More

  ನೆಲ್ಸನ್‌ಗೆ ನಾಯಕಿ ಫಿಕ್ಸ್ ; ವಿನೋದ್ ಪ್ರಭಾಕರ್‌ಗೆ ಜೋಡಿಯಾದರು ಶ್ವೇತಾ ಡಿಸೋಜಾ

  ವಿಜಯವಾಣಿ ಸುದ್ದಿಜಾಲ ಬೆಂಗಳೂರು

  ‘ಗೊಂಬೆಗಳ ಲವ್’, ‘ದಾದಾ ಈಸ್ ಬ್ಯಾಕ್’ ಚಿತ್ರಗಳ ನಾಯಕ ಅರುಣ್ ಕುಮಾರ್ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ ಸಿನಿಮಾ ‘ನೆಲ್ಸನ್’. ವಿನೋದ್ ಪ್ರಭಾಕರ್ ಈ ಚಿತ್ರದ ನಾಯಕನಾಗಿದ್ದು, ಕೆಲ ದಿನಗಳ ಹಿಂದಷ್ಟೆ ಟೈಟಲ್ ಮತ್ತು ಅವರ ಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲಾಗಿತ್ತು. ಇದೀಗ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ.

  ಇದನ್ನೂ ಓದಿ : ಪುತ್ರಿ ಶ್ವೇತಾಗೆ ಬಂಗಲೆ ಗಿಫ್ಟ್​ ಕೊಟ್ಟ್ ಬಿಗ್​ ಬಿ!; ‘ಪ್ರತೀಕ್ಷಾ’ ನಿವಾಸದ ಬೆಲೆ ಎಷ್ಟು ಕೋಟಿ?

  ನೆಲ್ಸನ್‌ಗೆ ನಾಯಕಿ ಫಿಕ್ಸ್ ; ವಿನೋದ್ ಪ್ರಭಾಕರ್‌ಗೆ ಜೋಡಿಯಾದರು ಶ್ವೇತಾ ಡಿಸೋಜಾ

  ಕನ್ನಡದ ‘ಖಾಸಗಿ ಪುಟಗಳು’, ಹಿಂದಿಯ ‘ದಿ ವೈ’ ಚಿತ್ರಗಳಲ್ಲಿ ನಟಿಸಿರುವ ಕರಾವಳಿ ಹುಡುಗಿ ಶ್ವೇತಾ, ಸದ್ಯ ‘ಹೆಜ್ಜಾರು’ ಚಿತ್ರದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಅದರ ನಡುವೆ ಇದೀಗ ‘ನೆಲ್ಸನ್’ಗೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಲಂಗ-ದಾವಣಿಯುಟ್ಟು ಹಳ್ಳಿ ಹುಡುಗಿ ಲಕ್‌ನಲ್ಲಿ ಶ್ವೇತಾ ಕಾಣಿಸಿಕೊಳ್ಳಲಿದ್ದಾರೆ.

  ಇದನ್ನೂ ಓದಿ : VIDEO | BBKS10: ಒಂದು ವಾರಕ್ಕೆ ಇಶಾನಿ ಪಡೆದ ಸಂಭಾವನೆ ಎಷ್ಟು?; ಇಲ್ಲಿದೆ ಕೇಳಿ ಅಸಲಿ ಸಂಗತಿ!

  ನೆಲ್ಸನ್‌ಗೆ ನಾಯಕಿ ಫಿಕ್ಸ್ ; ವಿನೋದ್ ಪ್ರಭಾಕರ್‌ಗೆ ಜೋಡಿಯಾದರು ಶ್ವೇತಾ ಡಿಸೋಜಾ

  ಇದು 1960ರಿಂದ 90ರ ದಶಕದವರೆಗೆ ಚಾಮರಾಜನಗರದಲ್ಲಿ ನಡೆಯುವ ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಗ್ಯಾಂಗ್‌ಸ್ಟರ್ ಕಥಾಹಂದರ ಹೊಂದಿದೆ. ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ‘ರಕ್ತದಲ್ಲಿ ನೆಂದ ದೇವರಕಾಡು’ ಎಂಬ ಅಡಿಬರಹವಿದೆ. ಚಿತ್ರಕ್ಕೆ ಪ್ರಜ್ವಲ್ ಗೌಡ ಛಾಯಾಗ್ರಹಣ, ಭರತ್ ಬಿ.ಜಿ. ಸಂಗೀತ, ವಿಜಯ್ ರಾಜ್ ಸಂಕಲನ ಹಾಗೂ ಹರಿ ಸಂಭಾಷಣೆ ಇರಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts