More

    ಬಂತು ನೋಡಿ ಮದುವೆ ವಸ್ತ್ರಾಭರಣಗಳಿಗೆ ತಕ್ಕ ಡಿಸೈನರ್​ ಮಾಸ್ಕ್​… !!!

    ಲಾಕ್​ಡೌನ್’ನಿಂದಾಗಿ ಅದೆಷ್ಟೋ ಮದುವೆಗಳು ಮುಂದೂಡಲ್ಪಟ್ಟಿದ್ದರೆ, ಕೆಲ ಮದುವೆಗಳು ನಿರಾಡಂಬರವಾಗಿ ನೆರವೇರಿವೆ. ಲಾಕ್​ಡೌನ್ ಮುಗಿಯುವವರೆಗೂ ಕಾಯುವ ತಾಳ್ಮೆಯಿಲ್ಲದವರು ಆನ್​ಲೈನ್​​ನಲ್ಲೇ ಮದುವೆ ಮಾಡಿಕೊಂಡಿರುವ ಉದಾಹರಣೆಗಳೂ ಇವೆ.. ಲಾಕ್​ಡೌನ್​ನ ಈ ಸಂದರ್ಭದಲ್ಲಿ ಮದುವೆ ಹೇಗೆ ಆದರೂ ವಿಶೇಷವೇ ಎನಿಸುತ್ತದೆ. ಆದರೆ ಇವೆಲ್ಲದರ ಮಧ್ಯೆ ವಿವಾಹ ಮಹೋತ್ಸವದ ಮತ್ತೊಂದು ಸ್ವಾರಸ್ಯಕರ ಸಂಗತಿ ಇಲ್ಲಿದೆ.
    ಮೇ 22 ರಂದು ಗುವಾಹಟಿಯಲ್ಲಿ ನಡೆದ ಮದುವೆಯಲ್ಲಿ ವಧು-ವರರು ತಮ್ಮ ಮದುವೆ ಉಡುಗೆಗೆ ಹೊಂದುವಂಥದ್ದೇ ಕೈಮಗ್ಗದ ರೇಷ್ಮೆ ಮಾಸ್ಕ್ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಮಾಸ್ಕ್ ಧರಿಸುವುದು ಸುರಕ್ಷತೆ ಎಂಬ ಸಂದೇಶ ನೀಡುವುದರ ಜತೆಗೆ ಸಂದರ್ಭಕ್ಕೆ ತಕ್ಕಂತೆ ಆಡಂಬರದ ಪೋಷಾಕಿನೊಂದಿಗೆ ಅದೇ ರೀತಿಯ ವಿಶಿಷ್ಟ ಹಾಗೂ ಅನನ್ಯ, ನವೀನ ಶೈಲಿಯ ಮಾಸ್ಕ್​​​ನ್ನೂ ಧರಿಸಬಹುದು ಎಂಬುದನ್ನೂ ತೋರಿಸಿದ್ದಾರೆ. ಜತೆಗೆ, ಮಾಸ್ಕ್ ಮದುವೆಯ ವಿಶೇಷ ಅಲಂಕಾರಿಕ ವಸ್ತುಗಳಲ್ಲಿ ಒಂದಾಗಲಿದೆ ಎಂಬ ಸಂದೇಶ ಸಾರುವಂತಿದೆ ಈ ವಿಡಿಯೋ. ಈ ವಿವಾಹ ಮಹೋತ್ಸವದ ಹಲವು ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಲ್ಲಿ ವಧು ವರರು ಕೈಮಗ್ಗದ ರೇಷ್ಮೆ ಮುಖದ ಮುಖವಾಡಗಳನ್ನು ಧರಿಸಿರುವುದು ಆಕರ್ಷಣೀಯವಾಗಿದೆ.

    One of our ( DEEKAD STUDIOS) most awaited weddings of this year!! A brother from another mother,a very good friend with a kind heart and a very chilled out guy!! Bro you are amazing! And we feel very happy for a beautiful couple like you, God bless you both abundantly!! Nirmala you are fun and gorgeous!!You both are made for each other.. Well keeping in mind safety first, in this pandemic they chose to wear masks while getting married too and hence this pair of beautiful, gorgeous silk masks by PAGE 3 (Nandini Borkakati )making their day a little more special seeing these extreme conditions.. Hope everybody will take this positively and bless the couple.. #Pratyush_Weds_Nirmala…Cinematography – Deekad Studios ❤Make up & hair- Himadri Gogoi

    Kakali Das ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಮೇ 23, 2020

    ಅಸ್ಸಾಂನ ಪಾಟ್ ರೇಷ್ಮೆಯಿಂದ ತಯಾರಿಸಲಾದ ಮಾಸ್ಕ್​​​ ಅನ್ನು ಸಾಂಪ್ರದಾಯಿಕ ಕಿಂಗ್‌ಖಾಪ್ ಮೋಟಿಫ್‌ನಿಂದ ಅಲಂಕರಿಸಲಾಗಿದೆ. ವೈದ್ಯಕೀಯ ಸಿಬ್ಬಂದಿ ವೈದ್ಯಕೀಯ ಅನುಮೋದಿತ (ಸರ್ಜಿಕಲ್ ಅಪ್ರೂವ್ಡ್) ಮಾಸ್ಕ್ ಧರಿಸುವಂತೆ ಸಂದೇಶ ನೀಡುವುದು ಹಾಗೂ ನಾರು ಬಟ್ಟೆಯಿಂದ ತಯಾರಿಸಲಾದ ಮತ್ತು ವಿಶಿಷ್ಟ, ನವೀನ ವಿನ್ಯಾಸವಿರುವ ಮಾಸ್ಕ್​ ಧರಿಸಲು ಜನ ಸಾಮಾನ್ಯರನ್ನು ಪ್ರೋತ್ಸಾಹಿಸುವುದು ಈ ಮಾಸ್ಕ್ ವಿನ್ಯಾಸದ ಹಿಂದಿನ ಉದ್ದೇಶವಾಗಿದೆ ಎಂದು ಮಾಸ್ಕ್ ವಿನ್ಯಾಸಗೊಳಿಸಿದ ನಂದಿನಿ ಬೊರ್ಕಾಕಟಿ ಹೇಳಿದ್ದಾರೆ.
    ಮದುವೆ ಸಮಾರಂಭ ಮುಗಿಯುತ್ತಿದ್ದಂತೆ ಟಿಕ್‌ಟಾಕ್ ವಿಡಿಯೋ ಮತ್ತು ದಂಪತಿಯ ಹಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
    “ಇದು ವೈರಲ್ ಆಗುತ್ತದೆ ಎಂದು ನಾವು ಊಹಿಸಿರಲಿಲ್ಲ” ಎಂದು ಗುವಾಹಟಿಯ ಮೇಕಪ್ ಕಲಾವಿದರಾದ ಹಿಮಾದ್ರಿ ಗೊಗೊಯ್ ಹೇಳಿದ್ದಾರೆ.”ವಧುವನ್ನು ಅಲಂಕರಿಸಿದ ನಂತರ, ನಾನು ಟಿಕ್‌ಟಾಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದೆ. ಕೇವಲ 20 ಗಂಟೆಗಳಲ್ಲಿ 13 ಲಕ್ಷ ಬಾರಿ ವೀಕ್ಷಣೆಗೊಳಿಪಟ್ಟಿದೆ ಎಂದು ಅವರು ಹೇಳಿದ್ದಾರೆ.

    ಕಾಳಿಂಗ ಸರ್ಪಕ್ಕೆ ನಾಡಿನಲ್ಲಿ ನಡೆಯಿತು ತಣ್ಣೀರ ಮಜ್ಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts