More

    ಸಿದ್ದರಾಮೇಶ್ವರರ ಕ್ರಾಂತಿ ಚಿರಸ್ಥಾಯಿ: ಶ್ರೀ ಬಸವಪ್ರಭು ಸ್ವಾಮೀಜಿ ಅಭಿಪ್ರಾಯ

    ದಾವಣಗೆರೆ: ಹನ್ನೆರಡನೇ ಶತಮಾನದಲ್ಲಿ ಶಿವಯೋಗಿ ಸಿದ್ದರಾಮೇಶ್ವರರು ಅನುಷ್ಠಾನಗೊಳಿಸಿದ ಸಾಮಾಜಿಕ ಕ್ರಾಂತಿ ಇಂದಿಗೂ ಶಾಶ್ವತವಾಗಿದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

    ವೆಂಕಾಭೋವಿ ಕಾಲನಿಯ ಶಿವಯೋಗಿ ಸಿದ್ದರಾಮೇಶ್ವರ ಸಂಸ್ಥಾನ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ 60ನೇ ವರ್ಷದ ರಥೋತ್ಸವ ಅಂಗವಾಗಿ ಲಿಂ.ಶ್ರೀ ಸಿದ್ದರಾಮೇಶ್ವರ ಸ್ವಾಮಿಗಳ ಅಮೃತ ಶಿಲೆಯ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಮಾತನಾಡಿದರು.

    ಸಮಾಜಮುಖಿ ಕಾರ್ಯ ಮಾಡುವವರು ಲೋಕದಲ್ಲಿ ಚಿರಂಜೀವಿಯಾಗುತ್ತಾರೆ. ಅಂಥವರಲ್ಲಿ ಶಿವಯೋಗಿ ಸಿದ್ದರಾಮರೂ ಒಬ್ಬರು. ಅವರೊಬ್ಬ ಮಹಾಯೋಗಿ ಆಗಿದ್ದರು. ಜನರನ್ನು ಆಶೀರ್ವದಿಸಿ ಉದ್ಧ್ದರಿಸಿದ್ದಾರೆ. ಕೆರೆಗಳನ್ನು ನಿರ್ವಿುಸಿ ಸಮಾಜೋಪಕಾರಿ ಆಗಿದ್ದಾರೆ. ಅವರ ಆದರ್ಶಗಳನ್ನು ಪಾಲಿಸಿದ ಸಿದ್ದರಾಮೇಶ್ವರ ಸ್ವಾಮೀಜಿ 75 ವರ್ಷಗಳ ಹಿಂದೆ ನಗರದಲ್ಲಿ ಸಿದ್ದರಾಮೇಶ್ವರ ಮಠ ಸ್ಥಾಪಿಸಿ ಜನರಿಗೆ ಧಾರ್ವಿುಕ ಸಂಸ್ಕಾರ ನೀಡಿದರು ಎಂದು ಸ್ಮರಿಸಿದರು.

    ಸಿದ್ದರಾಮೇಶ್ವರ ಸ್ವಾಮೀಜಿ ಬಾಲ ಬ್ರಹ್ಮಚಾರಿಯಾಗಿ ಹಿಮಾಲಯದಲ್ಲಿ ತಪಸ್ಸು ಮಾಡಿ ಯೋಗಿಯಾಗಿದ್ದರು. ಅವರನ್ನು ಗುರುತಿಸಿದ ಮುರುಘಾ ಶರಣರು 1999ರಲ್ಲಿ ಅವರಿಗೆ ವಯೋವೃದ್ಧ ಸಂದರ್ಭದಲ್ಲಿ ಸಮಾಜಸೇವಾ ದೀಕ್ಷೆ ನೀಡಿದರು. ನಂತರ ಭೋವಿ ಸಮುದಾಯವನ್ನು ಜಾಗೃತಿಗೊಳಿಸಿ ಸಮಾಜವನ್ನು ಕಟ್ಟಿದ ಕೀರ್ತಿ ಸಿದ್ದರಾಮೇಶ್ವರ ಸ್ವಾಮೀಜಿಗೆ ಸಲ್ಲುತ್ತದೆ ಎಂದು ಹೇಳಿದರು.

    ಶ್ರೀ ಇಮ್ಮಡಿ ಸಿದ್ದರಾಮ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಹಾವೇರಿಯ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ, ತುಮಕೂರಿನ ಶ್ರೀ ಮಹಾಲಿಂಗ ಸ್ವಾಮೀಜಿ, ಐಮಂಗಲದ ಶ್ರೀ ಹರಳಯ್ಯ ಸ್ವಾಮೀಜಿ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್ಪಿ ಸಿ.ಬಿ. ರಿಷ್ಯಂತ್, ಆನಂದಪ್ಪ, ಜಯಣ್ಣ, ಶೇಖರಪ್ಪ, ಗಣೇಶ್, ನಾಗರಾಜು, ಉಮಾ ಇತರರಿದ್ದರು.

    ಶಿಲೆಗಳು ಇತಿಹಾಸ ಉಳಿಸುವ ಕಾರ್ಯ ಮಾಡಲಿವೆ. ದಾರ್ಶನಿಕರ, ಶರಣರ, ಸಂತರ ಮೂರ್ತಿಗಳು ಅವರು ಸಮಾಜಕ್ಕೆ ನೀಡಿದ ಉತ್ತಮ ಕೆಲಸಗಳನ್ನು ಸ್ಮರಿಸಲಿವೆ ಎಂದರು. ಲಿಂ.ಸಿದ್ದರಾಮೇಶ್ವರ ಸ್ವಾಮೀಜಿ ತಮ್ಮ ವಾಕ್ ಸಿದ್ಧಿ್ದುಂದ ಜನರ ಕಷ್ಟಗಳನ್ನು ನಿವಾರಿಸಿದ್ದಾರೆ. ಅವರು ಕಾಯಕ ಮಾಡಿ ಮಠ ಕಟ್ಟಿದರೇ ಹೊರತಾಗಿ ಜೋಳಿಗೆ ಹಿಡಿಯಲಿಲ್ಲ.

    | ಶ್ರೀ ಇಮ್ಮಡಿ ಸಿದ್ದರಾಮ ಸ್ವಾಮೀಜಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts