More

    Saaraamsha Review : ಪ್ರಯೋಗಾತ್ಮಕ ಕಥೆಯಲ್ಲಿ ಬದುಕಿನ ತತ್ವ

    ಚಿತ್ರ: ಸಾರಾಂಶ
    ನಿರ್ದೇಶನ: ಸೂರ್ಯ ವಸಿಷ್ಠ
    ನಿರ್ಮಾಣ: ರವಿ ಕಶ್ಯಪ್​
    ತಾರಾಗಣ: ದೀಪಕ್​ ಸುಬ್ರಮಣ್ಯ, ಸೂರ್ಯ ವಸಿಷ್ಠ, ಶ್ರುತಿ ಹರಿಹರನ್​, ಆಸ್​ಿ ಕ್ಷತ್ರಿಯ, ರವಿ ಭಟ್​, ಶ್ವೇತಾ ಗುಪ್ತ ಮತ್ತು ಮುಂತಾದವರು.

    | ಹರ್ಷವರ್ಧನ್​ ಬ್ಯಾಡನೂರು

    “ನಮ್ಮೊಳಗೆ ಉಪಪ್ರಜ್ಞೆಯಿರುತ್ತದೆ. ಅದು ನಮ್ಮನ್ನು ನಾವು ನೋಡಿಕೊಳ್ಳುವ ಕತ್ತಲು, ಬೆತ್ತಲು ಜಾಗ. ಅಲ್ಲಿ ನಾವು ನೋಡುವ ಸತ್ಯ ಜಾಗೃತ ಜಗತ್ತಿನಲ್ಲಿ ನೋಡಲಾಗುವುದಿಲ್ಲ’ ಎಂದು ಅಭಯ್​ ಶರ್ಮಾ (ಸೂರ್ಯ) ತಂದೆ ಸಂಜೀವ್​ (ರವಿ), ತೇಜಸ್ವಿ ಪಂಡಿತ್​ಗೆ (ದೀಪಕ್​) ಹೇಳುತ್ತಾರೆ. “ಸಾರಾಂಶ’ ಚಿತ್ರದ ಕಥೆ ಉಪಪ್ರಜ್ಞೆ ಮತ್ತು ಜಾಗೃತ ಜಗತ್ತಿನ ನಡುವಿನ ಸಂರ್ಷಗಳ ನಡುವೆ ಸಾಗುತ್ತದೆ. ಅದನ್ನು ಪ್ರಯೋಗಾತ್ಮಕವಾಗಿ, ಫಿಲಾಸಫಿಗಳ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಸೂರ್ಯ ವಸಿಷ್ಠ.

    Saaraamsha Review : ಪ್ರಯೋಗಾತ್ಮಕ ಕಥೆಯಲ್ಲಿ ಬದುಕಿನ ತತ್ವ


    ಆತ ತೇಜಸ್ವಿ. ನಾರಾಯಣ್​ (ಆಸ್​ಿ) ಮತ್ತು ಐಶ್ವರ್ಯ ದತ್ತುಪುತ್ರ. ಸಣ್ಣ ವಯಸ್ಸಿನಲ್ಲೇ ಈ ವಿಷಯ ಗೊತ್ತಾಗಿ, ತಂದೆ&ತಾಯಿಯಿಂದ ಮಾನಸಿಕವಾಗಿ ದೂರವಾಗುತ್ತಾನೆ. ಆತನಿಗೆ ಬರಹಗಾರನಾಗುವ ಆಸೆ. ಆದರೆ, ತನ್ನಂತೆಯೇ ಮಗನೂ ಸಿಎ ಆಗಬೇಕೆನ್ನುವಾಸೆ ತಂದೆಯದು. ಅದರಂತೆ ಸಾಹಿತ್ಯದಿಂದ ದೂರಾಗಿ ಸಿಎ ಆಗುವ ತೇಜಸ್ವಿ, ಕೆಲವೇ ದಿನಗಳಲ್ಲಿ ಕೆಲಸ ಕಳೆದುಕೊಳ್ಳುತ್ತಾನೆ. ಮತ್ತೊಂದೆಡೆ ನವದಂಪತಿ ಅಭಯ್​ ಶರ್ಮಾ (ಸೂರ್ಯ) ಮತ್ತು ಮಾಯಾ (ಶ್ರುತಿ) ನಡುವಿನ ಸರಸ, ವಿರಸದ ಕಥೆ ಸಾಗುತ್ತಿರುತ್ತದೆ. ಅಭಯ್​ ಮೇಲೆ ತಂದೆಗೆ ಅತಿಯಾದ ನಿರೀೆ. ತಾನೇನೇ ಮಾಡಿದರೂ ಅಪ್ಪನಿಗೆ ಖುಷಿಯಾಗುತ್ತಿಲ್ಲವಲ್ಲಾ ಎಂಬ ನೋವಿನಲ್ಲಿ ಅಭಯ್​ ಚಿಕ್ಕ ವಯಸ್ಸಿನಲ್ಲೇ ಮನೆ ಬಿಟ್ಟಿರುತ್ತಾನೆ. ಎರಡು ಕಥೆಗಳೂ ಒಂದಕ್ಕೊಂದು ಬೆಸೆದುಕೊಂಡು ಸಾಗುತ್ತವೆ. ಆದರೆ, ಅದರಲ್ಲೊಂದು ವಾಸ್ತವ ಮತ್ತೊಂದು ಕಾಲ್ಪನಿಕ. ಕಥೆಗಾರನಿಗೆ ಆತ ಸೃಷ್ಟಿಸಿದ ಪಾತ್ರವೇ ಬುದ್ಧಿ ಹೇಳುತ್ತದೆ. ಕಥೆಗಾರ ಮತ್ತು ಪಾತ್ರ ಒಬ್ಬರಿಗೊಬ್ಬರು ಸಪೋರ್ಟ್​ ಮಾಡುತ್ತಾ, ತಮ್ಮ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳುತ್ತಾರೆ ಎಂಬುದೇ “ಸಾರಾಂಶ’.

    Saaraamsha Review : ಪ್ರಯೋಗಾತ್ಮಕ ಕಥೆಯಲ್ಲಿ ಬದುಕಿನ ತತ್ವ


    ಟೈಟಲ್​ ಕಾರ್ಡ್​ನಲ್ಲೇ ವಿಭಿನ್ನತೆ ತೋರಿರುವ ನಿರ್ದೇಶಕ ಸೂರ್ಯ ವಸಿಷ್ಠ ಮೊದಲ ಪ್ರಯತ್ನದಲ್ಲಿಯೇ ಉತ್ತಮ ಪ್ರಯೋಗ ಮಾಡಿದ್ದಾರೆ. ಜತೆಗೆ ಬದುಕಿನ ಫಿಲಾಸಫಿ ಹೇಳಿದ್ದಾರೆ. ನಟನೆಯಲ್ಲೂ ಅವರು ಹಿಂದೆ ಬಿದ್ದಿಲ್ಲ. ಆದರೆ, ಅಂತಮುರ್ಖಿ ತೇಜಸ್ವಿ ಪಾತ್ರದಲ್ಲಿ ದೀಪಕ್​ ಸುಬ್ರಮಣ್ಯ ಅಭಿನಯ ಇಷ್ಟವಾಗುತ್ತದೆ. ಉಳಿದಂತೆ ಶ್ರುತಿ ಹರಿಹರನ್​, ಶ್ವೇತಾ ಗುಪ್ತ, ರವಿ ಭಟ್​, ಆಸ್​ಿ ತಮ್ಮ ಪಾತ್ರಗಳಿಗೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. ಉದಿತ್​ ಹರಿತಾಸ್​ ಸಂಗೀತ, ಅನಂತ್​ ಭಾರದ್ವಾಜ್​ ಛಾಯಾಗ್ರಹಣ ಚಿತ್ರಕ್ಕೆ ಪ್ಲಸ್​. ಇದು ಕನ್ನಡ, ಇಂಗ್ಲೀಷ್​ ಸಾಹಿತ್ಯ ಮತ್ತು ಸಿನಿಮಾ ಪ್ರೇಮಿಗಳಿಗೆ ಹತ್ತಿರವಾಗುವ ಚಿತ್ರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts