More

    ನನ್ನ ಸಹೋದರರೆಲ್ಲರ ಹೆಸರಲ್ಲೂ ಗೌಡ ಇದೆ; ಕುರುಬರು ಅಂತ ಹೇಳಲು ಹಿಂಜರಿಕೆ ಇತ್ತು: ಸಿದ್ದರಾಮಯ್ಯ

    ಮೈಸೂರು: ಒಂದು ಕಾಲದಲ್ಲಿ ಕುರುಬರು ಅಂತ ಹೇಳಿಕೊಳ್ಳಲು ನಾಚಿಕೆ ಪಡುತ್ತಿದ್ದರು. ಕಾಲೇಜುಗಳಲ್ಲೂ ಕುರುಬರು ಎಂದು ಹೇಳಲು ಹಿಂಜರಿಕೆ ಇತ್ತು. ಹೀಗಾಗಿ ಬಹುತೇಕ ಕುರುಬರು ಗೌಡರು ಅಂತ ಹೇಳಿಕೊಳ್ಳುತ್ತಿದ್ದರು. ನನ್ನ ಸಹೋದರರೆಲ್ಲರ ಹೆಸರಲ್ಲೂ ಗೌಡ ಅಂತಲೇ ಇದೆ.

    – ಹೀಗೆಂದು ಹೇಳಿದವರು ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ. ಪ್ರದೇಶ ಕುರುಬರ ಸಂಘ ಮೈಸೂರಿನಲ್ಲಿ ಇಂದು ಆಯೋಜಿಸಿದ್ದ ಕನಕ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ತಮ್ಮ ಸಮುದಾಯದ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡರು.

    ಆಗೆಲ್ಲ ಕುರುಬ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದರು. ನಮ್ಮ ಊರಿನ ಎಲ್ಲರೂ ಗೌಡರು ಅಂತ ಬರೆದುಕೊಳ್ಳುತ್ತಿದ್ದರು. ನನಗೆ ಮಾತ್ರ ನಮ್ಮ ಮೇಷ್ಟ್ರು ಸಿದ್ದರಾಮಯ್ಯ ಅಂತ ಬರೆದುಕೊಂಡರು ಎಂದು ಅಂದಿನ ಪರಿಸ್ಥಿತಿಯನ್ನು ನೆನಪಿಸಿಕೊಂಡ ಸಿದ್ದರಾಮಯ್ಯ, ನಾನು ವಿಶ್ವನಾಥ್ ಸೇರಿ ಕಾಲೇಜು ದಿನಗಳಲ್ಲಿ ಕಾಳಿದಾಸ ವಿದ್ಯಾರ್ಥಿ ಬಳಗ ಅಂತ ಮಾಡಿದ್ದೆವು. ನಾನು ಅಧ್ಯಕ್ಷ, ಅವನು ಪ್ರಧಾನ ಕಾರ್ಯದರ್ಶಿ, ಇಡೀ ಮೈಸೂರು ಕಾಲೇಜುಗಳನ್ನೆಲ್ಲ ಸುತ್ತಾಡಿ ಎಲ್ಲರನ್ನೂ ಹುಡುಕಿ ಸಂಘ ಕಟ್ಟಿದ್ದೆವು. ಜಾತಿ ಹೆಸರು ಹೇಳಿಕೊಳ್ಳಲು ಕೆಲವರು ಅಂಜಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಹೇಗೋ ಎಲ್ಲರನ್ನೂ ಹುಡುಕಿ ಸೇರಿಸಿ ಸಂಘ ಉದ್ಘಾಟನೆ ಮಾಡಿ, ವಿದ್ಯಾರ್ಥಿ ಸಂಘಟನೆ ಮಾಡಿದೆವು. ಆಮೇಲೆ ಕುರುಬ ಅಂತ ಹೇಳಲು ಧೈರ್ಯ ಬಂತು ಎಂದು ಹೇಳಿದರು.

    ಕೊಪ್ಪಳದಲ್ಲಿ 1991ರಲ್ಲಿ ಎಂಪಿ ಚುನಾವಣೆಗೆ ನಿಂತಿದ್ದೆ, ಕನಕ ಜಯಂತಿ ಮಾಡಿದ ಮೇಲೆ ಆ ಭಯ ಹೋಗಿದೆ. ಕನಕದಾಸರಿಗೆ ಹೆಜ್ಜೆ ಹೆಜ್ಜೆಗೆ ಅವಮಾನವಾಗಿದೆ. ನಮ್ಮ ದೇಶದ ಜಾತಿ ವ್ಯವಸ್ಥೆ ನಿಂತ ನೀರಾಗಿದೆ, ಚಲನೆ ಇಲ್ಲದ ಕಡೆ ಬದಲಾವಣೆ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

    ಕಾಗಿನೆಲೆ ಕನಕ ಗುರುಪೀಠದ ಜಗದ್ಗುರುಗಳಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಶಾಸಕ ಡಾ.ಯತೀಂದ್ರ, ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಮುಂತಾದವರು ಉಪಸ್ಥಿತರಿದ್ದರು.

    ಮದ್ವೆ ಆಗದೆ 2 ವರ್ಷ ಒಂದೇ ರೂಮಲ್ಲಿದ್ರು ಬ್ಯೂಟಿಷಿಯನ್​-ಬಾರ್ಬರ್; ಕೊನೆಗೆ ಅವನ ಸಿಟ್ಟಿಗೆ ಅವಳ ಪ್ರಾಣವೇ ಹೋಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts