More

    ರೈತರಿಗೆ ಆಘಾತ ನೀಡಿದ ವರುಣ – ಅಪಾರ ಪ್ರಮಾಣದ ಭತ್ತ ಹಾನಿ

    ಸಿದ್ದಾಪುರ: ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಸುರಿದ ಮಳೆ ರೈತರಲ್ಲಿ ದಿಗಿಲು ಮೂಡಿಸಿದೆ. ಭತ್ತ ಕಟಾವು ಹಂತದಲ್ಲಿದ್ದು, ಮಳೆ ಮುಂದುವರಿದರೆ ನಷ್ಟದ ಆತಂಕ ಎದುರಾಗಿದೆ.

    ಕಾರಟಗಿ ಹೋಬಳಿಯಲ್ಲಿ 12.4 ಮಿ.ಮೀ. ಹಾಗೂ ಸಿದ್ದಾಪುರ ಹೋಬಳಿಯಲ್ಲಿ 4 ಮಿ.ಮೀ. ಮಳೆಯಾಗಿದೆ. ಹುಳ್ಕಿಹಾಳ, ಹುಳ್ಕಿಹಾಳ ಕ್ಯಾಂಪ್, ತೊಂಡಿಹಾಳ ಸೇರಿ ಇತರೆಡೆ ಆಲಿಕಲ್ಲು ಮಳೆ ಸುರಿದಿದೆ. ಸಿದ್ದಾಪುರ ಹಾಗೂ ಕಾರಟಗಿ ಭಾಗದಲ್ಲಿ ಸುಮಾರು 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಭತ್ತ ಕಟಾವು ಕಾರ್ಯ ನಡೆದಿದ್ದು, ಮಳೆ ಬರುತ್ತಿರುವುದು ರೈತರನ್ನು ಕಂಗಾಲಾಗಿಸಿದೆ.

    ಮಳೆಯಿಂದಾಗಿ ಭತ್ತದ ಕಾಳುಗಳು ಉದುರಿವೆ. ಕೆಲವೆಡೆ ಅಪಾರ ಪ್ರಮಾಣದ ಫಸಲು ನೆಲಕ್ಕೂರಗಿದೆ. ಸಿದ್ದಾಪುರದ ಎಪಿಎಂಸಿ ಪ್ರಾಂಗಣದಲ್ಲಿ ಭತ್ತದ ರಾಶಿ ಮಾಡಿದ್ದು, ಮಳೆಯಿಂದಾಗಿ ಭತ್ತದ ಕಣಗಳು ತೊಯ್ದಿವೆ. ಇದರಿಂದಾಗಿ ಭತ್ತವನ್ನು ಬೇರೆಡೆ ಸಾಗಿಸಲಾಗುತ್ತಿದೆ. ಇನ್ನೂ 15 ದಿನ ಮಳೆ ಬರದಿದ್ದರೆ ಒಳಿತು ಎಂಬುದು ಭತ್ತ ಬೆಳೆಗಾರರ ಅಭಿಲಾಷೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts