More

    ಕರೊನೋತ್ತರ ವಿಶ್ವದಲ್ಲಿ ಭಾರತವಾಗಲಿದೆ ಆರ್ಥಿಕ ಸೂಪರ್​ ಪವರ್​, ಜಾಗತಿಕ ಅರ್ಥ ವ್ಯವಸ್ಥೆ ಮರುಚಿಂತನೆಗೆ ಭಾರತದ ಮುಂದಾಳತ್ವ

    ನವದೆಹಲಿ: ಅಂತಾರಾಷ್ಟ್ರೀಯ ಆರ್ಥಿಕ ಸಂಸ್ಥೆಗಳು ಮಂಡಿಸುವ ದೇಶದ ಜಿಡಿಪಿ ಬೆಳವಣಿಗೆಯ ಅಂಕಿ-ಅಂಶಗಳು ಕಳವಳಕಾರಿಯೇ ಇರುತ್ತವೆ. ಪ್ರಸ್ತುತ ಭಾರತದ ಆರ್ಥಿಕತೆಯ ಬೆಳವಣಿಗೆಯ ದರವನ್ನು ಶೇ.1.8ಕ್ಕೆ ಕೆಲ ಸಂಸ್ಥೆಗಳು ಮಿತಿಗೊಳಿಸಿವೆ.

    ಈ ವಿಚಾರ ಏನೇ ಇರಲಿ, ಕರೋನೋತ್ತರ ವಿಶ್ವದಲ್ಲಿ ಆರ್ಥಿಕ ವ್ಯವಸ್ಥೆ ಬಗ್ಗೆ ಎಲ್ಲ ದೇಶಗಳು ಮರುಚಿಂತನೆ ನಡೆಸಬೇಕಿದೆ. ಈ ಜಾಗತಿಕ ವಿದ್ಯಮಾನಕ್ಕೆ ನಾಯಕತ್ವ ವಹಿಸಬಲ್ಲ ಶಕ್ತಿ ಭಾರತಕ್ಕಿದೆ ಎಂದು ಆರ್​ಬಿಐನ ಮಾಜಿ ಗ ವರ್ನರ್​ ರಘುರಾಮ್​ ರಾಜನ್​ ಹೇಳಿದ್ದಾರೆ.

    ಆರ್​ಬಿಐ ಗವರ್ನರ್​ ಸ್ಥಾನ ತೊರೆದ ಬಳಿಕ ಹಲವು ಬಾರಿ ದೇಶದ ಆರ್ಥಿಕ ಸ್ಥಿತಿ ಬಗ್ಗೆ ಹಲವು ಬಾರಿ ಕಳವಳ ವ್ಯಕ್ತಪಡಿಸಿದ್ದ ರಘುರಾಮ್​ ರಾಜನ್​ ಭಾರತಕ್ಕಿಇರುವ ಶಕ್ತಿ ಕುರಿತು ಭರವಸೆಯ ಮಾತುಗಳನ್ನಾಡಿದ್ದಾರೆ. ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರೊಂದಿಗಿನ ಸಂವಾದದಲ್ಲಿ ಈ ಮಾತುಗಳನ್ನು ಹೇಳಿರುವುದು ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ ಎನ್ನಬಹುದು.

    ಕರೊನಾ ವೈರಸ್​ನಿಂದ ಜಾಗತಿಕ ಆರ್ಥಿಕ ವ್ಯವಸ್ತೆಯಲ್ಲಾಗುತ್ತಿರುವ ಹಲವು ಬದಲಾವಣೆ ಹಾಗೂ ವಿವಿಧ ಆಯಾಮಗಳ ಬಗ್ಗೆ ಇಬ್ಬರು ಚರ್ಚೆ ನಡೆಸಿದರು. ಸಂಕಷ್ಟದ ಸ್ಥಿತಿಯಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಭಾರತ ಯಾವ ರೀತಿ ತನಗೆ ಅನುಕೂಕರವಾಗಿ ಬಳಸಿಕೊಳ್ಳಬಹುದು ಎಂಬ ಪ್ರಶ್ನೆಗೆ ರಾಜನ್​ ಉತ್ತರಿಸಿದರು.

    ಕರೊನಾ ಸಂಕಷ್ಟ ಯಾವ ದೇಶಗಳಲ್ಲೂ ಆಶಾದಾಯಕ ಬೆಳವಣಿಗೆಗಳನ್ನು ಉಂಟು ಮಾಡಿಲ್ಲ. ಆದರೆ, ಎಲ್ಲ ರಾಷ್ಟ್ರಗಳು ಆರ್ಥಿಕತೆ ಬಗ್ಗೆ ಮರು ಚಿಂತನೆ ನಡೆಸುವಂತೆ ಮಾಡಿದೆ. ಚಿಂತನೆಗೆ ಸೂಕ್ತ ಸ್ವರೂಪ ನೀಡುವ ನಿಟ್ಟಿನಲ್ಲಿ ಭಾರತ ನಾಯಕತ್ವ ವಹಿಸಬಹುದು, ಸಂವಾದವನ್ನು ಮುನ್ನಡೆಸಬಹುದು ಎಂದು ಹೇಳಿದರು.

    ಜಾಗತಿಕ ಆರ್ಥಿಕ ವಿದ್ಯಮಾನಗಳಿಗೆ ಭಾರತ ವಿರೋಧಿ ಬಣವೇನಲ್ಲ, ಬದಲಾಗಿ ತನ್ನ ದನಿಯನ್ನು ಕೇಳಲೇಬೇಕಾದ ಅನಿವಾರ್ಯತೆ ಉಂಟು ಮಾಡ ಬಲ್ಲ ಶಕ್ತಿ ಹೊಂದಿದೆ. ಕರೊನಾ ಸಂಕಷ್ಟ ಮುಗಿದ ನಂತರ ಅವಕಾಶ ದೊರೆತದ್ದೇ ಆದಲ್ಲಿ, ಅದು ಅಂಥ ಸಂವಾದವನ್ನು ರೂಪಿಸುವ ಅವಕಾಶವಾಗಿರಲಿದೆ ಎಂದು ರಾಜನ್​ ಹೇಳಿದ್ದಾರೆ.

    ಲಾಕ್​ಡೌನ್​ ಸಮಯದಲ್ಲಿ ನಿಮ್ಮ ವಾಹನ ಪೊಲೀಸರು ವಶಪಡಿಸಿಕೊಂಡಿದ್ದರೆ ನಾಳೆಯಿಂದ ಮರಳಿ ಪಡೆಯಬಹುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts