More

    ಚಂದ್ರಶೇಖರ ಪಾಟೀಲ್​ ಗೆಲುವು ಖಚಿತ

    ಕೊಪ್ಪಳ: ವಿಪ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್​ನಿಂದ ಚಂದ್ರಶೇಖರ ಪಾಟೀಲ್​ ಮತ್ತೊಮ್ಮೆ ಸ್ಪರ್ಧಿಸಿದ್ದು, ಗೆಲ್ಲುವ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

    ನಗರದ ಜಿಲ್ಲಾ ಕಾಂಗ್ರೆಸ್​ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

    ಪರಿಷತ್​ನಲ್ಲಿ ಪದವೀಧರರು, ಶಿಕ್ಷಕರ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಕ್ಷೇತ್ರ ವ್ಯಾಪ್ತಿ ತುಂಬಾ ವಿಶಾಲವಾಗಿದೆ. ನಮ್ಮ ಅಭ್ಯರ್ಥಿ ಜಿಲ್ಲೆಗೆ ಬರುವುದು ಕೊಂಚ ವಿಳಂಬವಾಗಿದೆ. ಪದವೀಧರರು ಬುದ್ಧಿವಂತರು ಸುಳ್ಳು ಹೇಳುವ ಬಿಜೆಪಿ ಗೆಲ್ಲಿಸುವುದಿಲ್ಲ. ಈಗಾಗಲೇ ನಾವು ನಮ್ಮ ಕಾರ್ಯಕರ್ತ ಸಭೆ ನಡೆಸಿದ್ದೇವೆ. ಮತದಾರರಿಗೂ ಕರೆ ಮಾಡಿ ಸಂಪರ್ಕ ಮಾಡುತ್ತಿದ್ದೇವೆ ಎಂದರು.

    ಅಭ್ಯರ್ಥಿ ಚಂದ್ರಶೇಖರ ಪಾಟೀಲ್​ ಮಾತನಾಡಿ, ಜೂ.3ರಂದು ಚುನಾವಣೆ ನಡೆಯಲಿದೆ. ಪದವೀಧರರು ಮತ್ತು ಶಿಕ್ಷಕರ ಸಮಸ್ಯೆಗಳು ಬಗ್ಗೆ ನನಗೆ ಅರಿವಿದೆ. ನನ್ನ ಕೆಲಸಗಳನ್ನು ಮೆಚ್ಚಿ ಪಕ್ಷ ಟಿಕೆಟ್​ ನೀಡಿದೆ. ಜತೆಗೆ ಆರು ಪದವೀಧರ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕೆಪಿಸಿಸಿ ಕಾರ್ಯದರ್ಶಿ ವಸಂತಕುಮಾರ, ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್​ ಬಯ್ಯಾಪೂರ, ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ವಿಪ ಮಾಜಿ ಸದಸ್ಯ ಶರಣಪ್ಪ ಮಟ್ಟೂರು, ರಾಜಶೇಖರ ಹಿಟ್ನಾಳ, ಗ್ಯಾರಂಟಿ ಯೋಜನೆ ಸಮತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಕೃಷ್ಣಾ ಇಟ್ಟಂಗಿ, ಕೃಷ್ಣಾರಡ್ಡಿ ಗಲಿಬಿ, ಗಾಳೆಪ್ಪ ಪೂಜಾರ ಇತರರಿದ್ದರು.

    ಬಿಜೆಪಿ ಆಡಳಿತದಲ್ಲಿ ಕೊಲೆಗಳು ಆಗಿಲ್ವಾ ?
    ಹುಬ್ಬಳ್ಳಿ ಯುವತಿ ಕೊಲೆ ಖಂಡನೀಯ. ಆದರೆ, ಬಿಜೆಪಿಯವರ ಆಡಳಿತದಲ್ಲಿ ಕೊಲೆಗಳು ಆಗಿಲ್ಲವಾ ? ಸುಮ್ಮನೆ ರಾಜಕಾರಣ ಮಾಡುವುದಲ್ಲ. ಆರೋಪಿ ಬಂಧಿಸಿದ್ದು ಕ್ರಮ ಆಗಲಿದೆ ಎಂದು ಸಚಿವ ತಂಗಡಗಿ ಹೇಳಿದರು.

    ಈಗಾಗಲೇ ಎರಡು ಘಟನೆಗಳ ಬಗ್ಗೆ ಸಭೆ ಮಾಡಲಾಗಿದೆ. ಇಂತಹ ಕೃತ್ಯಗಳನ್ನು ನಾವು ಸಹಿಸುವುದಿಲ್ಲ. ದುಷ್ಟರು ಎಲ್ಲೆಡೆ ಇರುತ್ತಾರೆ. ಅವರನ್ನು ಮಟ್ಟ ಹಾಕಲಾಗುವುದು. ಸಂಸದ ಪ್ರಜ್ವಲ್​ ರೇವಣ್ಣನನ್ನು ಕರೆದುಕೊಂಡು ಬರಬೇಕಾಗಿದ್ದು ಕೇಂದ್ರ ಸರ್ಕಾರ. ತನಿಖೆಗೆ ಅಗತ್ಯ ಸಹಕಾರ ನೀಡಬೇಕು. ಜೆಡಿಎಸ್​ ಮಿತ್ರಪಕ್ಷವಾದ ಕಾರಣ ಸಹಕಾರ ನೀಡುತ್ತಿಲ್ಲ ಎಂದರು.

    ರಾಜ್ಯದಲ್ಲಿ ಕಾಂಗ್ರೆಸ್​ ಸರಕಾರ ಪತನವಾಗುತ್ತದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಗರು ಸ್ವ- ಸಾಮರ್ಥ್ಯದಿಂದ ಗೆದ್ದ ಉದಾಹರಣೆ ಇಲ್ಲ. ಕರ್ನಾಟಕದಲ್ಲಿ ಅಂತಹ ಪರಿಸ್ಥಿತಿ ಬರುವುದಿಲ್ಲ. ನಮ್ಮ ಶಾಸಕರು ಎಲ್ಲಿಗೂ ಹೋಗಲ್ಲ ಸರ್ಕಾರ ಬೀಳುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts