More

    ವಚನಗಳು ಸಂಸ್ಕಾರದ ದ್ವಾರಬಾಗಿಲು : ಶ್ರೀ ಸಿದ್ಧೇಶ್ವರ ಸ್ವಾಮೀಜಿ

    ವಿಜಯಪುರ: 12ನೇ ಶತಮಾನದಲ್ಲಿ ಶರಣರು ಬರೆದ ವಚನಗಳು ನಮಗೆಲ್ಲ ಒಳ್ಳೆಯ ಸಂಸ್ಕಾರದ ದ್ವಾರಬಾಗಿಲು ಇದ್ದಂತೆ ಎಂದು ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

    ಬಬಲೇಶ್ವರ ತಾಲೂಕಿನ ಸುಕ್ಷೇತ್ರ ಸಂಗಾಪುರ (ಎಸ್.ಎಚ್) ಗ್ರಾಮದಲ್ಲಿ ಬುಧವಾರ ನಡೆದ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ ಹೆಸರಿನ ದ್ವಾರಬಾಗಿಲು ಉದ್ಘಾಟನೆ ಹಾಗೂ ಕುಮಾರ ರಕ್ಷಿತ ಅಂಗಡಿ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

    ಬದುಕಿನ ಉದ್ದಕ್ಕೂ ಶರಣರ ನುಡಿಗಳನ್ನು ಪಾಲಿಸಬೇಕು. ನಮ್ಮ ಭಾರತ ದೇಶ ಹಳ್ಳಿಯ ನಾಡು. ಹಳ್ಳಿಯ ಸೌಂದರ್ಯತೆ, ಶಿಸ್ತನ್ನು ನಾವೆಲ್ಲ ಪ್ರೀತಿಯಿಂದ ಕಾಯ್ದುಕೊಳ್ಳಬೇಕು. ಶರಣರ ವಚನಗಳನ್ನು ಪಾಲಿಸುವುದು ಅವುಗಳನ್ನು ಪಠಣ ಮಾಡಿದರೆ ನಡೆದುಕೊಂಡರೆ ಶ್ರೀ ಕೂಡಲಸಂಗಮನ ದರ್ಶನವಾಗುತ್ತದೆ ಎಂದರು.

    ಇದೊಂದು ಅತ್ಯಮೂಲ್ಯವಾದ ಕಾರ್ಯಕ್ರಮ. ಪಾಲಕರು ಮಕ್ಕಳನ್ನು ಪ್ರೀತಿಯಿಂದ ಕಾಣಬೇಕು. ಒಳ್ಳೆಯ ಸಂಸ್ಕಾರ ವಿದ್ಯೆಯನ್ನು ಕಲಿಸುವ ತಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ವರ್ಷದ ದುಡಿಮೆಯ ಮಧ್ಯದಲ್ಲಿ ಒಳ್ಳೆಯ ಕಾರ್ಯಕ್ರಮಗಳು ಮಾಡುವುದರ ಮೂಲಕ ಸಂತೋಷವನ್ನು ಜೀವನವನ್ನು ನಡೆಸಬೇಕೆಂದರು.

    ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಗ್ರಾಮದ ಎಲ್ಲ ಹಿರಿಯರು ಕೂಡಿಕೊಂಡು ನಮ್ಮ ಗ್ರಾಮಕ್ಕೆ ಮಹಾದ್ವಾರದ ಅವಶ್ಯಕತೆ ಇದೆ ಎಂದು ಕೇಳಿಕೊಂಡಾಗ ಗುರುಲಿಂಗಪ್ಪ ಅಂಗಡಿ ಅವರು ತಮ್ಮ ಅನೇಕ ತೊಂದರೆಗಳ ನಡುವೆ ಲಕ್ಷಾಂತರ ರೂಪಾಯಿಯ ದ್ವಾರಬಾಗಿಲು ಕಟ್ಟಿಸುವುದರ ಮೂಲಕ ಒಳ್ಳೆಯ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

    ಸಾನಿಧ್ಯ ವಹಿಸಿದದ್ದ ಬಬಲೇಶ್ವರದ ಪಂಚಮಸಾಲಿ ಜಗದ್ಗುರು ಡಾ.ಮಹಾದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಇತರ ಶ್ರೀಗಳು ಆಗಮಿಸಿದ್ದರು. ರಾಜ್ಯ ಬೀಜ ಮತ್ತು ಸಾಯುವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ದಾನಮ್ಮ ಅಂಗಡಿ, ಗುರುಲಿಂಗಪ್ಪ ಅಂಗಡಿ, ಪ್ರಕಾಶ ಅಕ್ಕಲಕೋಟ, ಚಂದ್ರಶೇಖರ್ ಕವಟಗಿ, ವಿ.ಎಸ್.ಪಾಟೀಲ, ವಿವೇಕಾನಂದ ಡಬ್ಬಿ, ಕಲ್ಲಪ್ಪ ಕೊಡಬಾಗಿ, ಡಿ.ಜಿ.ಬಿರಾದಾರ, ಮಲ್ಲು ಕಲಾದಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಗಾಪುರ ಗ್ರಾಮದ ಹಿರಿಯರು, ಸುತ್ತಮುತ್ತಲಿನ ಗ್ರಾಮದ ರೈತ ಬಾಂಧವರು, ತಾಯಂದಿರು ಹಾಗೂ ಅಂಗಡಿ ಪರಿವಾರದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ವಿವಿಧ ಸಾಧನೆಗೈದ ಸಾಧಕರಿಗೆ ಹಾಗೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts