More

    ಸಿಧು v/s ಸಿಎಂ : ಪಂಜಾಬ್​ ಕಾಂಗ್ರೆಸ್​ನ ಅಂತಃಕಲಹಕ್ಕೆ ಹೊಸ ಪರಿಹಾರ!

    ಚಂಡೀಗಡ/ನವದೆಹಲಿ : ಪಂಜಾಬ್​ ಕಾಂಗ್ರೆಸ್​ನಲ್ಲಿ ನಡೆಯುತ್ತಿದ್ದ ಅಂತಃಕಲಹಕ್ಕೆ ಶೀಘ್ರದಲ್ಲೇ ತೆರೆಬೀಳುವ ಸಾಧ್ಯತೆ ಇದೆ. ಸಿಎಂ ಕ್ಯಾಪ್ಟನ್ ಅಮರಿಂದರ್​ ಸಿಂಗ್ ಮತ್ತು ಮಾಜಿ ಸಚಿವ ನವಜೋತ್​ ಸಿಂಗ್​ ಸಿಧು ನಡುವಣ ಬಹಿರಂಗ ಜಟಾಪಟಿಗೆ ಪರಿಹಾರವಾಗಿ ಪಕ್ಷದ ಹೈಕಮ್ಯಾಂಡ್​ ಹೊಸ ಸೂತ್ರ ರೂಪಿಸಿದೆ. ಇದರನ್ವಯ, ಅಮರಿಂದರ್ ಸಿಂಗ್ ಸಿಎಂ ಆಗಿ ಮುಂದುವರಿಯಲಿದ್ದು, ಸಿಧುಗೆ ರಾಜ್ಯ ಕಾಂಗ್ರೆಸ್​ನ ಅಧ್ಯಕ್ಷಗಿರಿಯನ್ನು ನೀಡಲಾಗುವುದು ಎನ್ನಲಾಗಿದೆ.

    ಕಳೆದ ಹಲವು ತಿಂಗಳಿಂದ ಸಿಧು ಅವರು ಸಿಂಗ್​ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದು, ಈ ಬಗ್ಗೆ ದೆಹಲಿಗೆ ಹೋಗಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನೂ ಭೇಟಿ ಮಾಡಿ ಚರ್ಚೆ ಮಾಡಿದ್ದರು. ದೆಹಲಿ ನಾಯಕರನ್ನು ಭೇಟಿ ಮಾಡಿದ ಸಿಎಂ ಸಿಂಗ್​, ಹೈಕಮಾಂಡ್​ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದರು.

    ಇದನ್ನೂ ಓದಿ: ಡಿಕೆಶಿ ಮುಂದೆಯೇ ‘ಮುಂದಿನ ಸಿಎಂ ಸಿದ್ದರಾಮಯ್ಯ’ ಎಂಬ ಕೂಗು!

    ಇದೀಗ ರಾಜ್ಯ ಸರ್ಕಾರಕ್ಕೆ ಅಮರಿಂದರ್​ ಸಿಂಗ್​ ನೇತೃತ್ವವನ್ನು ಮುಂದುವರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮತ್ತೊಂದೆಡೆ, ಸಿಧು ಪಂಜಾಬ್​ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಲಿದ್ದಾರೆ. ಜೊತೆಗೆ, ಹಿಂದೂ ಮತ್ತು ದಲಿತ ಸಮುದಾಯಗಳಿಂದ ತಲಾ ಒಬ್ಬೊಬ್ಬರು ಕಾರ್ಯಕಾರಿ ಅಧ್ಯಕ್ಷರನ್ನೂ ನೇಮಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಈ ಬೆಳವಣಿಗೆಗಳ ಬಗ್ಗೆ ಇಂಡಿಯಾ ಟುಡೇ ಟಿವಿಯೊಂದಿಗೆ ಮಾತನಾಡಿರುವ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್, “ಒಂದೆರಡು ದಿನಗಳಲ್ಲಿ ಪರಿಹಾರವನ್ನು ಪ್ರಕಟಿಸುತ್ತೇವೆ. ಸಿಎಂ ಅಮರಿಂದರ್ ಸಿಂಗ್​ ನಾಯಕತ್ವದಲ್ಲೇ ಮುಂಬರಲಿರುವ ವಿಧಾನಸಭಾ ಚುನಾವಣೆ ಎದುರಿಸಲಿದ್ದೇವೆ. ಸಿಧು ಈ ರಾಜ್ಯದ ಭವಿಷ್ಯ. ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಥವಾ ಏನಾದರೂ ಹೇಳುವ ಮುನ್ನ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು” ಎಂದಿದ್ದಾರೆ. (ಏಜೆನ್ಸೀಸ್)

    ಪಾಕಿಸ್ತಾನಕ್ಕೆ ಸೇನೆಯ ಮಾಹಿತಿ ನೀಡುತ್ತಿದ್ದ ಐಎಸ್​ಐ ಏಜೆಂಟ್​ ಬಂಧನ

    ಅಕ್ರಮ ವಿದೇಶಿ ಪ್ರಜೆಗಳಿಗೆ ಸಿಸಿಬಿ ಶಾಕ್! ನಗರದಲ್ಲಿ ಭಾರೀ ರೇಯ್ಡ್​!

    VIDEO | ವೈರ್​ ಕಟ್​ ಮಾಡಲು ತೆವಳುತ್ತಾ ಬಂದ ವಿದ್ಯುತ್​ ಕಳ್ಳ! ವೈರಲ್ ಆಗಿದೆ ಈ ಫನ್ನಿ ವಿಡಿಯೋ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts