More

    ಉಭಯ ಗಾನವಿದುಷಿಯ ಚಿತ್ರರಂಗದ ನಂಟು …

    ಇಂದು ನಿಧನರಾದ ಉಭಯ ಗಾನವಿದುಷಿ ಶ್ಯಾಮಲಾ ಜಿ ಭಾವೆ ಅವರು ಹಿಂದೂಸ್ಥಾನಿ ಹಾಗೂ ಕರ್ನಾಟಕ ಸಂಗೀತ ಪದ್ಧತಿಗಳೆರಡರಲ್ಲೂ ನಿಷ್ಣಾತರಾಗುವುದರ ಜತೆಗೆ, ಸಿನಿಮಾ ಸಂಗೀತದಲ್ಲೂ ಗುರುತಿಸಿಕೊಂಡಿದ್ದರು ಎಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ.

    ಇದನ್ನೂ ಓದಿ: ರಂಜಾನ್​ ಹಬ್ಬಕ್ಕೆ ರಾಬರ್ಟ್​ ಕಡೆಯಿಂದ ಈ ಉಡುಗೊರೆ!

    ಹೌದು, ಶ್ಯಾಮಲಾ ಭಾವೆ ಅವರು ಒಂದೆರೆಡು ಚಿತ್ರಗಳಲ್ಲಿ ಹಾಡುವುದರ ಜತೆಗೆ, ಒಂದು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದರು ಎನ್ನುವುದು ವಿಶೇಷ.

    1976ರಲ್ಲಿ ಬಿಡುಗಡೆಯಾದ ಲೋಕೇಶ್ ಮತ್ತು ವೈಶಾಲಿ ಕಾಸರವಳ್ಳಿ ಅಭಿನಯದ ‘ಪರಿವರ್ತನೆ’ ಚಿತ್ರಕ್ಕೆ ಅವರು ಮೊದಲ ಬಾರಿಗೆ ಸಂಗೀತ ಸಂಯೋಜಿಸಿದ್ದರು. ಅಷ್ಟೇ ಅಲ್ಲ, ಒಂದು ಹಾಡಿಗೂ ಧ್ವನಿಯಾಗಿದ್ದರು. ಈ ಚಿತ್ರವನ್ನು ವೈಶಾಲಿ ಕಾಸರವಳ್ಳಿ ಅವರ ತಂದೆ ಡಾ. ಚಿಟಗೋಪಿ ಅವರು ನಿರ್ದೇಶನ ಮಾಡಿದ್ದರು.

    ಇದನ್ನೂ ಓದಿ: ‘ರುದ್ರಪ್ರಯಾಗ’ ಚಿತ್ರದಲ್ಲಿ ನಟಿಸುವ ಬಗ್ಗೆ ಶೈನ್ ಏನಂತಾರೆ ಗೊತ್ತಾ?

    ಇನ್ನು ‘ಹಂಸಗೀತೆ’ ಚಿತ್ರಕ್ಕೆ ಅವರು ಆಲಾಪನೆ ಮಾಡಿದ್ದರು. ಇದರಲ್ಲಿ ಬುವಾ ಪಾತ್ರವನ್ನು ಕಾಡುವ ಪ್ರೇಯಸಿಯ ಕಂಠವಾಗಿ ಶ್ಯಾಮಲಾ ಭಾವೆ ಅವರ ಆಲಾಪನೆಯನ್ನು ಬಳಸಿಕೊಳ್ಳಲಾಗಿತ್ತು. ಈ ಚಿತ್ರದಲ್ಲಿ ಬಿ.ವಿ. ಕಾರಂತರು ಬುವಾ ಪಾತ್ರ ಮಾಡಿದ್ದರು.

    ಇದಲ್ಲದೆ, ‘ಪುಟ್ನಂಜ’ ಚಿತ್ರದ ‘ಪುಟ್ಮಲ್ಲಿ ಪುಟ್ಮಲ್ಲಿ …’ ಹಾಡಿನ ಒಂದು ಭಾಗವನ್ನು ಅವರಿಂದ ಹಂಸಲೇಖ ಹಾಡಿಸಿದ್ದರು ಎಂದು ಹೇಳಲಾಗುತ್ತದೆ.

    ಬೇತಾಳನ ಬೆನ್ನಿಗೆ ನಿಂತ ಶಾರುಖ್​ ಖಾನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts