More

    ಜಗತ್ತಿಗೆ ಮಾದರಿಯಾಗಲಿ ಸಿದ್ಧಿವಿನಾಯಕ ದೇವಳ: ಪಲಿಮಾರು ಸ್ವಾಮೀಜಿ ಆಶೀರ್ವಚನ

    ಶಿರ್ವ: ಊರಿಗೆ ಹಿತವನ್ನು ಬಯಸಿ ಗ್ಯಾಬ್ರಿಯಲ್ ಅವರಿಗೆ ಪ್ರೇರಣೆ ನೀಡಿ ಶಿರ್ವದಲ್ಲಿ ನೆಲೆನಿಂತ ಜಗತ್ತಿನ ದೊಡ್ಡ ನಾಯಕ ಸಿದ್ಧಿವಿನಾಯಕ. ಇಡೀ ಜಗತ್ತಿಗೆ ಮಾದರಿಯಾಗುವ ದೇವಾಲಯವಾಗಿ ಬೆಳಗಲಿ ಎಂದು ಉಡುಪಿ ಶ್ರೀ ಪಲಿಮಾರು ಮಠದ ಹಿರಿಯ ಯತಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.
    ಗುರುವಾರ ಶಿರ್ವದಲ್ಲಿ ಶ್ರೀ ಸಿದ್ಧಿವಿನಾಯಕನ ಪರಮಭಕ್ತ ವಿಶ್ರಾಂತ ಉದ್ಯಮಿ ಗ್ಯಾಬ್ರಿಯಲ್ ನಜ್ರೆತ್ ಅವರು ತಮ್ಮ ಸ್ವಂತ ಜಮೀನಿನಲ್ಲಿ ತಮ್ಮ ತಂದೆ- ತಾಯಿ ನೆನಪಿಗಾಗಿ ನಿರ್ಮಿಸಿದ ಶ್ರೀ ಸಿದ್ಧಿವಿನಾಯಕ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

    ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ, ಕನ್ನರ್ಪಾಡಿ ಜ್ಯೋತಿಷ್ಯ ವಿದ್ವಾನ್ ಸಂದೀಪ್ ಉಪಾಧ್ಯಾಯ ನೇತೃತ್ವದಲ್ಲಿ ವೈದಿಕವೃಂದ, ದೇವಳದ ನಿರ್ಮಾತೃ ಗ್ಯಾಬ್ರಿಯಲ್ ನಜ್ರೆತ್, ದೇವಳ ನಿರ್ಮಾಣದ ಉಸ್ತುವಾರಿ ನಾಗೇಶ ಹೆಗ್ಡೆ ಉಭಯ ಶ್ರೀಗಳವರನ್ನು ಸ್ವಾಗತಿಸಿ ಪಾದಪೂಜೆ ನೆರವೇರಿಸಿದರು.
    ಪಲಿಮಾರು ಮಠದ ಹಿರಿಯ ವೈದಿಕರಾದ ಗಿರೀಶ್ ಉಪಾಧ್ಯಾಯ, ಪಡುಬೆಳ್ಳೆ ಪರಶುರಾಮ ಭಟ್, ಭಜಕ ವೃಂದದವರು ಉಪಸ್ಥಿತರಿದ್ದರು.

    ಶುಕ್ರವಾರ ಬ್ರಹ್ಮಕಲಶೋತ್ಸವ
    ಮೇ ತಿಂಗಳ ಆರಂಭದಲ್ಲಿ ನಡೆಯಬೇಕಾಗಿದ್ದ ದೇವಳದ ಪ್ರತಿಷ್ಠಾ ಮಹೋತ್ಸವ ಕೋವಿಡ್ ಲಾಕ್‌ಡೌನ್‌ನಿಂದ ಮುಂದೂಡಲ್ಪಟ್ಟಿದ್ದು, ಜುಲೈ 14ರಿಂದ 16ರ ವರೆಗೆ ಸರಳವಾಗಿ ನೆರವೇರುತ್ತಿದೆ. ಬುಧವಾರ ಸಂಜೆ ಬಿಂಬಾಧಿವಾಸ, ವಾಸ್ತು, ಅಘೋರಹೋಮ, ಗುರುವಾರ ಪೂರ್ವಾಹ್ನ ತತ್ವಹೋಮ, ಶಕ್ತಿಯಾಗ, ಪೀಠಿಕಾಯಾಗ, ಬಿಂಬ ಪ್ರತಿಷ್ಠಾಪನೆ, ರಾತ್ರಿ ಭದ್ರಮಂಡಲಪೂಜೆ, ಇತ್ಯಾದಿ ಪ್ರತಿಷ್ಠಾ ಧಾರ್ಮಿಕ ಅನುಷ್ಠಾನಗಳು ಕನ್ನರ್ಪಾಡಿ ಜ್ಯೋತಿಷ್ಯ ವಿದ್ವಾನ್ ಸಂದೀಪ್ ಉಪಾಧ್ಯಾಯರವರ ನೇತೃತ್ವದಲ್ಲಿ ಸಂಪನ್ನಗೊಂಡವು. ಶುಕ್ರವಾರ ಪೂರ್ವಾಹ್ನ ಧಾರ್ಮಿಕ ಅನುಷ್ಠಾನಗಳು, ಗಣಹೋಮ, ಬ್ರಹ್ಮಕಲಶೋತ್ಸವ, ರಾತ್ರಿ ಮಹಾರಂಗಪೂಜೆ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts