More

    ವೀರಶೈವರ ಪಾಲಿನ ವ್ಯಾಸರು ಶ್ರೀಪತಿ ಪಂಡಿತಾರಾಧ್ಯರು: ಶ್ರೀಶೈಲ ಜಗದ್ಗುರುಗಳ ಅಭಿಮತ

    ಬೆಂಗಳೂರು: ಭಾರತದ ಸನಾತನ ಸಂಸ್ಕೃತಿಗೆ ಆಧಾರ ಪುರಾತನ ವೇದಾಗಮಗಳು. ಆ ವೇದಾಗಮ ಉಪನಿಷತ್ತುಗಳನ್ನು ಕ್ರಮಬದ್ಧವಾಗಿ ವಿಂಗಡಿಸಿಕೊಟ್ಟ ವೇದವ್ಯಾಸರು ಗುರುವಿನ ಪ್ರತೀಕವಾಗಿದ್ದು, ಆ ಕಾರಣಕ್ಕಾಗಿಯೇ ಗುರುಪೂರ್ಣಿಮೆಯನ್ನು ವ್ಯಾಸಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಅಂತಹ ವ್ಯಾಸರು ರಚಿಸಿದ ಬ್ರಹ್ಮಸೂತ್ರಕ್ಕೆ ಪ್ರಪ್ರಥಮವಾಗಿ ವೀರಶೈವ ಪರವಾದ ವ್ಯಾಖ್ಯಾನವನ್ನು ಬರೆದ ಶ್ರೀಶೈಲ ಜಗದ್ಗುರು ಶ್ರೀಪತಿ ಪಂಡಿತಾರಾಧ್ಯರು ವೀರಶೈವರ ಪಾಲಿನ ವ್ಯಾಸರು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯ ಪಟ್ಟಿದ್ದಾರೆ.

    ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಗುರುಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿರುವ ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಜಗತ್ತಿನ ಅಂಧಕಾರವನ್ನು ನಿವಾರಿಸಲು ಶಸ್ತ್ರವನ್ನು ತ್ಯಾಗ ಮಾಡಿ ಶಾಸ್ತ್ರವನ್ನು ಹಿಡಿದು ಅವತರಿಸಿದ ಭಗವಂತನೇ ಗುರು. ಹಾಗೆ ಪರಮಾತ್ಮ ಗುರುವಿನ ರೂಪದಲ್ಲಿ ಅವತರಿಸಿದ ದಿನವನ್ನು ಗುರುಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಜ್ಞಾನದ ಸಂಕೇತವಾಗಿರುವ ಗುರುವಿನಿಂದಾಗಿ ಜಗತ್ತಿನ ಅಜ್ಞಾನ ನಾಶವಾಗುತ್ತಿದೆ. ಹಾಗೆ ಜ್ಞಾನದಿಂದ ಜಗತ್ತನ್ನು ಬೆಳಗಿದವರಲ್ಲಿ ವ್ಯಾಸರು ಅಗ್ರಗಣ್ಯರು ಎಂದರು.

    ವ್ಯಾಸರ ಬ್ರಹ್ಮಸೂತ್ರಕ್ಕೆ ಎಲ್ಲ ಸಿದ್ಧಾಂತಗಳ ಆಚಾರ್ಯರು ವ್ಯಾಖ್ಯಾನ ಬರೆದಿದ್ದು, ವೀರಶೈವರ ಪರವಾಗಿ ಜಗದ್ಗುರು ಶ್ರೀಪತಿ ಪಂಡಿತಾರಾಧ್ಯರು ಬರೆದ ಮಹಾನ್ ಗ್ರಂಥ ಶ್ರೀಕರ ಭಾಷ್ಯ. ಆ ಕಾರಣಕ್ಕಾಗಿ ವೀರಶೈವ ಸಂಸ್ಕಾರಗಳಿಗೆ ಆಕರವಾಗಿರುವ ಶ್ರೀಕರ ಭಾಷ್ಯದ ಕರ್ತೃ ಶ್ರೀಪತಿ ಪಂಡಿತಾರಾಧ್ಯರ ಜಯಂತಿಯನ್ನು ಗುರುಪೂರ್ಣಿಮೆಯಂದು ಆಚರಿಸಲಾಗುತ್ತದೆ ಎಂದು ಜಗದ್ಗುರುಗಳು ವಿವರಿಸಿದರು.

    ಸಮಾರಂಭದಲ್ಲಿ ಶಿವಗಂಗೆ, ವಿಭೂತಿಪುರ, ಜಮಖಂಡಿ, ಅಂಬಿಕಾನಗರ ಸೇರಿದಂತೆ ವಿವಿಧ ಮಠಾಧೀಶರು, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ಮತ್ತಿತರರು ಉಪಸ್ಥಿತರಿದ್ದರು.

    ಟ್ವಿಟರ್ ಟ್ರೆಂಡಿಂಗ್​ನಲ್ಲಿ ಪುನೀತ್ ರಾಜಕುಮಾರ್​; ವೈರಲ್ ಆಗುತ್ತಿದೆ ಲಕ್ಕಿಮ್ಯಾನ್ ಲುಕ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts