More

    ಮಾವನ ಜತೆ ಸೇರಿ ಡಕಾಯಿತಿ ಮಾಡಿದ ಸಬ್​ ಇನ್​ಸ್ಪೆಕ್ಟರ್; 26.50 ಲಕ್ಷ ರೂ. ದರೋಡೆ ಮಾಡಿದ್ದವರ ಸೆರೆ

    ಬೆಂಗಳೂರು: ವೃತ್ತಿಯಲ್ಲಿ ಸಬ್​ ಇನ್​ಸ್ಪೆಕ್ಟರ್​ ಆಗಿದ್ದರೂ ಮಾಡಿದ್ದು ಮಾತ್ರ ಪಕ್ಕಾ ದರೋಡೆ. ಸಿನಿಮೀಯ ಶೈಲಿಯಲ್ಲಿ ವ್ಯಕ್ತಿಯನ್ನು ಅಪಹರಿಸಿ ಆತನ ಬಳಿದ್ದ 26.50 ಲಕ್ಷ ರೂ. ದರೋಡೆ ಮಾಡಿದ್ದ ಎಸ್​ಐ ಹಾಗೂ ಆತನ ಮಾವನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಕಳೆದ ಬುಧವಾರ (ಆಗಸ್ಟ್​ 19) ಶಿವಕುಮಾರ್​ ಎಂಬುವರು ತನ್ನ ಮಾಲೀಕ ಮೋಹನ್​ ತಿಳಿಸಿದ್ದಂತೆ ಕುಂಬಾರಪೇಟೆಯ ಭರತ್​ ಎಂಬುವರಿಂದ 26.50 ಲಕ್ಷ ರೂ. ಪಡೆದುಕೊಂಡು ಚಿಕ್ಕಪೇಟೆಯ ಮೆಟ್ರೋ ನಿಲ್ದಾಣದ ಬಳಿ ಕಾರಿನಲ್ಲಿ ಕುಳಿತಿದ್ದರು.

    ಇದನ್ನೂ ಓದಿ; ಲಾಕ್​ಡೌನ್ ನಡುವೆಯೂ ಹೊಸ ಕೆಲಸ ಗಿಟ್ಟಿಸಿಕೊಂಡ ಅದೃಷ್ಟಶಾಲಿಗಳಿವರು…! 

    ಕೆಲ ಹೊತ್ತಿನಲ್ಲಿಯೇ ಅಲ್ಲಿಗೆ ಬಂದ ಕೆಲವರು ಶಿವಕುಮಾರ್​ನನ್ನು ಬೆದರಿಸಿ ಮೊಬೈಲ್​ಗಳನ್ನು ಕಿತ್ತುಕೊಂಡಿದ್ದಾರೆ. ಶಿವಕುಮಾರ್​ನನ್ನು ಬೆದರಿಸಿ ಕಾರನ್ನು ತಾವು ಹೇಳುವ ಕಡೆಗೆ ಚಲಾಯಿಸಬೇಕೆಂದು ಹೇಳಿದ್ದಾರೆ. ಅಲ್ಲಿಂದ ಯುನಿಟಿ ಕಟ್ಟಡದ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಹಿಂಬಾಲಿಸಿಕೊಂಡು ಬರುತ್ತಿದ್ದ ಮತ್ತೊಂದು ಕಾರಿನಲ್ಲಿದ್ದ ಕೆಲವರು ಶಿವಕುಮಾರ್​ ಬಳಿಯಿದ್ದ ಹಣವನ್ನು ಕಸಿದುಕೊಂಡು ಬಳಿಕ ಆತನನ್ನು ಲಾಲ್​ಬಾಗ್​ ಬಳಿ ಬಿಟ್ಟು ಕಳುಹಿಸಿದ್ದಾರೆ.

    ಈ ಇಡೀ ಪ್ರಕರಣದಲ್ಲಿ ಯೂನಿಫಾರ್ಮ್​ನಲ್ಲಿದ್ದುಕೊಂಡೇ ಸಾಥ್​ ನೀಡಿದ್ದು, ಎಸ್​ಜೆ ಪಾರ್ಕ್​ ಠಾಣೆ ಸಬ್​ ಇನ್​ಸ್ಪೆಕ್ಟರ್​ ಜೀವನ್​ಕುಮಾರ್​. ಈ ಡಕಾಯಿತಿಗೆ ಪ್ಲಾನ್​ ರೂಪಿಸಿದ್ದು, ಪತ್ರಕರ್ತ ಜ್ಞಾನಪ್ರಕಾಶ್. ಈ ಜ್ಞಾನಪ್ರಕಾಶ್​ನ ಅಣ್ಣನ ಮಗಳನ್ನೇ ಈ ಜೀವನ್​ಕುಮಾರ್​ ಮದುವೆಯಾಗಿದ್ದಾನೆ. ಸುಲಭವಾಗಿ ಹಣ ಸಂಪಾದಿಸುವ ಹುಚ್ಚಿಗೆ ಬಿದ್ದು, ಮಾವನೊಂದಿಗೆ ಸೇರಿ ಡಕಾಯಿತಿ ಮಾಡಿದ್ದಾನೆ.

    ಇದನ್ನೂ ಓದಿ; ವಾಹನ ಸವಾರರಿಗೆ ಶುಭ ಸುದ್ದಿ; ಡಿ.31ರವರೆಗೂ ಲೈಸೆನ್ಸ್​, ದಾಖಲೆಗಳ ಮಾನ್ಯತಾ ಅವಧಿ ವಿಸ್ತರಣೆ 

    ಈ ಡಕಾಯಿತಿಗೆ ನಡೆಸಲು ಕಾರಣನಾದವನು ಕಿಶೋರ್​. ಈತ ಶಿವಕುಮಾರ್​​ ಬಳಿ ಹಣವಿರುವುದನ್ನು ಜ್ಞಾನಪ್ರಕಾಶ್​ಗೆ ತಿಳಿಸಿದ್ದ. ಹೀಗಾಗಿ ಅಳಿಯ ಜೀವನ್​ಕುಮಾರ್​ ಜತೆ ಸೇರಿ ಡಕಾಯಿತಿ ನಡೆಸಿ ಹಣ ಹಂಚಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

    ಮೆಟ್ರೋ ರೈಲು ಶುರುವಾಗುತ್ತೆ, ಶಾಲಾ- ಕಾಲೇಜುಗಳು ಮುಚ್ಚಿರುತ್ತೆ; ಅನ್​ಲಾಕ್​ 4.0 ಹೀಗಿರುತ್ತೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts