More

    ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಯಾವತ್ತು?: ಇಲ್ಲಿದೆ ಮಾಜಿ ಸಿಎಂ ಸಿದ್ದರಾಮಯ್ಯ ಲೆಕ್ಕಾಚಾರ

    ಮೈಸೂರು: ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಯಾವತ್ತು ಎನ್ನುವ ಕುತೂಹಲ ರಾಜಕೀಯ ಆಸಕ್ತರಿಗೆ ಇರುವಂಥದ್ದೇ. ಆದರೆ ಆ ಬಗ್ಗೆ ಇನ್ನೂ ಯಾವುದೇ ಖಚಿತ ನಿರ್ಧಾರ ಆಗಿರದಿದ್ದರೂ ಮಾಜಿ ಸಿಎಂ ಸಿದ್ದರಾಮಯ್ಯ, ಆ ಕುರಿತ ಭವಿಷ್ಯವನ್ನು ನುಡಿದಿದ್ದಾರೆ.

    ಮೈಸೂರಿನ ಸಮಾರಂಭದಲ್ಲಿ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ನವೆಂಬರ್​ನಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಬೇಕಿತ್ತು. ಆದರೆ ಆಡಳಿತಾರೂಢ ಬಿಜೆಪಿಯವರಿಗೆ ಚುನಾವಣೆ ನಡೆಸುವ ಆಸಕ್ತಿ ಇಲ್ಲ. ಅವರು ಕ್ಷೇತ್ರ ಪುನರ್ ವಿಂಗಡಣೆಗೆ ಹೊಸದೊಂದು ಆಯೋಗ ರಚಿಸಿದ್ದಾರೆ. ಆ ಆಯೋಗ ವರದಿ ಕೊಡುವುದು ಆರು ತಿಂಗಳಾಗುತ್ತೋ ಒಂದು ವರ್ಷವಾಗುತ್ತೋ ಗೊತ್ತಿಲ್ಲ. ಒಂದು ವೇಳೆ ವಿಧಾನಸಭಾ ಚುನಾವಣೆ ಬಳಿಕ ತಾಪಂ, ಜಿಪಂ ಚುನಾವಣೆ ಮಾಡಿದರೂ ಅಶ್ಚರ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

    ಇದನ್ನೂ ಓದಿ: ಅಂತೂ ಡ್ರೀಮ್​-11 ವಿರುದ್ಧ ಎಫ್​ಐಆರ್; ಆನ್‌ಲೈನ್ ಜೂಜಾಟದ ವಿರುದ್ಧ ಮೊದಲ ಕೇಸ್ ದಾಖಲು

    ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸುವ ಸಂಬಂಧ ಸರ್ಕಾರ ಅದಕ್ಕೆ ಅಗತ್ಯವಿರುವ ಕ್ಷೇತ್ರ ಪುನರ್​ ವಿಂಗಡಣಾ ಪ್ರಕ್ರಿಯೆಯನ್ನು ಜನವರಿಯೊಳಗೆ ಮುಗಿಸಿ ನಂತರ ಆದಷ್ಟು ಬೇಗ ಚುನಾವಣೆ ನಡೆಸುವುದಾಗಿ ತಿಳಿಸಿತ್ತು. ಆದರೆ ಈಗ ಸಿದ್ದರಾಮಯ್ಯ ಅದು ಅಷ್ಟು ಬೇಗ ಆಗುವುದಿಲ್ಲ ಎಂದು ಆರೋಪಿಸಿದ್ದಾರೆ.

    ‘ಸಮಂತಾಗೆ ಅಫೇರ್ಸ್​ ಇತ್ತು, ಮಕ್ಕಳನ್ನು ಬಯಸಿರಲಿಲ್ಲ, ಗರ್ಭಪಾತ ಆಗಿತ್ತು..’ ಎಂಬೆಲ್ಲ ಆರೋಪಗಳಿಗೆ ಅವರಿಂದಲೇ ಬಂತು ದಿಟ್ಟ ಉತ್ತರ

    ಬಿಬಿಎಂಪಿ ಬೇಜವಾಬ್ದಾರಿಗೆ ಬಾಲಕ ಬಲಿ; ಪಾಲಿಕೆ ಉದ್ಯಾನದ ಹೊಂಡಕ್ಕೆ ಬಿದ್ದು 9 ವರ್ಷದ ಹುಡುಗ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts