More

    ಮೂರನೇ ಅಲೆ ಎದುರಿಸಲು ಸಜ್ಜಾಗಿ; ಆರೋಗ್ಯ ಅಧಿಕಾರಿಗಳಿಗೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಸೂಚನೆ

    ಸಿಂಧನೂರು: ಕೋವಿಡ್ ಮೂರನೇ ಅಲೆ ಎದುರಿಸಲು ಆರೋಗ್ಯ ಇಲಾಖೆ ಸಜ್ಜಾಗಬೇಕಿದ್ದು, ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ತಿಳಿಸಿದರು.

    ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಸಂಚಾರಿ ಕೋವಿಡ್ ಚಿಕಿತ್ಸಾ ಕೇಂದ್ರ ಮತ್ತು ತುರ್ತು ಆಮ್ಲಜನಕ ಸಹಾಯ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 10 ಲಕ್ಷ ರೂ. ವೆಚ್ಚದಲ್ಲಿ ತುರ್ತು ಆಕ್ಸಿಜನ್ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್ ಸೋಂಕಿತರು ತುರ್ತು ಸಂದರ್ಭ ಉಪಯೋಗಕ್ಕೆ ಬರಲಿ ಎಂಬ ನಿಟ್ಟಿನಲ್ಲಿ ಈ ಬಸ್ ಸಿದ್ಧಪಡಿಸಲಾಗಿದೆ. ನಾಲ್ಕು ಬೆಡ್‌ಗಳುಳ್ಳ ಈ ಬಸ್ ಗ್ರಾಮೀಣ ಪ್ರದೇಶದಲ್ಲಿ ಸೋಂಕಿತರಿಗೆ ತುರ್ತಾಗಿ ಆಕ್ಸಿಜನ್ ಕಲ್ಪಿಸಲು ಅನುಕೂಲವಾಗುತ್ತದೆ ಎಂದರು.

    ತಹಸೀಲ್ದಾರ್ ಮಂಜುನಾಥ ಭೋಗಾವತಿ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಪೌರಾಯುಕ್ತ ವಿರುಪಾಕ್ಷಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ, ಡಾ.ಹನುಮಂತರಡ್ಡಿ, ಡಾ.ಜೀವನೇಶ್ವರ, ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ನಗರಸಭೆ ನಾಮನಿರ್ದೇಶನ ಸದಸ್ಯ ಮಲ್ಲಿಕಾರ್ಜುನ ಜೀನೂರು, ಹನುಮಂತಪ್ಪ ಪುಲದಿನ್ನಿ, ಬಸವರಾಜ ಸಿಂಧನೂರು, ಮಲ್ಲನಗೌಡ ಗುಂಜಳ್ಳಿ ಇತರರು ಇದ್ದರು.

    ಸಿಎಂ ಬದಲಾವಣೆ ಈಗ ಬೇಡವಾದ ವಿಷಯ. ಸರ್ಕಾರ ಅವಧಿ ಮುಗಿಯುವವರೆಗೂ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿರುತ್ತಾರೆ. ಪಕ್ಷದ, ಸಿಎಂ ವಿರುದ್ಧ ಹೇಳಿಕೆ ನೀಡುವವರ ವಿರುದ್ಧ ಹೈಕಮಾಂಡ್ ಕ್ರಮಕೈಗೊಳ್ಳಲಿದೆ. ಬದಲಾವಣೆ, ನಾಯಕತ್ವದ ಬಗ್ಗೆ ಈಗ ಮಾತನಾಡುವ ಅವಶ್ಯಕತೆಯೂ ಇಲ್ಲ.
    | ಸಂಗಣ್ಣ ಕರಡಿ ಕೊಪ್ಪಳ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts