More

    ಪ್ರತಾಪಗೌಡರ ತ್ಯಾಗಕ್ಕೆ ಬೆಲೆ ಕೊಡಿ- ಕೃಷಿ ಬೆಲೆ ಆಯೋಗ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿಕೆ

    ಸಿಂಧನೂರು: ರಾಜ್ಯದಲ್ಲಿ ಸುಭದ್ರ, ಅಭಿವೃದ್ಧಿ ಪರ ಸರ್ಕಾರ ರಚನೆಯಲ್ಲಿ ಪ್ರತಾಪಗೌಡ ಪಾಟೀಲ್ ತ್ಯಾಗದ ಕೊಡುಗೆ ಇದೆ. ಈ ತ್ಯಾಗಕ್ಕೆ ಮತದ ಮೂಲಕ ಬೆಲೆ ನೀಡಬೇಕೆಂದು ರಾಜ್ಯ ಕೃಷಿ ಬೆಲೆ ಆಯೋಗ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದರು.

    ತಾಲೂಕಿನ ಕುರುಕುಂದ, ತಿಡಿಗೋಳ, ನಿಡಿಗೋಳ ಗ್ರಾಮದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಪರ ಮತಯಾಚಿಸಿ, ಮಾತನಾಡಿದರು. ಸರ್ಕಾರ ಬದಲಾವಣೆ ಎದುರಾಗಿದ್ದರಿಂದ ಈ ಉಪಚುನಾವಣೆ ಬಂದಿದೆ. ಇಲ್ಲಿ ಮತದಾರರು ಯೋಚಿಸಬೇಕು. ಅಭಿವೃದ್ಧಿ ಕಾಳಜಿಯುಳ್ಳ ಸರ್ಕಾರ ಅಸ್ತಿತ್ವಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗ ಮತ್ತೆ ಚುನಾವಣೆ ಎದುರಿಸುತ್ತಿರುವ ಪ್ರತಾಪಗೌಡರು ಕ್ಷೇತ್ರದ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ. ನೀರಾವರಿ ಸಮಸ್ಯೆ ಪರಿಹಾರಕ್ಕೆ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೂ ಸರ್ಕಾರ ಮುಂದಾಗಿದೆ. ಈ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಯೋಜನೆಗೆ ವೇಗ ಸಿಗಲಿದೆ ಎಂದರು.

    ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಜನರು ಯಾರು ಶಾಲೆ ಕಟ್ಟಿಸಿ ಅಂತ ಕೇಳಲ್ಲ. ಗುಡಿ-ಗುಂಡಾರಗಳು ಕಟ್ಟಿಸಲು ಹೇಳುತ್ತಾರೆ. ಆದರೆ, ಪ್ರತಾಪಗೌಡರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಿದ್ದಾರೆ. ಅವರ ಶಕ್ತಿ ಕಡಿಮೆ ಮಾಡಲು ಒಳಸಂಚು ನಡೆಯುತ್ತಿದೆ. ಇದಕ್ಕೆ ತಕ್ಕ ಪಾಠ ಕಲಿಸಲು ಮತದಾರರು ಮುಂದಾಗಬೇಕು ಎಂದರು. ಜಿಪಂ ಸದಸ್ಯ ಹಾಗೂ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಮರೇಗೌಡ ವಿರೂಪಾಪುರ ಮಾತನಾಡಿ, ಮಾಜಿ ಶಾಸಕರಾಗಿದ್ದರೂ ಪ್ರತಾಪಗೌಡರು ಕ್ಷೇತ್ರಕ್ಕೆ 1500 ಕೋಟಿ ರೂ. ಅನುದಾನ ತಂದು ಅಭಿವೃದ್ಧಿಗೆ ಮುಂದಾಗಿದ್ದಾರೆ. ಕ್ಷೇತ್ರದ ಜನರ ಮೇಲೆ ವಿಶೇಷ ಕಾಳಜಿ ಇದೆ. ಕುರುಕುಂದ ಗ್ರಾಮಕ್ಕೆ ವಿಶೇಷ ಕೊಡುಗೆ ಕೊಟ್ಟಿದ್ದಾರೆ. ಅವರ ರಾಜೀನಾಮೆ ತ್ಯಾಗದ ಹಿಂದೆ ವಿಶೇಷ ಅರ್ಥವಿದೆ ಎಂದರು.

    ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಮಾತನಾಡಿದರು. ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಜಿಪಂ ಸದಸ್ಯರಾದ ಎನ್.ಶಿವನಗೌಡ ಗೊರೇಬಾಳ, ದುರುಗಪ್ಪ ಗುಡಗಲದಿನ್ನಿ, ಗುಡದನಗೌಡ ಪೊಪಾ, ವಿರುಪಣ್ಣ ಸಾಹುಕಾರ, ತಿಮ್ಮಣ್ಣ ಸಾಹುಕಾರ, ಬಸವರಾಜ ಸಾಹುಕಾರ, ಬಿ.ಮರಿಸ್ವಾಮಿ, ಮಸ್ಕಿ ಬಿಜೆಪಿ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಗ್ರಾಪಂ ಸದಸ್ಯ ಲಕ್ಷ್ಮಣ ನಾಯಕ, ಬಸವರಾಜ ಸಿಂಧನೂರು, ಮಸ್ಕಿ ಮಂಡಲ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಜಿ.ಚಂದ್ರಶೇಖರ ತಿಡಿಗೋಳ, ಶರಣಬಸವ ನಾಯಕ, ಚಿದಾನಂದಪ್ಪ ಕಾನಿಹಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts