More

    ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಿ

    ಸಿಂಧನೂರು: ಸರ್ಕಾರಿ ಜಮೀನನ್ನು ಖಾಸಗಿ ಸಂಘ-ಸಂಸ್ಥೆಗಳಿಗೆ ಮಂಜೂರು ಮಾಡಲು ಹೊರಟಿರುವ ಸರ್ಕಾರದ ನೀತಿ ಖಂಡಿಸಿ ಹಾಗೂ ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಿ ತುರ್ತಾಗಿ ಹಕ್ಕುಪತ್ರಗಳನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ತಹಸಿಲ್ ಕಚೇರಿ ಶಿರಸ್ತೇದಾರ್ ಸಾದೀಕ್ ಪಾಷಾಗೆ ಬುಧವಾರ ಮನವಿ ಸಲ್ಲಿಸಿತು.

    ಸಂಘ-ಸಂಸ್ಥೆಗಳಿಗೆ ನೀಡುವ ನೆಪದಲ್ಲಿ 20 ಲಕ್ಷ ಎಕರೆ ಜಮೀನನ್ನು ಸಂಘ ಪರಿವಾರದ ಹಿನ್ನೆಲೆಯ ಶೈಕ್ಷಣಿಕ ಹಾಗೂ ಇತರ ಸಂಸ್ಥೆಗಳಿಗೆ ಮಂಜೂರು ಮಾಡಲು ಸರ್ಕಾರ ಮುಂದಾಗಿದೆ. ಈ ಉದ್ದೇಶದಿಂದ 25 ಲಕ್ಷಕ್ಕೂ ಹೆಚ್ಚು ಬಗರ್ ಹುಕುಂ ಸಾಗುವಳಿದಾರರಿಗೆ ಅನ್ಯಾಯವಾಗಲಿದೆ. ಕಳೆದ 20 ವರ್ಷಗಳಿಂದ ನಮೂನೆ 50, 53 ಮತ್ತು 57 ರಲ್ಲಿ ಅರ್ಜಿ ಹಾಕಿ ಸಾಗುವಳಿ ಮಾಡುತ್ತಾ, ಮಂಜೂರಿಗಾಗಿ ಕಾಯುತ್ತಾ ಇದ್ದಾರೆ. ಇನ್ನು ಬಹಳಷ್ಟು ಜನರು ಸ್ವಂತ ಮನೆ ಇಲ್ಲದೆ ಸರ್ಕಾರಿ ಜಾಗೆಯಲ್ಲಿ ಗುಡಿಸಲು, ಶೆಡ್ ಹಾಕಿಕೊಂಡು ನಮೂನೆ 94ಸಿ ಮತ್ತು 94ಸಿಸಿ ಅಡಿ ಹಕ್ಕು ಪತ್ರಕ್ಕಾಗಿ ಕಾಯುತ್ತಿದ್ದಾರೆ. ಇಂಥ ಅರ್ಹರಿಗೆ ಜಮೀನು ನೀಡಬೇಕೆಂದು ಒತ್ತಾಯಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts