More

    ಕರೊನಾಗೆ ಭಾರತದಲ್ಲಿಯೇ ಸಿದ್ಧವಾಗಿದೆ ಔಷಧ, ಕ್ಲಿನಿಕಲ್​ ಟ್ರಯಲ್​ಗೆ ಸಿಕ್ತು ಡಿಜಿಸಿಐ ಅನುಮತಿ

    ನವದೆಹಲಿ: ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಭಾರತದಲ್ಲಿಯೇ ಔಷಧ ಸಿದ್ಧವಾಗಿದೆ. ಮುಂಬೈ ಮೂಲದ ಕಂಪನಿ ಔಷಧ ಸಿದ್ಧಪಡಿಸಿದ್ದು, ರೋಗಿಗಳ ಮೇಲೆ ಪ್ರಯೋಗಿಸಲು ಭಾರತೀಯ ಔಷಧ ಮಹಾನಿಯಂತ್ರಕರಿಂದ ಅನುಮತಿ ಪಡೆದಿದೆ. ಜತೆಗೆ, ಭಾರತದಲ್ಲಿ ಕ್ಲಿನಿಕಲ್​ ಟ್ರಯಲ್​ಗೆ ಅನುಮತಿ ಪಡೆದ ಮೊದಲ ಕಂಪನಿ ಎನಿಸಿದೆ.

    ಗ್ಲೆನ್​ಮಾರ್ಕ್​ ಫಾರ್ಮಾ ಈ ಔಷಧ ತಯಾರಿಸಿದೆ. ಕೋವಿಡ್​-19 ಕಾಯಿಲೆಯ ಸಾಮಾನ್ಯ ಗುಣಲಕ್ಷಣ ಹೊಂದಿರುವ 150 ರೋಗಿಗಳ ಇದನ್ನು ಪ್ರಯೋಗಿಸಿ ಪರೀಕ್ಷೆ ನಡೆಸಲಿದೆ. ಇದಕ್ಕೆ ಡ್ರಗ್​ ಕಂಟ್ರೋಲರ್​ ಜನರಲ್​-ಡಿಜಿಸಿಐ ಅನುಮತಿ ನೀಡಿದೆ.

    ಆಂತರಿಕವಾಗಿಯೇ ಉತ್ಪಾದಿಸಲಾದ ಔಷಧೀಯ ಸಾಮಗ್ರಿಗಳನ್ನು ಒಳಗೊಂಡಿರುವ ಈ ಉತ್ಪನ್ನಕ್ಕೆ ‘ಫವಿಪಿರಾವಿರ್​’ ಎಂದು ನಾಮಕರಣ ಮಾಡಲಾಗಿದೆ. ಈ ಔಷಧ, ಶೀತಜ್ವರಕ್ಕೆ ಕಾರಣವಾಗುವ ವೈರಸ್​ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷ ಸುಶ್ರುತ ಕುಲಕರ್ಣಿ ಹೇಳಿದ್ದಾರೆ.

    ಕರೊನಾ ಸೋಂಕಿಗೆ ಒಳಗಾದ ಆಯ್ದ ರೋಗಿಗಳ ಮೇಲೆ ಕನಿಷ್ಠ 14 ದಿನ ಹಾಗೂ ಗರಿಷ್ಠ 28 ದಿನಗಳವರೆಗೆ ಚಿಕಿತ್ಸೆ ನೀಡಲಾಗುತ್ತದೆ. ಬಳಿಕ ಇದರ ಫಲಿತಾಂಶ ಹಾಗೂ ಪರಿಣಾಮಗಳನ್ನು ವಿಶ್ಲೇಷಿಸಲಾಗುತ್ತದೆ.

    ಫವಿಪಿರಾವಿರ್​ ಔಷಧ ಜಪಾನ್​ನಲ್ಲಿ ಈಗಾಗಲೇ ಪರಿಣಾಮಕಾರಿ ಎನಿಸಿರುವ, ಫುಜಿಫಿಲ್ಮ್​ ಟೊಯೋಮಾ ಕೆಮಿಕಲ್ಸ್​ ಕಂಪನಿಯ ಆವಿಗಾನ್​ ಮಾತ್ರೆಯ ಜನೌಷಧ (ಜನರಿಕ್​) ರೂಪವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಮೆರಿಕ, ಚೀನಾ, ಜಪಾನ್​ಗಳಲ್ಲಿ ಈಗಾಗಲೇ ಕೋವಿಡ್​-19 ಔಷಧದ ಕ್ಲಿನಿಕಲ್​ ಟ್ರಯಲ್​ಗಳನ್ನು ನಡೆಸಲಾಗುತ್ತಿದೆ.

    ಕರೊನೋತ್ತರ ವಿಶ್ವದಲ್ಲಿ ಭಾರತವಾಗಲಿದೆ ಆರ್ಥಿಕ ಸೂಪರ್​ ಪವರ್​, ಜಾಗತಿಕ ಅರ್ಥ ವ್ಯವಸ್ಥೆ ಮರುಚಿಂತನೆಗೆ ಭಾರತದ ಮುಂದಾಳತ್ವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts