More

    ಕೆಂಪುಹಾಸಿನ ಮೇಲೆ ಎಸ್​ಐಗೆ ವೀರೋಚಿತ ಸ್ವಾಗತ ನೀಡಿದ್ದೇಕೆ ಪೊಲೀಸರು? ಮಗನಿಗೂ ಸಿಕ್ತು ಸರ್ಕಾರಿ ಉದ್ಯೋಗ

    ಚಂಡಿಗಢ್​: ಲಾಕ್​ಡೌನ್​ಅನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪಂಜಾಬ್​ನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಜತೆಗೆ, ಈ ಅವಧಿಯನ್ನು ಮೇ 16ರವರೆಗೂ ವಿಸ್ತರಿಸಲಾಗಿದೆ. ಮನೆಯಿಂದ ಹೊರಬರಲು ಕೂಡ ಅಲ್ಲಿ ಪಾಸ್​ ಪಡೆಯಲೇಬೇಕು. ಪೊಲೀಸರು ಕೂಡ ಇದನ್ನು ಅಷ್ಟೇ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಇದರ ನಡುವೆಯೇ ಕಳೆದ ಏಪ್ರಿಲ್​ 12ರ ಬೆಳಗ್ಗೆ ಅಲ್ಲೊಂದು ಅಮಾನವೀಯ ಘಟನೆ ನಡೆದುಹೋಯ್ತು.

    ಪಟಿಯಾಲಾದ ತರಕಾರಿ ಮಾರುಕಟ್ಟೆಗೆ ಬೆಳ್ಳಂಬೆಳಗ್ಗೆ ಬಂದಿದ್ದ ನಿಹಾಂಗ್​ಗಳಿಗೆ ಪಾಸ್​ ಎಲ್ಲಿ ಎಂದು ಕರ್ತವ್ಯನಿರತ ಎಎಸ್​ಐ ಹರ್ಜಿತ್​ ಸಿಂಗ್​ ಕೇಳಿದ್ದರು. ಇದರಿಂದ ಕೆರಳಿದ ಗುಂಪು ಅವರ ಎಡಗೈಯನ್ನೇ ಕತ್ತರಿಸಿತ್ತು. ಬಳಿಕ ಗುರುದ್ವಾರದಲ್ಲಿ ಅಡಗಿದ್ದವರನ್ನು ಭಾರಿ ಪೊಲೀಸ್​ ಬಂದೋಬಸ್ತ್​ ಬಳಸಿ ಬಂಧಿಸಲಾಗಿತ್ತು.

    ಈ ನಡುವೆ, ಎಸ್​ಐ ಹರ್ಜಿತ್​ ಸಿಂಗ್​ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಂಡಿಗಢ್​ನ ಸ್ನಾತಕೋತ್ತರ ವೈದ್ಯಕೀಯ ಸಂಸ್ಥೆಗೆ ಸೇರಿಸಲಾಗಿತ್ತು. ತುಂಡಾಗಿದ್ದ ಕೈಯನ್ನು ಸತತ ಏಳು ತಾಸುಗಳವರೆಗೆ ಶಸ್ತ್ರಚಿಕಿತ್ಸೆ ನಡೆಸಿ ಮರುಜೋಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಎಎಸ್​ಐ ಕರ್ತವ್ಯ ನಿಷ್ಠೆ ಶ್ಲಾಘಿಸಿದ್ದ ಇಲಾಖೆ ಹರ್ಜಿತ್​ ಸಿಂಗ್​ ಅವರನ್ನು ಎಸ್​ಐ ಹುದ್ದೆಗೆ ಬಡ್ತಿಗೊಳಿಸಿತ್ತು.

    ಸತತ 18 ದಿನಗಳ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಹರ್ಜಿತ್​ ಸಿಂಗ್​ ಗುರುವಾರ ಆಸ್ಪತ್ರೆಯಿಂದ ಗುರುವಾರ ಡಿಸ್ಚಾರ್ಜ್​ ಆಗಿದ್ದಾರೆ. ಪಟಿಯಾಲಾದಲ್ಲಿ ಪೊಲೀಸ್​ ಇಲಾಖೆ ಹಾಗೂ ಸಾರ್ವಜನಿಕರು ಕೆಂಪುಹಾಸಿನ ಮೇಲೆ ಬರಮಾಡಿಕೊಂಡು ಅವರಿಗೆ ವೀರೋಚಿತ ಸ್ವಾಗತ ನೀಡಿದೆ. ಅಲ್ಲದೇ. ಇದರ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡಿದೆ.

    ಇನ್ನೊಂದು ವಿಶೇಷವೆಂದರೆ, ಹರ್ಜಿತ್​ ಸಿಂಗ್​ ಪುತ್ರ ಅರ್ಷ್​ಪ್ರೀತ್​ ಸಿಂಗ್​ಗೆ ಕಾನ್​ಸ್ಟೆಬಲ್​ ಹುದ್ದೆ ನೀಡಲಾಗಿದೆ. ಡಿಜಿಪಿ ದಿನಕರ್​ ಗುಪ್ತಾ ಖುದ್ದಾಗಿ ನೇಮಕಾತಿ ಪತ್ರವನ್ನು ಆಸ್ಪತ್ರೆಯಲ್ಲೇ ಹರ್ಜಿತ್​ ಸಿಂಗ್​ಗೆ ಹಸ್ತಾಂತರಿಸಿದ್ದಾರೆ. ಇದನ್ನು ಸಿಎಂ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ವಿಶೇಷ ಗೌರವ: ಹರ್ಜಿತ್​ ಸಿಂಗ್​ ನೇಮ್​ಪ್ಲೇಟ್​ಅನ್ನು ತಮ್ಮ ಎದೆಯ ಮೇಲೆ ಧರಿಸುವ ಮೂಲಕ ಪಂಜಾಬ್​ ಪೊಲೀಸರು ವಿಶೇಷ ಗೌರವ ಸಲ್ಲಿಸಿದ್ದರು.

    ಕೆಂಪುಹಾಸಿನ ಮೇಲೆ ಎಸ್​ಐಗೆ ವೀರೋಚಿತ ಸ್ವಾಗತ ನೀಡಿದ್ದೇಕೆ ಪೊಲೀಸರು? ಮಗನಿಗೂ ಸಿಕ್ತು ಸರ್ಕಾರಿ ಉದ್ಯೋಗ

    ಕರೊನಾಗೆ ಭಾರತದಲ್ಲಿಯೇ ಸಿದ್ಧವಾಗಿದೆ ಔಷಧ, ಕ್ಲಿನಿಕಲ್​ ಟ್ರಯಲ್​ಗೆ ಸಿಕ್ತು ಡಿಜಿಸಿಐ ಅನುಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts