More

    ತೆಲುಗಿನ ರವಿತೇಜಗೆ ‘ಕಿಸ್’ ಬೆಡಗಿ ಶ್ರೀಲೀಲಾ ನಾಯಕಿ

    ಬೆಂಗಳೂರು: ಕನ್ನಡದ ನಟಿಯರಿಗೆ ಪರಭಾಷೆಗಳಲ್ಲಿ ಸಖತ್ ಡಿಮಾಂಡ್ ಸೃಷ್ಟಿಯಾಗಿದೆ. ತೆಲುಗು, ತಮಿಳಿನಲ್ಲಿ ರಶ್ಮಿಕಾ ಮಂದಣ್ಣ ಕೈಯಲ್ಲಿ ಸಿನಿಮಾಗಳ ಗೊಂಚಲೇ ಇದ್ದರೆ, ನಭಾ ನಟೇಶ್ ಸಹ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಆ ಸಾಲಿಗೆ ಸೇರಲು ‘ಕಿಸ್’ ಬೆಡಗಿ ಶ್ರೀಲೀಲಾ ಸಜ್ಜಾಗುತ್ತಿದ್ದಾರೆ. ಕನ್ನಡದ ಜತೆಗೆ ತೆಲುಗಿನಲ್ಲಿಯೂ ಒಳ್ಳೊಳ್ಳೆ ಅವಕಾಶಗಳು ಅವರನ್ನು ಅರಸಿ ಬರುತ್ತಿದ್ದು, ಇದೀಗ ಅಲ್ಲಿನ ಸ್ಟಾರ್ ನಟ ರವಿತೇಜ ಸಿನಿಮಾಕ್ಕೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ಟಾಲಿವುಡ್ ನಟ ಶ್ರೀಕಾಂತ್ ಪುತ್ರ ರೋಷನ್ ಮೇಕ ನಟಿಸುತ್ತಿರುವ ‘ಪೆಳ್ಳಿ ಸಂದದಿ’ ಸಿನಿಮಾದಲ್ಲಿ ಶ್ರೀಲೀಲಾ ಈಗಾಗಲೇ ನಟಿಸುತ್ತಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ಸಹ ಮುಗಿಸಿದ್ದಾರೆ. ಇದೀಗ ಆ ಸಿನಿಮಾ ಬಿಡುಗಡೆಗೂ ಮುನ್ನವೇ ಮತ್ತೊಂದು ಸಿನಿಮಾಕ್ಕೆ ಸಹಿ ಮಾಡಿರುವ ಶ್ರೀಲೀಲಾ, ಮೇ ತಿಂಗಳಿಂದ ರವಿತೇಜ ಜತೆಗೆ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲಿದ್ದಾರೆ. ಮಲಯಾಳಂನ ಐಶ್ವರ್ಯಾ ಮೆನನ್ ಸಹ ಈ ಚಿತ್ರಕ್ಕೆ ಇನ್ನೊಬ್ಬ ನಾಯಕಿಯಾಗಿದ್ದಾರೆ. ಸದ್ಯ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಆರ್​ಟಿ 68’ ಎಂಬ ಶೀರ್ಷಿಕೆ ಇಟ್ಟಿದ್ದು, ಶೀಘ್ರದಲ್ಲಿಯೇ ಟೈಟಲ್ ಅನಾವರಣ ಮಾಡಲಿದೆ ಚಿತ್ರತಂಡ. ಈ ಚಿತ್ರಕ್ಕೆ ತ್ರಿನಂದ ರಾವ್ ನಕ್ಕಿನ ನಿರ್ದೇಶನ ಮಾಡಲಿದ್ದು, ಈ ಹಿಂದೆ ‘ಹಲೋ ಗುರು ಪ್ರೇಮ ಕೋಸಮ’ ಸೇರಿ ಹಲವು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ ಅನುಭವ ಇವರಿಗಿದೆ. ಕುಮಾರ್ ಬೇಜ್ವಾಡಾ ಈ ಸಿನಿಮಾಕ್ಕೆ ಕಥೆ- ತ್ರಕಥೆ ಬರೆದಿದ್ದಾರೆ. ಇತ್ತ ಕನ್ನಡದಲ್ಲಿ ‘ಬೈಟು ಲವ್’ ಸಿನಿಮಾದಲ್ಲಿ ಧನ್ವೀರ್​ಗೆ ಜೋಡಿಯಾಗಿರುವ ಶ್ರೀಲೀಲಾ, ಧ್ರುವ ಸರ್ಜಾ ಜತೆಗಿನ ‘ದುಬಾರಿ’ ಚಿತ್ರಕ್ಕೂ ನಾಯಕಿಯಾಗಿದ್ದಾರೆ. ಏಪ್ರಿಲ್​ಗೆ ಈ ಚಿತ್ರದ ಶೂಟಿಂಗ್ ಶುರುವಾಗುವ ಸಾಧ್ಯತೆ ಇದ್ದು, ನಂದಕಿಶೋರ್ ನಿರ್ದೇಶಿಸಲಿದ್ದಾರೆ.

    ಅಯ್ಯೋ ಅವ್ನ ಮದ್ವೆಯಾಗಿದೆ ಅಂತ ಗೊತ್ತಿದ್ರೆ ಅವ್ನ ಜತೆ ಹೀಗೆಲ್ಲಾ ಮಾಡ್ತಾನೇ ಇರ್ಲಿಲ್ಲ: ಕಣ್ಣೀರಿಟ್ಟ ರಾಖಿ ಸಾವಂತ್​

    ಮಾಧ್ಯಮ ವರದಿಗೆ ಸಿಡಿಮಿಡಿಗೊಂಡು ಸ್ಯಾಂಡಲ್​ವುಡ್​ ಕರಾಳ ಮುಖ ಬಿಚ್ಚಿಟ್ಟ ಜಗ್ಗೇಶ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts