More

    ಸುಶಾಂತ್​ ಸಿಂಗ್​ ಸತ್ತು ನಾಲ್ಕು ತಿಂಗಳು…ಏಕಾಏಕಿ ತಮ್ಮ ಟ್ವಿಟರ್​, ಇನ್ಸ್ಟಾ ಖಾತೆ ಡಿಲೀಟ್​ ಮಾಡಿದ ಶ್ವೇತಾ

    ನಟ ಸುಶಾಂತ್​ ಸಿಂಗ್​ ರಜಪೂತ್ ಅವರು ಮೃತಪಟ್ಟು ನಾಲ್ಕು ತಿಂಗಳು ಕಳೆಯಿತು. ಅವರದ್ದು ಆತ್ಮಹತ್ಯೆಯೋ..ಕೊಲೆಯೋ ಎಂಬ ಸ್ಪಷ್ಟ ನಿರ್ಧಾರಕ್ಕೇ ಇನ್ನೂ ಬರಲಾಗಲಿಲ್ಲ.

    ಸುಶಾಂತ್ ಕುಟುಂಬದವರು ತಮ್ಮ ಮನೆಯ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಸುಶಾಂತ್ ಸಹೋದರಿ ಶ್ವೇತಾ ಸಿಂಗ್​ ಕೀರ್ತಿ ಸಾಮಾಜಿಕ ಜಾಲತಾಣಗಳ ಮೂಲಕ ನ್ಯಾಯಕ್ಕಾಗಿ ಆಗ್ರಹಿಸುತ್ತಲೇ ಬಂದಿದ್ದಾರೆ.  ಇದನ್ನೂ ಓದಿ:‘ ನನ್ನ ಗಂಡನ ಹೆಸರು ತುಂಬ ಉದ್ದ…ನನ್ನ ಬೆರಳು ಸಣ್ಣ…’: ಅಲವತ್ತುಕೊಂಡ ಕಿರುತೆರೆ ನಟಿ

    ಇಂದು ಅಕ್ಟೋಬರ್​ 14. ಸುಶಾಂತ್​ ಸಿಂಗ್​ ಸಾವನ್ನಪ್ಪಿ 4 ತಿಂಗಳಾಯಿತು. ಹೀಗಿರುವಾಗ ಇಂದು ಸುಶಾಂತ್​ ಸಹೋದರಿ ಶ್ವೇತಾ ಅವರು, ತಮ್ಮ ಇನ್ಸ್ಟಾಗ್ರಾಂ, ಟ್ವಿಟರ್ ಖಾತೆಗಳನ್ನು ಡಿಲೀಟ್​ ಮಾಡಿದ್ದಾರೆ. ಶ್ವೇತಾ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಡಿಲೀಟ್ ಮಾಡಲು ಕಾರಣ ಏನು ಎಂಬುದನ್ನು ಕುಟುಂಬದವರು ಸ್ಪಷ್ಟಪಡಿಸಿಲ್ಲ.

    ಕಳೆದ ರಾತ್ರಿಯಷ್ಟೇ ಶ್ವೇತಾ ತಮ್ಮ ಸೋದರ ಸುಶಾಂತ್​ ಅವರ ಸ್ಫೂರ್ತಿದಾಯಕ ವಿಡಿಯೋವೊಂದನ್ನು ಇನ್ಸ್ಟಾದಲ್ಲಿ ಶೇರ್​ ಮಾಡಿ, ಸುಶಾಂತ್​ ಸಿಂಗ್​ರನ್ನು ನೆನಪಿಸಿಕೊಂಡಿದ್ದರು. ಆ ವಿಡಿಯೋದಲ್ಲಿ ನಟ ಸೈಕ್ಲಿಂಗ್​, ಜಾಗಿಂಗ್​ ಮಾಡುವುದನ್ನು ನೋಡಬಹುದು. ಇದನ್ನೂ ಓದಿ: ಹೆತ್ತವರ ಕಣ್ಣೆದುರಲ್ಲೇ 22 ವರ್ಷದ ಅಣ್ಣನನ್ನು ಭೀಕರವಾಗಿ ಕೊಂದೇ ಬಿಟ್ಟ ತಮ್ಮ!

    ಸದ್ಯ ಸಿಬಿಐ ಸುಶಾಂತ್​ ಸಾವಿನ ತನಿಖೆ ನಡೆಸುತ್ತಿದ್ದು, ಏಮ್ಸ್​ ವೈದ್ಯರ ತಂಡ ಇದೊಂದು ಆತ್ಮಹತ್ಯೆ ಎಂಬ ವರದಿಯನ್ನೂ ನೀಡಿದೆ. ಆದರೂ ಕುಟುಂಬದ ವಕೀಲರು ಸೇರಿ ಇನ್ನೂ ಕೆಲವರು ಇದು ಖಂಡಿತ ಆತ್ಮಹತ್ಯೆಯಲ್ಲ. ಕೊಲೆ ಎಂದೇ ಪ್ರತಿಪಾದಿಸುತ್ತಿದ್ದಾರೆ. (ಏಜೆನ್ಸೀಸ್​)

    ‘ಇಲ್ಲಿರುವ ತರುಣರು..ಸುಂದರ ಮಹಿಳೆಯರನ್ನು ಚುಂಬಿಸಬೇಕು ಎನ್ನಿಸುತ್ತಿದೆ’ ಎಂದ್ರು ಡೊನಾಲ್ಡ್ ಟ್ರಂಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts