More

    ರೈತ ಆತ್ಮಹತ್ಯೆ ಪರಿಹಾರ ವಿತರಣೆ ನಿಯಮ ಸರಳೀಕರಿಸಿ

    ಬ್ಯಾಡಗಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಎದುರು ಸೋಮವಾರ ಪ್ರತಿಭಟನೆ ನಡೆಸಿ, ಶಿರಸ್ತೇದಾರ್ ಎನ್.ಎಸ್. ಮಲ್ಲಾಡದ ಅವರಿಗೆ ಮನವಿ ಸಲ್ಲಿಸಿದರು.

    ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸುತ್ತಿದ್ದಾರೆ. ರೈತರು ವಿಪರೀತ ಸಾಲ, ಬ್ಯಾಂಕ್‌ನ ಒತ್ತಡ, ಬೆಳೆ ನಷ್ಟಗಳಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ರೈತರ ಕುಟುಂಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ಆರೋಗ್ಯ ಇಲಾಖೆ ಮೃತರ ಪ್ರಮಾಣಪತ್ರ ನೀಡಲು ಮೂರು ತಿಂಗಳ ಅಲೆದಾಡಿಸುತ್ತಿದೆ. ಅಷ್ಟರೊಳಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಅವಧಿ ಮುಗಿದಿರುತ್ತದೆ. ಸಂಕಷ್ಟದಲ್ಲಿರುವ ಮೃತನ ಪತ್ನಿ ಸರ್ಕಾರಿ ಕಚೇರಿಗಳಿಗೆ ಅಲೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.

    ಎಲ್ಲ ದಾಖಲೆಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಕೃಷಿ ಇಲಾಖೆ ಅಧಿಕಾರಿಗಳೇ ಪೊಲೀಸ್ ಠಾಣೆ, ಕಂದಾಯ, ಆರೋಗ್ಯ ಇಲಾಖೆ ದಾಖಲೆ ಸಂಗ್ರಹಿಸಿ ನೇರವಾಗಿ ಫಲಾನುಭವಿಗಳಿಗೆ ಪರಿಹಾರ ನೀಡಬೇಕು. ಮುಖ್ಯಮಂತ್ರಿಗಳು ನಿಯಮಕ್ಕೆ ತಿದ್ದುಪಡಿ ಘೋಷಿಸಬೇಕು. ಅಧಿಕಾರಿಗಳ ತಪ್ಪಿನಿಂದ ತಾಲೂಕಿನ ನಾಲ್ಕು ಕುಟುಂಬಗಳು ಆತ್ಮಹತ್ಯೆ ಪರಿಹಾರ ಮೊತ್ತದಿಂದ ವಂಚಿತವಾಗಿವೆ. ಮುಖ್ಯಮಂತ್ರಿಗಳು ವಿಶೇಷ ಪ್ರಕರಣವೆಂದು ಘೋಷಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

    ರೈತ ಸಂಘದ ತಾಲೂಕಾಧ್ಯಕ್ಷ ರುದ್ರಗೌಡ್ರ ಕಾಡನಗೌಡ್ರ ಮಾತನಾಡಿ, ಮುಂಗಾರು ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಕಂತು ತುಂಬುವ ಅವಧಿ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

    ರೈತ ಮುಖಂಡ ಗಂಗಣ್ಣ ಎಲಿ, ಚಿಕ್ಕಪ್ಪ ಛತ್ರದ, ಕಿರಣಕುಮಾರ ಗಡಿಗೋಳ, ಕೆ.ವಿ. ದೊಡ್ಡಗೌಡ್ರ, ಶೇಖಪ್ಪ ಕಾಶಿ, ಕರಬಸಪ್ಪ ಶಿರಗಂಬಿ, ಮೌನೇಶ ಕಮ್ಮಾರ, ಹನುಮಂತಪ್ಪ ಕೆಂಗೊಂಡ, ಮಲ್ಲೇಶಪ್ಪ ಡಂಬಳ, ಶೇಖಯ್ಯ ಕಾರಿಕಂಠಿ, ಶಿವರುದ್ರಪ್ಪ ಮೂಡೇರ, ಎನ್.ಎಂ. ಅರಳೀಕಟ್ಟಿ, ಫಕೀರಪ್ಪ ಅಜಗೊಂಡರ, ನಿಂಗಪ್ಪ ಹೆಗ್ಗಣದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts