More

    ಇವರ ಮನೆ ಹಾಳಾಗ ಇವರು ಒಂದು ಮನೆ ಕೊಡಲಿಲ್ಲ ಬಡವರಿಗೆ; ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

    ಮೈಸೂರು: ಚುನಾವಣೆ ದಿನಾಂಕ ಪ್ರಕಟವಾದ ದಿನವೇ ಮಾಜಿ ಮುಖ್ಯಮಂತ್ರಿ ಸಿದ್ದರಾಮ್ಯ ಅವರು ಅಬ್ಬರ ಪ್ರಚಾರ ಶುರು ಮಾಡಿದ್ದಾರೆ. ಬಿಳುಗಲಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ ಮಾಡಿ ಭಾಷಣ ಮಾಡಿದ್ದಾರೆ.

    ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಭಾಷಣ ಮಾಡಿದ ಸಿದ್ದರಾಮ್ಯ ಅವರು, ಕಾರ್ಯಕ್ರಮದ ಆರಂಭದಲ್ಲಿ ಮಳೆ ಬಂತು. ಇದು ಶುಭ ಸೂಚನೆಯಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ಬರೆದುಕೊಟ್ಟರು. ಕೆಲವು ಸಮುದಾಯ, ಅನ್ಯಾಯಕ್ಕೆ ಒಳಗಾಗಿದ್ದವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದರು. ದೇಶದ ಸಂಪತ್ತು, ಅಧಿಕಾರ, ಶಿಕ್ಷಣ ಕೆಲವೇ ಜನರ ಕೈಯಲ್ಲಿ ಇರಬಾರದು. ಎಲ್ಲರಿಗೂ ಹಂಚಿಕೆ ಆಗಬೇಕು.ಸಂಪತ್ತು ಉತ್ಪಾದಿಸಿರುವವರು ಜನ. ಬೆವರು ಸುರಿಸಿದವರೇ ಮಾಲೀಕರಾಗಬೇಕು. ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆ ಹೋಗಲಾಡಿಸುವುದೇ ಅಧಿಕಾರದಲ್ಲಿ ಇರುವವರ ಜವಾಬ್ದಾರಿ. ಇದು ಆರ್‌ಎಸ್‌ಎಸ್, ಬಿಜೆಪಿಯವರಿಗೆ ಇಷ್ಟವಿಲ್ಲವೆಂದು ವಾಗ್ದಾಳಿ ಮಾಡಿದ್ದಾರೆ.

    ಇದನ್ನೂ ಓದಿ: ಬೈಕ್‌ಗೆ ಜೀಪ್ ಡಿಕ್ಕಿ; ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಐದು ಮಂದಿ ಮೃತ್ಯು
    ಇವರ ಮನೆ ಹಾಳಾಗ ಇವರು ಒಂದು ಮನೆ ಕೊಡಲಿಲ್ಲ ಬಡವರಿಗೆ. ನಾನು ಅಧಿಕಾರದಲ್ಲಿ ಇದ್ದಾಗ 15 ಲಕ್ಷ ಮನೆ ಕಟ್ಟಿಸಿ ಕೊಟ್ಟಿದ್ದೇವೆ. ನಾವು ಅಧಿಕಾರಕ್ಕೆ ಬಂದರೆ 20 ಲಕ್ಷ ಮನೆ ಕಟ್ಟಿಸಿ ಕೊಡುತ್ತೇವೆ. ಬೊಮ್ಮಾಯಿ ಮಾತು ಎತ್ತಿದ್ದರೆ ಧರ್ಮರಾಯನ ಥರ ಮಾತಾಡುತ್ತಾರೆ. 40% ಸರ್ಕಾರ ಇದು. ಬೆಂಗಳೂರಿನಲ್ಲಿ ಇದು 50% ಸರ್ಕಾರವಾಗಿದೆ. ಇಂಥವರಿಗೆ ಮತ ಹಾಕಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ.

    ಕಮೀಷನ್​ಗೆ ದಾಖಲೆ ಕೇಳುತ್ತಾರೆ. ಮಾಡಳ್ ವಿರೂಪಾಕ್ಷಪ್ಪ ಜೈಲಿಗೆ ಹೋಗಿದ್ದು ಯಾಕೆ.ಈಶ್ವರಪ್ಪ ಅಂತಾ ಒಬ್ಬ ಪೆದ್ದನಾಗಿದ್ದಾನೆ. ಅವನಿಗೆ ದಿನವೂ ಹಣ ಎಣಿಸೋದೆ ಕೆಲಸ. ತನ್ನ ಪಕ್ಷದ ಕಾರ್ಯಕರ್ತನಿಂದಲೇ ಈಶ್ವರಪ್ಪ ಕಮೀಷನ್ ತೆಗೆದು ಕೊಂಡಿದ್ದ. ಯಡಿಯೂರಪ್ಪ ಮನೆಯಲ್ಲೇ ಪೊಲೀಸ್ ನೇಮಕಾತಿ ನಡೆದಿದೆ.ಒಂದೊಂದು ಪೋಸ್ಟ್ ಗೆ 50 ರಿಂದ 80 ಲಕ್ಷ ವಸೂಲಿ ಮಾಡಿದ್ದಾರೆ. ಈ ಆರೋಪ ನಾನು ಮಾಡಿದ್ದಲ್ಲ. ಬಿಜೆಪಿಯ ಯತ್ನಾಳ್ ಮಾಡಿದ್ದು. ಇಂಥಹ ಭ್ರಷ್ಟ ಸರ್ಕಾರ ನಾನು ಯಾವತ್ತೂ ನೋಡಿಲ್ಲವೆಂದು ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಏ.1ರಿಂದ 2,000 ರೂ. ಕ್ಕಿಂತ ಹೆಚ್ಚಿನ ಯುಪಿಐ ವಹಿವಾಟುಗಳಿಗೆ 1.1% ವಿನಿಮಯ ಶುಲ್ಕ!
    ಬಿಜೆಪಿ ಅವರು ಕೋಟ್ಯಾಂತರ ರೂಪಾಯಿ ಲೂಟಿ ಹೊಡೆದಿದ್ದಾರೆ. ಚುನಾವಣೆಗೆ ಚೀಲ ಚೀಲ ಹಣ ತುಂಬಿ ಕೊಂಡು ಬರುತ್ತಾರೆ. ಆದಾಯ ತೆರಿಗೆ ಇಲಾಖೆ ಅವರಿಗೆ ಇದು ಕಣ್ಣಿಗೆ ಕಾಣುವುದಿಲ್ಲ. ಉಪ ಚುನಾವಣೆಯಲ್ಲಿ ಒಂದೊಂದು ಕ್ಷೇತ್ರದಲ್ಲಿ 20 – 30 ಕೋಟಿ ರೂಪಾಯಿ ವೆಚ್ಚ ಮಾಡಿತ್ತು. ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಚುನಾವಣೆ ಮಾಡಬೇಕು. ವಿರೋಧ ಪಕ್ಷದವರಿಗೆ ಚುನಾವಣಾ ಆಯೋಗ ಅನ್ಯಾಯ ಮಾಡಿ ಆಡಳಿತ ಪಕ್ಷದವರಿಗೆ ನ್ಯಾಯ ಮಾಡಬಾರದು ಎಂದು ಹೇಳಿದ್ದಾರೆ.

    ನಾನು 7 ಏಳು ಕೆಜಿ ಅಕ್ಕಿ ಕೊಡುತ್ತಿದ್ದೆ. ಇವರು ಅದನ್ನು 5 ಕೆಜಿಗೆ ಇಳಿಸಿದ್ದಾರೆ. ಇವರ ಅಪ್ಪನ‌ ಮನೆಯಿಂದ ಹಣ ತರುತ್ತಿದ್ದರ. ನಾವು ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಉಚಿತವಾಗಿ ನೀಡುತ್ತೇವೆ. ಎಲ್ಲಾ ಜನರಿಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ವ್ಯವಸ್ಥೆ ಮಾಡುತ್ತೇವೆ. ನನಗೂ ಫ್ರೀ, ಮಹದೇವಪ್ಪನಿಗೂ ಫ್ರೀ, ನಿಮಗೂ ಫ್ರೀ ಎಂದು ನುಡಿದಿದ್ದಾರೆ.

    ಇದನ್ನೂ ಓದಿ: ಆಶ್ಲೀಲ ಸಂಭಾಷಣೆ ಆಡಿಯೋ ಲೀಕ್ ಬೆನ್ನಲೇ ವಿಷ ಸೇವಿಸಿದ ಕ್ರಿಕೆಟ್‌ ಕೋಚ್!
    ದಲಿತರು, ಹಿಂದುಳಿದವರು, ಮಹಿಳೆಯರು, ರೈತರು ಬಿಜೆಪಿಗೆ ಮತ ಹಾಕಬಾರದು. ನಾನು ಎಸ್ಸಿ, ಎಸ್ಟಿ ಸಮುದಾಯಕ್ಕೆ ಗುತ್ತಿಗೆಯಲ್ಲಿ ಮೀಸಲಾತಿ ಜಾರಿ ಮಾಡಿದೆ. ಎಸ್ಸಿ, ಎಸ್ಟಿ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಮುಂಬಡ್ತಿ ಮೀಸಲಾತಿ ತೆಗೆದು ಹಾಕಿತು. ಈ ಕಾನೂನು ಮಾಡಿದ್ದು ದೇಶದಲ್ಲೇ ಮೊದಲು ಕಾಂಗ್ರೆಸ್ ಸರ್ಕಾರ. ಕೇಂದ್ರ ಸರ್ಕಾರ ದಲಿತರಿಗೆ ವಿರುದ್ಧವಾಗಿದ್ದಾರೆ. ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನ ಪ್ರಭ ನೇತೃತ್ವದಲ್ಲಿ ಸಮಿತಿ ಮಾಡಿದೆ. ಅವರ ವರದಿ ಆಧಾರದ ಮೇಲೆ ಮೀಸಲಾತಿಯಲ್ಲಿ ಮುಂಬಡ್ತಿ ನೀಡಿದ್ದು ಕಾಂಗ್ರೆಸ್ ಸರ್ಕಾರ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts