More

    ಸಿಂಧನೂರಲ್ಲಿ ಕುರುಬ ಸಮುದಾಯದ ಕಲಬುರಗಿ ವಿಭಾಗ ಮಟ್ಟದ ಸಮಾವೇಶ ಜ.04ರಂದು; ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾಹಿತಿ

    ಸಿಂಧನೂರು: ನಗರದ ತಾಲೂಕು ಕ್ರೀಡಾಂಗಣದಲ್ಲಿ ಜ.4 ರಂದು ಕುರುಬರ ಎಸ್ಟಿ ಹೋರಾಟ ಸಮಿತಿ ವತಿಯಿಂದ ನಡೆಯಲಿರುವ ಕಲಬುರಗಿ ವಿಭಾಗ ಮಟ್ಟದ ಬೃಹತ್ ಸಮಾವೇಶಕ್ಕೆ ಸಕಲ ಸಿದ್ಧತೆ ನಡೆದಿದ್ದು, ಸಮಾವೇಶದಲ್ಲಿ 50 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ಕುರುಬರ ಎಸ್ಟಿ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ತಿಳಿಸಿದರು.

    ಶ್ರೀ ಕನಕ ಮಂಗಳ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 1868ರಲ್ಲಿಯೇ ಆಗಿನ ಬ್ರಿಟಿಷ್ ಸರ್ಕಾರ ಹೊರ ತಂದಿರುವ ದಿ ಪಿಪಲ್ ಆಫ್ ಇಂಡಿಯಾ ಪುಸ್ತಕದಲ್ಲಿ ಕುರುಬರ್ ಅಥವಾ ಕುರುಂಬರ್ ಅಂತ್ಯಂತ ಮೂಲ ನಿವಾಸಿ ಬುಡಕಟ್ಟು ಜನಾಂಗವೆಂದು ಕರೆದಿದ್ದಾರೆ. 1901ರಲ್ಲಿ ಅಂದಿನ ಮದ್ರಾಸ್ ಸರ್ಕಾರವು ತಂದ ಸೆನ್ಸ್‌ಸ್ ಆಫ್ ಇಂಡಿಯಾ-1901 ರಲ್ಲಿ ಕೂಡ ಕುರುಬ, ಕುರುಂಬನ್ ದಕ್ಷಿಣ ಭಾರತದಲ್ಲಿ ಬುಡಕಟ್ಟು ಜನಾಂಗವೆಂದು ಘೋಷಿಸಿದೆ. ಹೀಗಾಗಿ ಎಸ್ಟಿ ಮೀಸಲಿಗೆ ಒತ್ತಾಯ ಮಾಡುವುದರಲ್ಲಿ ಅರ್ಥವಿದೆ ಎಂದರು.

    ಕಾಗಿನೆಲೆ ಕನಕಗುರು ಪೀಠದ ನಾಲ್ವರು ಸ್ವಾಮೀಜಿಗಳು, ಸಚಿವರಾದ ಈಶ್ವರಪ್ಪ, ಬೈರತಿ ಬಸವರಾಜ, ಎಂಎಲ್ಸಿಗಳಾದ ಎಚ್.ವಿಶ್ವನಾಥ, ಎಂಟಿಬಿ ನಾಗರಾಜ್, ಶಂಕರ, ಸಮಿತಿಯ ಸದಸ್ಯರಾದ ಉಗ್ರಪ್ಪ, ಪುಟ್ಟಸ್ವಾಮಿ ಸೇರಿ ಆರು ಜಿಲ್ಲೆಗಳ ಕುರುಬ ಸಮುದಾಯದ ಜನಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

    ಕುರುಬ ಸಂಘದ ತಾಲೂಕು ಅಧ್ಯಕ್ಷ ಪೂಜಪ್ಪ ಪೂಜಾರಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಫಕೀರಪ್ಪ ಬಾಗೋಡಿ, ಶಂಬಣ್ಣ, ನಾಗರಾಜ ಬಾದರ್ಲಿ, ವೆಂಕಣ್ಣ ತಿಪ್ಪನಹಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts