More

    ಅಕ್ರಮವಾಗಿ ಮದ್ಯ ಮಾರಾಟ, ಓರ್ವನ ಬಂಧನ

    ಸಿಂದಗಿ: ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಅಕ್ರಮವಾಗಿ ಮದ್ಯ ಸಾಗಾಟದಲ್ಲಿ ತೊಡಗಿದ್ದ ಓರ್ವನ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಆತನನ್ನು ಬಂಧಿಸಿ, ಅಪಾರ ಮದ್ಯದ ಪೌಚ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
    ತಾಲೂಕಿನ ಗುತ್ತರಗಿಯ ಭಾಗಪ್ಪ ಬಸವಲಿಂಗಪ್ಪ ದೇಸುಣಗಿ ಎಂಬುವವರೇ ಅಕ್ರಮ ಮದ್ಯ ಸಾಗಾಟದಲ್ಲಿ ತೊಡಗಿದವರು. ಆತನಿಂದ ಒಟ್ಟು 4.320 ಲೀಟರ್‌ನ ಪೌಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಉಪ ನೀರೀಕ್ಷಕ ಮಂಜುನಾಥ ಶಿರಹಟ್ಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಬೆಳಗಾವಿ ವಿಭಾಗದ ಅಬಕಾರಿ ಜಂಟಿ ನಿರ್ದೇಶಕರ ಮಾರ್ಗದರ್ಶನದಲ್ಲಿ ಜಿಲ್ಲಾ ಅಬಕಾರಿ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಸಿಂದಗಿ ವಲಯ ಅಬಕಾರಿ ನಿರೀಕ್ಷಕಿ ಅರತಿ ಖೈನೂರ ಹಾಗೂ ಸಿಬ್ಬಂದಿ ವರ್ಗ ತನಿಖೆ ನಡೆಸಿದ್ದಾರೆ. ದಾಳಿಯಲ್ಲಿ ವಲಯದ ಸಿಬ್ಬಂದಿ ಆರ್.ಎಸ್. ಮಾನೆ, ಅನೀಲ ಪತ್ತಾರ, ಆರ್.ಕೆ. ಅತಾಪಿ, ಎನ್.ಎಸ್. ಸಾತಲಗಾಂವ, ಎನ್.ಪಿ. ಸೂರ್ಯವಂಶಿ, ಎ.ಜೆ. ಮನಗೂಳಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts