More

    ತಾಲೂಕಾಡಳಿತದಿಂದ ಮಲತಾಯಿ ಧೋರಣೆ

    ಸಿಂದಗಿ: ತಾಲೂಕಾಳಿತ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನು ಕರೆಯುವ ಮೂಲಕ ಪಟ್ಟಣದ ಕನ್ನಡಪರ ಸಂಘಟನೆಗಳನ್ನು ಕಡೆಗಣಿಸಿ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಕರ್ನಾಟಕ ರಣದೀರ ಪಡೆಯ ಉತ್ತರ ಕರ್ನಾಟಕ ಅಧ್ಯಕ್ಷ ಸಂತೋಷ ಮಣಗಿರಿ ಆರೋಪಿಸಿದರು.

    ಗುರುವಾರ ಪಟ್ಟಣದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕನ್ನಡಾಂಬೆಯ ಮಕ್ಕಳಾದ ನಮ್ಮನ್ನು ಕಡೆಗಣಿಸಿರುವ ತಹಸೀಲ್ದಾರ್ ಸಂಜೀವಕುಮಾರ ದಾಸರ ಅವರು ಸಭೆಗೂ ಮುನ್ನ ಕನ್ನಡಪರ ಸಂಘಟಕರಿಗೆ ಸಭೆ ನಡೆಯುವ ಬಗ್ಗೆ ಯಾವುದೇ ಸಂಗತಿ ತಿಳಿಸಿಲ್ಲ. ಕಸಾಪ ಅಧ್ಯಕ್ಷ ಸಿದ್ಧಲಿಂಗ ಚೌಧರಿ ಅವರೂ ಸಹ ನಮ್ಮನ್ನು ಸಭೆಗೆ ಕರೆಯದೇ ಕನ್ನಡ ಮನಸ್ಸುಗಳ ಕನ್ನಡಾಭಿಮಾನಕ್ಕೆ ಅವಮಾನಿಸಿದ್ದಾರೆ ಎಂದು ದೂರಿದರು.

    ತಾಲೂಕಾಡಳಿತ ಧ್ವಜಾರೋಹಣ ನಡೆಸುವುದಕ್ಕೂ ಮುಂಚೆ ಕನ್ನಡಪರ ಸಂಘಟನೆಗಳ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಕರವೇ ತಾಲೂಕಾಧ್ಯಕ್ಷ ಶ್ರೀಕಾಂತ ಬಿಜಾಪುರ್, ಜಯಕರ್ನಾಟಕ ಸಂಘಟನೆ ತಾಲೂಕಾಧ್ಯಕ್ಷ ಪರಶುರಾಮ ಕೋಟಾರಗಸ್ತಿ, ಕರವೇ(ಪ್ರವೀಣ ಶೆಟ್ಟಿ ಬಣ) ಸದ್ದಾಂ ಆಲಗೂರ ಮಾತನಾಡಿ, ತಹಸೀಲ್ದಾರ್‌ರರ ಸರ್ವಾಧಿಕಾರಿ ಧೋರಣೆ ಹಾಗೂ ಕಸಾಪ ಅಧ್ಯಕ್ಷರ ವರ್ತನೆ ಖಂಡಿಸಿದರು.

    ಈ ಕುರಿತು ಜಿಲ್ಲಾಧಿಕಾರಿಗಳ ಹಾಗೂ ಕಸಾಪ ಜಿಲ್ಲಾಧ್ಯಕ್ಷರಿಗೂ ಮನವಿ ಮೂಲಕ ಸೂಕ್ತ ಕ್ರಮಕ್ಕೆ ಒತ್ತಾಯಿಸುವುದಾಗಿ ಹೇಳಿ, ಆಚರಣೆಯ ದಿನ ಎಲ್ಲ ಕನ್ನಡಪರ ಸಂಘಟನೆಗಳ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಕನ್ನಡ ಧ್ವಜಾರೋಹಣ ಮಾಡಲು ಅವಕಾಶ ನೀಡುವುದಿಲ್ಲ. ಒಂದು ವೇಳೆ ಧ್ವಜಾರೋಹಣ ನಡೆಸಿದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಚನ್ನಪ್ಪಗೌಡ ಬಿರಾದಾರ, ರಾಜು ಮದರಕಾನ್, ಹಣಮಂತ ಕುಂಬಾರ, ದಾವುದ್ ಮದರಕಾನ್ ಮತ್ತಿತರರಿದ್ದರು.

    ತಾಲೂಕಾಡಳಿತದಿಂದ ಮಲತಾಯಿ ಧೋರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts