More

    ನಾಟಕದಿಂದ ಸಮಾಜ ಪರಿವರ್ತನೆ ಸಾಧ್ಯ

    ಕೊಟ್ಟೂರು: ನಾಟಕ ಮತ್ತು ಸಂಗೀತಕ್ಕೆ ಸಮಾಜದಲ್ಲಿ ಸಮಾನತೆ ಸೃಷ್ಟಿಸುವ ಮತ್ತು ಪರಿವರ್ತಿಸುವ ಸಾಮರ್ಥ್ಯ ಇದೆ ಎಂದು ಗುಲ್ಬರ್ಗ ವಿವಿಯ ವಿಶ್ರಾಂತ ಕುಲಸಚಿವ ಡಾ.ಬಿ.ಸಿ.ಮಹಾಬಲೇಶ್ವರಪ್ಪ ಹೇಳಿದರು.

    ಇದನ್ನೂ ಓದಿ: ಚಳವಳಿ ರೂಪವಾಗಿವೆ ಬೀದಿ ನಾಟಕ

    ಹರಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಎಚ್.ಎನ್.ಕೊಟ್ರಪ್ಪ ರಚಿಸಿರುವ ‘ಶ್ರೀಮದಥಣಿ ಶಿವಯೋಗೀಶ್ವರ’ ನಾಟಕ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

    ಶ್ರೀಮದಥಣಿ ಶಿವಯೋಗೀಶ್ವರರು ಸಮ ಸಮಾಜ ನಿರ್ಮಾಣಕ್ಕೆ ಬದುಕನ್ನು ಸವೆಸಿದರು. ಶರಣರು, ಧರ್ಮ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಒಳಗೊಂಡ ಉತ್ತಮ ನಾಟಕವಿದು. ಮಕ್ಕಳಿಗೆ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಬಗ್ಗೆ ತಿಳಿಸಬೇಕು. ಸಂಸ್ಕಾರವನ್ನು ಕಲಿಸಬೇಕು ಎಂದರು.

    ನಾಟಕ ರಚನೆಕಾರ ಎಚ್.ಎನ್.ಕೊಟ್ರಪ್ಪ, ಬೆಣ್ಣಿಹಳ್ಳಿ ಪಂಚಾಕ್ಷರಿ ಶ್ರೀಗಳು, ಸಾಹಿತಿ ಮೇಟಿ ಕೊಟ್ರಪ್ಪ, ಗಣೇಶ ರಾವ್ ಹವಾಲ್ದಾರ್, ಕೆ.ಅಯ್ಯನಹಳ್ಳಿ ಗ್ರಾಪಂ ಅಧ್ಯಕ್ಷೆ ಹೇಮಕ್ಷಿ ರೇಣುಕಪ್ಪ, ಉಪ್ಪಾರ ಬಸಪ್ಪ, ಜಳಕಿ ಗುರುಬಸಪ್ಪ, ರೇಣುಕಪ್ಪ, ಮಠದ ಸ್ವಾಮಿ, ಬಣಕಾರ ರವಿ, ವಟ್ಟಮ್ಮನಹಳ್ಳಿ ಪಂಪಣ್ಣ, ಬಿ.ವಿ.ಮಲ್ಲೇಶ, ತಾಪಂ ಮಾಜಿ ಅಧ್ಯಕ್ಷ ಎಸ್.ಗುರುಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts