More

    ಕಲಬುರಗಿ ಪಿಡಿಎ ಕ್ಯಾಂಪಸ್‌ನಲ್ಲಿ ಸಿದ್ಧಗಂಗಾಶ್ರೀ ಪುತ್ಥಳಿ ಅನಾವರಣ

    ಕಲಬುರಗಿ: ಪ್ರತಿಷ್ಠಿತ ಹೈದರಾಚಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ (ಪಿಡಿಎ) ತಾಂತ್ರಿಕ ಕಾಲೇಜು ಪರಿಸರದಲ್ಲಿ ಪ್ರತಿಷ್ಠಾಪಿಸಿರುವ ನಡೆದಾಡುವ ದೇವರು ಖ್ಯಾತಿಯ ಕರ್ನಾಟಕ ರತ್ನ ತುಮಕೂರಿನ ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಪುತ್ಥಳಿ ಶನಿವಾರ ಅನಾವರಣಗೊಂಡಿತು. ಇದರೊಂದಿಗೆ ನಿತ್ಯವೂ ನಡೆದಾಡುವ ದೇವರು ಸ್ಫೂರ್ತಿಯ ಚಿಲುಮೆಯಾಗಿ ಆಶೀರ್ವಾದ ಮಾಡಲಿದ್ದಾರೆ.

    ಪಿಡಿಎ ಕ್ಯಾಂಪಸ್‌ನಲ್ಲಿ ಪೂರ್ವಾ ಭಿಮುಖವಾಗಿ ಪ್ರತಿಷ್ಠಾಪಿಸಿರುವ ಪೂಜ್ಯರ ಪುತ್ಥಳಿಯನ್ನು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅನಾವರಣಗೊಳಿಸಿದರು. ಕಲ್ಯಾಣ ಕರ್ನಾಟಕದಲ್ಲಿ ಸ್ಥಾಪನೆಗೊಳಿಸಿದ ಪೂಜ್ಯರ ಪ್ರಥಮ ಪುತ್ಥಳಿ ಎಂಬ ಹೆಗ್ಗಳಿಕೆಗೆ ಎಚ್‌ಕೆಇ ಸಂಸ್ಥೆ ಪಾತ್ರವಾಯಿತು.

    ಸಂಸ್ಥೆಯು ಹೊಸದಾಗಿ ಆರಂಭಿಸಿರುವ ಪೂಜ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಸಹ ಪೂಜ್ಯರು ಉದ್ಘಾಟಿಸಿದರು. ಹಿಂದುಳಿದ ಪ್ರದೇಶದಲ್ಲಿ ಇಂತಹ ಮಹತ್ವದ ಕೆಲಸ ಮಾಡುತ್ತಿರುವ ಹೈಕ ಶಿಕ್ಷಣ ಸಂಸ್ಥೆ ಈ ಭಾಗದ ಕಲ್ಪವೃಕ್ಷವಾಗಿದೆ. ತಾಂತ್ರಿಕ ಶಿಕ್ಷಣದಲ್ಲಿ ತನ್ನದೆ ಹೆಸರು ಮಾಡಿದೆ ಎಂದು ಶ್ಲಾಘಿಸಿದರು. ಖ್ಯಾತ ಉದ್ಯಮಿಗಳಾಗಿರುವ ಎಂಎಲ್‌ಸಿ ಬಿ.ಜಿ. ಪಾಟೀಲ್, ಎಚ್ಕೆಇ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ, ಉಪಾಧ್ಯಕ್ಷ ಡಾ.ಶಿವಾನಂದ ದೇವರಮನಿ, ಆಡಳಿತ ಮಂಡಳಿಯ ಡಾ.ಎಸ್.ಬಿ. ಕಾಮರಡ್ಡಿ, ಅರುಣಕುಮಾರ ಪಾಟೀಲ್, ವಿಜಯಕುಮಾರ ದೇಶಮುಖ, ನಾಗೇಂದ್ರಪ್ಪ ಮಂಠಾಳೆ, ಡಾ.ಶಿವಪುತ್ರಪ್ಪ ಹರವಾಳ ಸಾಕ್ಷಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts