More

    ಮನಸ್ಸು ಕಲ್ಲಾಗಿಸಿಕೊಂಡು ಮೃತ ಶಿಶುವನ್ನು ನಾಲೆಗೆಸೆದ ತಂದೆ; ಕಾರಣ ಅಮಾನವೀಯ ಗ್ರಾಮಸ್ಥರು…!

    ಕರ್ನೂಲ್​: ಮನೆಗೆ ಹೊಸ ಅತಿಥಿಯ ಆಗಮನವಾಗುತ್ತೆ. ನಮ್ಮ ಬದುಕಿಗೆ ಹೊಸ ಭರವಸೆ ಮೂಡುತ್ತೆ ಎಂಬ ಹೆಬ್ಬಯಕೆಯೊಂದಿಗೆ ಪತ್ನಿಯನ್ನು ಹೆರಿಗಾಗಿ ದಾಖಲಿಸಿದ್ದ. ಆದರೆ, ವಿಧಿಯಾಟ ಮಗು ಬದುಕುಳಿಯಲ್ಲ. ಅದಕ್ಕಿಂತ ಘೋರವೆಂದರೆ, ಆ ಮಗುವಿಗೆ ಮಣ್ಣಾಗುವ ಅವಕಾಶವೂ ಸಿಗಲಿಲ್ಲ.

    ನಂದ್ಯಾಲ್​ದ ಸಿರಿವೆಲ್ಲಾ ಬ್ಲಾಕ್​ನ ಕೊಟಪಾಡು ಗ್ರಾಮದ ನಿವಾಸಿ ಶಂಷಾ ವಲಿ ನಂದ್ಯಾಲ್​ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಗಂದು ಪತ್ನಿ ಮಾದರ್​ಬೀಯನ್ನು ದಾಖಲಿಸಿದ್ದ. ಆದರೆ, ಮಗು ಬದುಕುಳಿಯಲಿಲ್ಲ. ಕೊನೆಗೆ ತನ್ನೂರಿನವರಿಗೆ ಮಾಹಿತಿ ನೀಡಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಹೇಳಿದ್ದ. ಆದರೆ, ಇದಕ್ಕೆ ಗ್ರಾಮದ ಹಿರಿಯರು ಒಪ್ಪಲೇ ಇಲ್ಲ.

    ನಂದ್ಯಾಲ್​ದಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗಿದ್ದು. ಮಗುವಿನ ಸಾವಿಗೆ ಕರೊನಾ ಕಾರಣವಾಗಿರಬಹುದು ಎಂದು ತಕರಾರು ತೆಗೆದಿದ್ದಾರೆ. ಗ್ರಾಮದಲ್ಲಿ ಅಂತ್ಯಕ್ರಿಯೆಗೆ ಅವಕಾಶ ನೀಡುವುದಿಲ್ಲ ಅಮಾನವೀಯವಾಗಿ ವರ್ತಿಸಿದ್ದಾರೆ.

    ಇದನ್ನೂ ಓದಿ; ದೇಶೀಯ ಕರೊನಾ ಲಸಿಕೆ ಪ್ರಯೋಗಕ್ಕೆ ಸಿದ್ಧರಿದ್ದೀರಾ? ಈ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಿ

    ಬೇರೆ ದಾರಿ ಕಾಣದೇ, ಊರಿಗೆ ಬರುವ ದಾರಿಯಲ್ಲಿ ಕರ್ನೂಲ್​- ಕಡಪಾ ನೀರಾವರಿ ಕಾಲುವೆಗೆ ಶಿಶುವನ್ನು ತಂದೆಯೇ ಎಸೆದಿದ್ದಾನೆ. ನೀರಿನಲ್ಲಿ ಮಗುವಿನ ಶವ ತೇಲುತ್ತಿರುವುದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಶಿಶುವಿನ ಮೈಮೇಲಿದ್ದ ಟ್ಯಾಗ್​ನಿಂದಾಗಿ ಪೊಲೀಸರು ಪಾಲಕರನ್ನು ಗುರುತಿಸಿದ್ದಾರೆ. ನಾನೇಕೆ ಇಂಥ ಕೃತ್ಯ ಎಸಗಿದೆ ಎನ್ನುವುದಕ್ಕೆ ತಂದೆ ನಡೆದ ಕಥೆಯನ್ನೆಲ್ಲ ಹೇಳಿದ್ದಾನೆ.

    ಇದನ್ನೂ ಓದಿ; ಕಂಟೇನರ್​ನಲ್ಲಿ ಕೊಡ್ತಾರಾ ಕರೊನಾ ರೋಗಿಗಳಿಗೆ ಚಿಕಿತ್ಸೆ? ಹೇಗಿರುತ್ತೆ ಮಾಡ್ಯೂಲರ್​ ಐಸಿಯು

    ಕೊನೆಗೆ, ಗ್ರಾಮಸ್ಥರ ಮನವೊಲಿಸಿದ ಪೊಲೀಸರು, ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದ್ದಾರೆ. ಪಾಲಕರ ವಿರುದ್ಧ ಯಾವುದೇ ಕೇಸ್​ ದಾಖಲಾಗಿಲ್ಲ.

    ಕರೊನಾಕ್ಕೆ ನಾವೇಕೆ ಹೆದರಬೇಕಿಲ್ಲ; ಸೆಪ್ಟಂಬರ್​ವರೆಗೆ ಹೇಗಿರಲಿದೆ ಪರಿಸ್ಥಿತಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts