More

    ಪುರಸಭೆ ಎದುರು ಮೌನ ಪ್ರತಿಭಟನೆ

    ಬಂಕಾಪುರ: ಪಟ್ಟಣದ ವಿವಿಧ ಸಮಸ್ಯೆಗಳನ್ನು ಇತ್ಯರ್ಥಪಡಿಸಿ, ಮಾಹಿತಿ ನೀಡುವಂತೆ ಆಗ್ರಹಿಸಿ ಪಟ್ಟಣದ ಸಾರ್ವಜನಿಕರು ಪುರಸಭೆ ಮುಂಭಾಗದಲ್ಲಿ ಗುರುವಾರ ಟೆಂಟ್​ಹಾಕಿ ಮೌನ ಪ್ರತಿಭಟನೆ ನಡೆಸಿದರು.

    ಪಟ್ಟಣದ ವಿವಿಧ ಸಮಸ್ಯೆಗಳಾದ ಪುರಸಭೆ ಹೆಸರಿನಲ್ಲಿರುವ ಗರಡಿಮನೆ ಜಾಗ ಕಬ್ಜಾ ಪಡೆಯುವುದು, ಸಮುದಾಯ ಆರೋಗ್ಯ ಕೇಂದ್ರದ ಹತ್ತಿರ ಸಂತೆ ಹಚ್ಚುವುದಕ್ಕೆ ಕಡಿವಾಣ ಹಾಕುವುದು, ಪುರಸಭೆ ವ್ಯಾಪ್ತಿಯಲ್ಲಿನ ಅನಧಿಕೃತ ಬಡಾವಣೆಗಳ ಮಾಲೀಕರ ಮೇಲೆ ಪುರಸಭೆ ತೆಗೆದುಕೊಂಡ ಕಾನೂನು ಕ್ರಮ, ಪುರಸಭೆ ಆಸ್ತಿಗಳ ರಕ್ಷಣೆಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಒದಗಿಸುವಂತೆ ಆಗ್ರಹಿಸಿ ಗಂಗಾಧರ ಮಾಮ್ಲೇಪಟ್ಟಣಶೆಟ್ಟರ, ಗುಡ್ಡಪ್ಪ ಮತ್ತೂರ, ಸೋಮಶೇಖರ ಗೌರಿಮಠ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

    ಸ್ಥಳಕ್ಕೆ ಭೇಟಿ ನೀಡಿ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಪುರಸಭೆ ಆಸಿ ್ತಗರಡಿಮನೆ)ಜಾಗದಲ್ಲಿ ಅನಧಿಕೃತವಾಗಿ ವಾಸವಾಗಿರುವ ನಿಸಾರಅಹ್ಮದ ಕಲಬುರಗಿ, ಮೆಹಬೂಬಸಾಬ ಜಕಾತಿ, ಸತ್ತಾರಸಾಬ ಬಾಗವಾನ, ಬಾಬುಸಾಬ ಮಕಾನದಾರ, ಅಬ್ದುಲ್​ಸತ್ತಾರ ಕೊಂಡವಾಡೆ ಅವರಿಗೆ ಮಾ. 3ರಂದು ನೋಟಿಸ್ ಜಾರಿ ಮಾಡಿ 7 ದಿನಗಳಲ್ಲಿ ತೆರವುಗೊಳಿಸುವಂತೆ ತಿಳಿಸಲಾಗಿದೆ. ಆರೋಗ್ಯ ಕೇಂದ್ರ ಹತ್ತಿರದ ವಾರದ ಸಂತೆಯನ್ನು ಅರ್ಧಭಾಗವನ್ನು ಈ ಹಿಂದಿನ ವಾರ ಸ್ಥಳಾಂತರಿಸಲಾಗಿದೆ. ಪೂರ್ಣ ಪ್ರಮಾಣದ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಪಟ್ಟಣದ ವ್ಯಾಪ್ತಿಯಲ್ಲಿ 33 ಅಧಿಕೃತ ಬಡಾವಣೆಗಳಿವೆ. ಅನಧಿಕೃತ ಬಡಾವಣೆಗಳ ಸರ್ವೆ ಕಾರ್ಯ ಪ್ರಗತಿಯಲ್ಲಿದ್ದು, ಬಡಾವಣೆ ಮಾಲೀಕರಿಗೆ ನಿಗದಿತ ಕಾಲಾವಧಿಯಲ್ಲಿ ಸಂಬಂಧಿಸಿದ ದಾಖಲಾತಿಗಳನ್ನು ಹಾಜರುಪಡಿಸುವಂತೆ ನೋಟಿಸ್ ನೀಡಲಾಗಿದೆ. ದಾಖಲೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.

    ಗಂಗಾಧರ ಮಾಮ್ಲೇಪಟ್ಟಣಶೆಟ್ಟರ ಪ್ರತಿಕ್ರಿಯಿಸಿ, ಮುಖ್ಯಾಧಿಕಾರಿ ನೀಡಿರುವ ಮಾಹಿತಿ ಸಮಂಜಸವಾಗಿಲ್ಲ. ಅವರು ನೀಡಿರುವ ಮಾಹಿತಿ ಕುರಿತು ಕಾನೂನು ಸಲಹೆ ಪಡೆದು ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

    ಎ.ಕೆ. ಆದವಾನಿಮಠ, ಶಿವಾನಂದ ದೇವಸೂರ, ಬಾನುದಾಸ ಸರ್ವದೇ, ಮಲ್ಲೇಶಪ್ಪ ಬಡ್ಡಿ, ರಾಘು ಕಬ್ಬೂರ, ರಾಮಕೃಷ್ಣ ಆಲದಕಟ್ಟಿ, ಆನಂದ ವಳಗೇರಿ, ಬಸಣ್ಣ ಬಳಿಗಾರ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts