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಕಂದಾಯ ಜಮೀನುಗಳಲ್ಲಿ ಗುಂಟೆ ಆಧಾರಿತವಾದ ನಿವೇಶನ ಖರೀದಿಸಬಾರದು. ರಸ್ತೆ, ಚರಂಡಿ, ಒಳಚರಂಡಿ, ವಿದ್ಯುತ್, ಬೀದಿದೀಪ, ನೀರು ಸರಬರಾಜು ಮತ್ತು ಉದ್ಯಾನವನ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ಮಾತ್ರ ಖರೀದಿಸಬೇಕು. ಇಂಥ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತ ವಿನ್ಯಾಸದ ನಿವೇಶನ ಖರೀದಿಸುವ ತಪ್ಪು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts