More

    ಬೆನ್ನು, ಸೊಂಟಕ್ಕೆ ಉತ್ತಮ ವ್ಯಾಯಾಮ ನೀಡುವ ಸರಳ ಆಸನವಿದು!

    ಬೆನ್ನುಮೂಳೆಯ ಆರೋಗ್ಯಕ್ಕೆ ಹೇಳಿಮಾಡಿಸಿದಂತಹ ಆಸನವೆಂದರೆ ಅರ್ಧ ಕಟಿ ಚಕ್ರಾಸನ! ಇದು ನಿಂತುಕೊಂಡು ಪಾರ್ಶಕ್ಕೆ ಬಾಗುವ ಭಂಗಿಯಾಗಿದೆ. ಕಟಿ ಎಂದರೆ ಸೊಂಟ. ಅರ್ಧಚಕ್ರದ ಆಕಾರದಲ್ಲಿ ಸೊಂಟವನ್ನು ಬಾಗಿಸುವುದು ಈ ಆಸನದ ವಿಶೇಷ. ಇದು ಸೊಂಟಕ್ಕೆ ಉತ್ತಮ ವ್ಯಾಯಾಮ ನೀಡುತ್ತದೆ.

    ಪ್ರಯೋಜನಗಳು : ಬೆನ್ನು ನೋವು, ಸೊಂಟ ನೋವು ಬಹುಬೇಗ ನಿಯಂತ್ರಣವಾಗುತ್ತವೆ. ಪಿತ್ತಜನಕಾಂಗದ ಸಮರ್ಪಕ ಕಾರ್ಯನಿರ್ವಹಣೆಗೆ ಈ ಆಸನ ಸಹಕಾರಿಯಾಗಿದೆ. ಭುಜ ಮತ್ತು ಕುತ್ತಿಗೆಯ ಭಾಗಗಳು ಬಲಗೊಳ್ಳುತ್ತವೆ. ಲಿವರ್​ ಮತ್ತು ಕಿಡ್ನಿಯ ಉತ್ತಮ ಆರೋಗ್ಯಕ್ಕೆ ಈ ಆಸನದ ಅಭ್ಯಾಸ ಒಳ್ಳೆಯದು.

    ಇದನ್ನೂ ಓದಿ: ಹಾಕಿ ಆಟಗಾರ್ತಿಗೆ ಗೌರವಗಳ ಬುತ್ತಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ರಾಯಭಾರಿ!

    ಅಭ್ಯಾಸ ಕ್ರಮ : ಪ್ರಥಮವಾಗಿ ತಾಡಾಸನದಲ್ಲಿ ನಿಲ್ಲಬೇಕು. ಬಲಗೈಯಲ್ಲಿ ತೊಡೆಯನ್ನು ಒತ್ತಿಕೊಂಡು ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಎಡಗೈಯನ್ನು ನೇರವಾಗಿಸಬೇಕು. ತೋಳುಗಳು ಕಿವಿಗೆ ಒತ್ತಿರುವಂತೆ ಹಿಡಿದುಕೊಂಡು ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಬೇಕು. ಈಗ ನಿಧಾನವಾಗಿ ಉಸಿರನ್ನು ಬಿಡುತ್ತಾ ಪಾರ್ಶಕ್ಕೆ ಬಾಗಬೇಕು. ಈ ಸ್ಥಿತಿಯಲ್ಲಿ ಸಹಜ ಉಸಿರಾಟ ನಡೆಸುತ್ತಾ ಹಾಯಾಗಿರಬೇಕು. ನಂತರ ಉಸಿರನ್ನು ತೆಗೆದುಕೊಳ್ಳುತ್ತಾ ಮೇಲಕ್ಕೆ ಬರಬೇಕು. ಕೈಯನ್ನು ತಿರುಗಿಸಿ, ಉಸಿರನ್ನು ಬಿಡುತ್ತಾ ಕೈಯನ್ನು ಇಳಿಸಿ ವಿಶ್ರಮಿಸಬೇಕು. ನಂತರ ಹೀಗೇ ಮತ್ತೊಂದು ಪಾರ್ಶಕ್ಕೆ ನಿಧಾನವಾಗಿ, ಶಿಸ್ತುಬದ್ಧವಾಗಿ ಮಾಡುವುದು.

    ನಿಧಾನವಾಗಿ, ದೇಹವನ್ನು ಬಿಗಿಗೊಳಿಸದೆ ಅಭ್ಯಾಸ ಮಾಡಬೇಕು. ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಅಭ್ಯಸಿಸಬೇಕು. ಒಮ್ಮೆ ಅಭ್ಯಾಸವಾದ ಮೇಲೆ 2-3 ಬಾರಿ ಮಾಡಬಹುದು.

    ಮಹಿಳೆಯರೇ, ಗಮನಿಸಿ! ಬೆನ್ನು ಬಲಗೊಳಿಸುತ್ತದೆ, ಬೊಜ್ಜು ಕರಗಿಸುತ್ತದೆ, ಈ ಯೋಗಾಸನ

    CODE RED! ವಿಶ್ವ ಸಂಸ್ಥೆಯ ಹವಾಮಾನ ಬದಲಾವಣೆ ವರದಿ ನೀಡಿದೆ, ಮಾನವರಿಗೆ ಎಚ್ಚರಿಕೆಯ ಕರೆ!

    ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಸಿಖ್ಖರು, ಹಿಂದೂಗಳನ್ನು ತೆರವುಗೊಳಿಸಿ: ಕಾಂಗ್ರೆಸ್ ನಾಯಕನ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts