More

    ರೈತರಿಗೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ

    ಬ್ಯಾಡಗಿ: ತಾಲೂಕಿನ ರೈತರಿಗೆ ನೀರಾವರಿ, ವಸತಿ, ರಸ್ತೆ ಸೇರಿದಂತೆ ಸಮಗ್ರ ಅಭಿವೃದ್ಧಿ ಯೋಜನೆಗಳಿಗೆ ಇನ್ನಷ್ಟು ಅನುದಾನ ಒದಗಿಸಿ, ಜನಪರ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

    ಪಟ್ಟಣದ ಎಸ್‌ಜೆಜೆಎಂ ಸರ್ಕಾರಿ ಕ್ರೀಡಾಂಗಣದಲ್ಲಿ ಸ್ವಾತಂತ್ರೊೃೀತ್ಸವ ಧ್ವಜಾರೋಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

    ತಾಲೂಕಿನಾದ್ಯಂತ ಆಗಿರುವ ಬೆಳೆ ಹಾನಿ ವರದಿಯನ್ನು ಅಧಿಕಾರಿಗಳಿಂದ ಸರ್ಕಾರಕ್ಕೆ ಸಲ್ಲಿಸಿ, ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನ ಅವಧಿಯಲ್ಲಿ ನೀರಾವರಿ ಯೋಜನೆಗೆ ಪ್ರಾಶಸ್ತ್ಯ ನೀಡಿದ್ದು, ಸಾವಿರಾರು ಹೆಕ್ಟೇರ್ ರೈತರ ಭೂಮಿಗೆ ನೀರುಣಿಸುವ ಮಹತ್ವದ ಉದ್ದೇಶ ಈಡೇರಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಟೆಂಡರ್ ಹಂತದಲ್ಲಿದ್ದು, ಶೀಘ್ರದಲ್ಲೆ ಕಾರ್ಯಾರಂಭವಾಗಲಿವೆ ಎಂದರು.

    ತಹಸೀಲ್ದಾರ್ ಎಸ್.ವಿ. ಪ್ರಸಾದ ಮಾತನಾಡಿ, 1857ರಿಂದ ಆರಂಭವಾದ ಸ್ವಾತಂತ್ರ್ಯ ಚಳವಳಿ 1947ಕ್ಕೆ ಅಂತ್ಯವಾಯಿತು. ಆಗ ಭಾರತ ಪರಕೀಯರ ಆಡಳಿತದಿಂದ ಮುಕ್ತಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದಿದೆ. ಡಾ. ಅಂಬೇಡ್ಕರ್ ನೇತೃತ್ವದಲ್ಲಿ ವಿಶ್ವವೇ ಗೌರವಿಸುವಂಥ ಸಂವಿಧಾನ ರಚನೆಯಾಗಿದೆ ಎಂದರು.

    ನಿವೃತ್ತ ಸೈನಿಕ ಮಂಜಪ್ಪ ಬಾವಿಕಟ್ಟಿ, ವೀರನಗೌಡ್ರ ಹಳ್ಳಿಗೌಡ್ರ ಸೇರಿದಂತೆ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಯ ನೃತ್ಯ ಮಾಡಿ, ಪ್ರೇಕ್ಷಕರ ಗಮನ ಸೆಳೆದರು.

    ಪುರಸಭೆ ಸದಸ್ಯರಾದ ಬಾಲಚಂದ್ರಗೌಡ್ರ ಪಾಟೀಲ, ಬಸವರಾಜ ಛತ್ರದ, ಸರೋಜಾ ಉಳ್ಳಾಗಡ್ಡಿ, ಗಾಯತ್ರಿ ರಾಯ್ಕರ, ರಾಮಣ್ಣ ಕೋಡಿಹಳ್ಳಿ, ಫಕೀರಮ್ಮ ಚಲವಾದಿ, ಕವಿತಾ ಸೊಪ್ಪಿನಮಠ, ಶಿವರಾಜ ಅಂಗಡಿ, ಚಂದ್ರಪ್ಪ ಶೆಟ್ಟರ್, ವಿನಯ ಹಿರೇಮಠ, ಮಲ್ಲಮ್ಮ ಪಾಟೀಲ, ಸುಭಾಸ ಮಾಳಗಿ, ಹನುಮಂತಪ್ಪ ಮ್ಯಾಗೇರಿ, ಮಂಜಣ್ಣ ಬಾರ್ಕಿ, ಈರಣ್ಣ ಬಣಕಾರ, ಮುರಿಗೆಪ್ಪ ಶೆಟ್ಟರ್, ಬೀರಪ್ಪ ಬಣಕಾರ, ದುರ್ಗೇಶ ಗೋಣೆಮ್ಮನವರ, ದಾನಪ್ಪ ಚೂರಿ, ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ, ಸಿಪಿಐ ಮಹಾಂತೇಶ ಲಂಬಿ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ, ಮಾಜಿ ಸೈನಿಕ ಮಲ್ಲೇಶಪ್ಪ ಚಿಕ್ಕಣ್ಣನವರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts