More

    ಶೋಷಿತರ ಹಿತಕ್ಕಾಗಿ ಶ್ರಮಿಸುತ್ತಿರುವ ಡಿಎಸ್‌ಎಸ್

    ಸಿಂದಗಿ: ದಲಿತ ಸಂಘರ್ಷ ಸಮಿತಿ ಕೇವಲ ಪರಿಶಿಷ್ಟರ ಹಿತಕ್ಕಾಗಿ ಕಾರ್ಯನಿರ್ವಹಿಸದೆ, ಸಮಸ್ತ ಶೋಷಿತ ಸಮುದಾಯಗಳ ಹಿತಕ್ಕಾಗಿ ಶ್ರಮಿಸುತ್ತದೆ. ಅಲ್ಲದೆ, ಎಲ್ಲ ಶೋಷಿತ ಸಮುದಾಯಗಳು ಒಂದುಗೂಡಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಪ್ರಗತಿ ಸಾಧಿಸಬೇಕು ಎಂದು ಡಿಎಸ್‌ಎಸ್ ಸಂಚಾಲಕ ವೈ.ಸಿ. ಮಯೂರ ಹೇಳಿದರು.

    ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ (ಡಾ. ಡಿ.ಜಿ. ಸಾಗರ ಬಣ) ನೇತೃತ್ವದಲ್ಲಿ ಕೊಕಟನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಶಾಖೆ ಉದ್ಘಾಟನೆ ಹಾಗೂ ದಲಿತ ಹಿಂದುಳಿದ, ಅಲ್ಪಸಂಖ್ಯಾತರ ಗ್ರಾಮಮಟ್ಟದ ಐಕ್ಯತಾ ಸಮಾವೇಶದಲ್ಲಿ ಅವರು ಮಾತನಾಡಿದರು.

    ಇಂದಿನ ದಿನಮಾನಗಳಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಸ್ಥಿತಿ ಶೋಚನೀಯವಾಗಿದೆ. ಸಂವಿಧಾನ ಜಾರಿಯಾಗಿ 70 ವರ್ಷ ಗತಿಸಿದರೂ ಶೋಷಿತರಿಗೆ ಸಿಗಬೇಕಾದ ಸಂವಿಧಾನಬದ್ಧ ಹಕ್ಕುಗಳು ಗಗನಕುಸುಮವಾಗಿ ಕಾಣುತ್ತಿವೆ. ಈ ನಿಟ್ಟಿನಲ್ಲಿ ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಯಶಸ್ಸು ಕಾಣಬೇಕಾಗಿದೆ ಎಂದರು.

    ಕೂಲಿ ಕಬ್ಬಲಿಗ ಯುವ ವೇದಿಕೆ ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ ಮಾತನಾಡಿ, ಶೋಷಣೆಗೆ ಒಳಗಾದ ಕೆಳ ಸಮುದಾಯಗಳು ಸ್ವಾವಲಂಬಿ ಬದುಕನ್ನು ಸಾಗಿಸಬೇಕು. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕೊಡಮಾಡಿರುವ ಸಂವಿಧಾನಬದ್ಧ ಹಕ್ಕುಗಳನ್ನು ಹೋರಾಟಗಳಿಂದ ಪಡೆಯಬೇಕು. ಎ.ಜೆ. ಸದಾಶಿವ ಆಯೋಗ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಹಿತಕ್ಕಾಗಿ ರಂಗನಾಥ ಮಿಶ್ರಾ ಮತ್ತು ಸಾಚಾರ ವರದಿ ಶೀಘ್ರ ಜಾರಿಗೊಳಿಸುವಂತೆ, ತಳವಾರ ಮತ್ತು ಪರಿವಾರ ಸಮುದಾಯಗಳಿಗೆ ಮತ್ತು ಕುರುಬ ಸಮುದಾಯಗಳಿಗೆ ಎಸ್.ಟಿ. ಪ್ರಮಾಣ ಪತ್ರ ನೀಡಲು ಸರ್ಕಾರದ ಮೇಲೆ ಒತ್ತಡ ಹಾಕಲು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

    ಟಿಪ್ಪು ಕ್ರಾಂತಿ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ದಸ್ತಗೀರ ಮುಲ್ಲಾ, ಹಾಲುಮತ ಸಮಾಜದ ತಾಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾವಳಸಂಗ ಮಾತನಾಡಿದರು. ಶಂಕ್ರಯ್ಯ ಮಠ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ಪೈಗಂಬರ ಮುಲ್ಲಾ ಉದ್ಘಾಟಿಸಿದರು. ಖ್ಯಾತ ನ್ಯಾಯವಾದಿ ಎಸ್.ಕೆ. ಪೂಜಾರಿ, ಗುತ್ತಿಗೆದಾರ ಐ. ಎಂ. ಮುಲ್ಲಾ ಜ್ಯೋತಿ ಬೆಳಗಿಸಿದರು.

    ಜಟ್ಟೆಪ್ಪ ಹರನಾಳ ಪೂಜೆ ನೆರವೇರಿಸಿದರು. ಜಿಲ್ಲಾ ಡಿಎಸ್‌ಎಸ್ ಸಂಚಾಲಕ ವಿನಾಯಕ ಗುಣಸಾಗರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಶಾಖಾ ಪದಾಧಿಕಾರಿಗಳಾಗಿ ಪ್ರಕಾಶ ಕೊಕಟನೂರ, ಮಂಜು ಕಾಂಬಳೆ, ಪರಸು ಸಿಂಗೆ(ಜವಳಗಿ), ಹಣಮಂತ ಚಲವಾದಿ, ಶಶಿಕಾಂತ ಕಾಂಬಳೆ ಅವರನ್ನು ಆಯ್ಕೆ ಮಾಡಲಾಯಿತು. ಹುಲಿ ಬೇಟೆ ಚಿತ್ರ ತಂಡದ ನಾಯಕ ಮತ್ತು ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು. ಮುಸ್ಲಿಂ ಸಮಾಜದ ಯುವ ಮುಖಂಡ ಅಖೀಲ ಮನಿಯಾರ(ಯಂಕಂಚಿ), ಅಶೋಕ ಚಲವಾದಿ, ಜಿಪಂ ಮಾಜಿ ಸದಸ್ಯ ಯಲ್ಲಪ್ಪ ಹಾದಿಮನಿ, ಸಿದ್ದು ರಾಯಣ್ಣವರ, ದಲಿತ ಮುಖಂಡ ಹುಯೋಗಿ ತಳ್ಳೊಳ್ಳಿ, ಭೀರಪ್ಪ ಕನ್ನೂರ, ರ್ಇಾನ್ ಮುಲ್ಲಾ, ಬಸವರಾಜ ಹರನಾಳ, ಬಾಬು ರಾಠೋಡ ಇತರರು ಇದ್ದರು.

    ಡಿಎಸ್‌ಎಸ್ ತಾಲೂಕು ಸಂಚಾಲಕ ಲಕ್ಕಪ್ಪ ಬಡಿಗೇರ ಸ್ವಾಗತಿಸಿದರು. ಪ್ರಕಾಶ ಗುಡಿಮನಿ ನಿರೂಪಿಸಿದರು. ರಾಜು ಸಿಂದಗೇರಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts